Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Team Udayavani, Jan 9, 2025, 10:59 AM IST
ಬೆಂಗಳೂರು: ನಗರದಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ನಡುರಸ್ತೆಯಲ್ಲಿ ಕಾರೊಂದನ್ನು ಅಡ್ಡಗಟ್ಟಿದ ಮೂವರು ಯುವಕರು ಕಾರಿನ ಬಾನೆಟ್ ಮೇಲೆ ಹತ್ತಿ, ಕಾರಿನ ವಿಂಡ್ ಚೀಲ್ಡ್ಗೆ ಕಾಲಿನಿಂದ ಒದ್ದು ಪುಂಡಾಟ ಮಾಡಿರುವ ಘಟನೆ ಕೋರಮಂಗಲ ವ್ಯಾಪ್ತಿಯಲ್ಲಿ ನಡೆದಿದೆ.
2024ರ ಡಿ.28ರಂದು ಕೋರಮಂಗಲ ಬಳಿ ಘಟನೆ ನಡೆದಿದ್ದು, ಮತ್ತೂಂದು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಆರೋಪಿಗಳ ದೌರ್ಜನ್ಯದ ದೃಶ್ಯ ಸೆರೆ ಆಗಿದೆ. ಈ ವಿಡಿಯೊವನ್ನು ಥರ್ಡ್ ಐ ಎಂಬ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಅಪ್ಲೋಡ್ ಮಾಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಕಾರಿನ ಚಾಲಕ ಮುಖ್ಯರಸ್ತೆಯಲ್ಲಿ ವೇಗವಾಗಿ ಕಾರನ್ನು ಚಾಲನೆ ಮಾಡಿ ಕೊಂಡು ತೆರಳುತ್ತಾನೆ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ನಡುರಸ್ತೆಯಲ್ಲೇ ಕಾರನ್ನು ಅಡ್ಡ ಗಟ್ಟುತ್ತಾರೆ. ಒಬ್ಬ ಕಾರು ಚಾಲಕನನ್ನು ಕೆಳಕ್ಕೆ ಇಳಿಯು ವಂತೆ ಡೋರ್ ತೆಗೆಯಲು ಮುಂದಾಗಿದ್ದಾನೆ. ಮತ್ತೂಬ್ಬ ಕಾರಿನ ಬಾನೆಟ್ ಮೇಲೇರಿ, ವಿಂಡ್ ಶೀಲ್ಡ್ ಒದ್ದು ಆಕ್ರೋಶ ಹೊರಹಾಕಿದ್ದಾನೆ. ಬಳಿಕ ಸಿಗ್ನಲ್ ತೆರವಾಗುತ್ತಿದ್ದಂತೆ ಕಾರಿನ ಚಾಲಕ ವೇಗವಾಗಿ ಕಾರು ಚಲಾಯಿಸಿಕೊಂಡು ಮುಂದಕ್ಕೆ ಸಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಪಕ್ಕದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.