ಬೆಂಗಳೂರಿನಲ್ಲಿ ರೋಬೋಟಿಕ್ ಹೈಟೆಕ್ ಆಸ್ಪತ್ರೆ
"ವರ್ಲ್ಡ್ ದುಬೈ ಎಕ್ಸ್‌ಪೋ" ನಲ್ಲಿ ಹೂಡಿಕೆದಾರರೊಂದಿಗೆ ಚರ್ಚೆ ನಡೆಸಿದ ಸಚಿವ ಅಶ್ವತ್ಥನಾರಾಯಣ
Team Udayavani, Oct 18, 2021, 12:05 PM IST
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಮೈತ್ರಾ ಆಸ್ಪತ್ರೆಗಳ ಸಮೂಹವು ಬೆಂಗಳೂರಿನಲ್ಲಿ ರೋಬೋಟಿಕ್ ತಂತ್ರಜ್ಞಾನವನ್ನು ಆಧರಿಸಿದ ಹೈಟೆಕ್ ಆಸ್ಪತ್ರೆಯನ್ನು ಸ್ಥಾಪಿಸಲು ಮುಂದೆ ಬಂದಿದ್ದು, ಇದಕ್ಕೆ ರಾಜ್ಯ ಸರಕಾರವು ಎಲ್ಲ ಬೆಂಬಲವನ್ನೂ ನೀಡಲಿದೆ.
ಈ ಮೂಲಕ ಬೆಂಗಳೂರಿನ ಮುಕುಟಕ್ಕೆ ವಿಶ್ವ ದರ್ಜೆಯ ಇನ್ನೊಂದು ಆಸ್ಪತ್ರೆ ಸೇರ್ಪಡೆಯಾಗಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ದುಬೈನಲ್ಲಿ ನಡೆಯುತ್ತಿರುವ “ವರ್ಲ್ಡ್ ದುಬೈ ಎಕ್ಸ್‌ಪೋ -2020′ ವಾಣಿಜ್ಯ ಮೇಳದ ಎರಡನೇ ದಿನವಾದ ಭಾನುವಾರ ಹೂಡಿಕೆದಾರರು ಮತ್ತು ಜಾಗತಿಕ ಮಟ್ಟದ ಕಂಪನಿಗಳ ಸಿಇಒಗಳ ಜತೆ ಮಾತನಾಡಿದರು.
ರೋಬೋಟಿಕ್ ತಂತ್ರಜ್ಞಾನ ದ ಮೂಲಕ ಶಸ್ತ್ರ ಚಿಕಿತ್ಸೆ ಮಾಡುವುದು ಹೆಚುÌ ಜನಪ್ರಿಯ ವಾಗಿದ್ದು ಅಂತಹ ಸೇವೆ ನೀಡಲು ಮುಂದೆ ಬರುವವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕರ್ನಾಟಕ ಅತ್ಯಾಧುನಿಕ ತಂತ್ರಜ್ಞಾನ ಧಾರೆಗಳ ಜೊತೆಗೆ ಉದ್ಯಮಸ್ನೇಹಿ ನೀತಿಗಳನ್ನು ಹೊಂದಿದ್ದು, ಹೂಡಿಕೆದಾರರಿಗೆ ಪ್ರಶಸ್ತ ತಾಣವಾಗಿದೆ. ಉದ್ಯಮಿಗಳು ಈ ಉಜ್ವಲ ಅವಕಾಶವನ್ನು ಸದುಪ ಯೋಗ ಪಡಿಸಿಕೊಳ್ಳಲು ರಾಜ್ಯದಲ್ಲಿ ಬಂಡವಾಳ ಹೂಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:– ಸ್ವಯಂ ಉದ್ಯೋಗ ಕೈಗೊಳ್ಳಿ: ಗುತ್ತೇದಾರ
ರಾಜ್ಯವು ಇತರೆ ವಲಯಗಳ ಜೊತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿದೆ. ಇದಕ್ಕೆ ಪೂರಕವಾಗಿ ನಮ್ಮ ಸರಕಾರವು ಕೇಂದ್ರ ಸರಕಾರದೊಂದಿಗೆ ಸೇರಿಕೊಂಡು ಸುಗಮ ವಾಣಿಜ್ಯ ಸಂಸ್ಕೃತಿಯನ್ನು ರೂಪಿಸಲು ಶ್ರಮಿಸುತ್ತಿದೆ. ಜೊತೆಗೆ ಭೂಮಿಯ ಲಭ್ಯತೆ, ಕಾರ್ಮಿಕ ಕಾನೂನುಗಳು ಮತ್ತು ದುಬಾರಿ ಉತ್ಪಾದನಾ ವೆಚ್ಚದ ಸವಾಲುಗಳನ್ನು ಕ್ಷಿಪ್ರವಾಗಿ ಪರಿಹರಿಸಲು ಆದ್ಯತೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಐಟಿ, ಐಟಿ ಆಧಾರಿತ ಸೇವೆಗಳು, ಜೈವಿಕ ತಂತ್ರಜ್ಞಾನ, ಚಿಪ್ ವಿನ್ಯಾಸ ಇತ್ಯಾದಿಗಳಲ್ಲಿ ರಾಜ್ಯವು ಇಡೀ ಭಾರತಕ್ಕೇ ಮೊದಲ ಸ್ಥಾನದಲ್ಲಿದೆ.
ನಮ್ಮಲ್ಲಿ 5,500ಕ್ಕೂ ಹೆಚ್ಚು ಐಟಿ ಮತ್ತು ಐಟಿಇಎಸ್ ಕಂಪನಿಗಳು, 750 ಎಂಎನ್‌ಸಿಗಳು ಮತ್ತು 400ಕ್ಕೂ ಹೆಚ್ಚು ಫಾರ್ಚೂನ್-500 ಸ್ಥಾನಮಾನವನ್ನು ಹೊಂದಿರುವ ಕಂಪನಿಗಳಿವೆ. ಇವು ದೇಶದ ನಿವ್ವಳ ವರಮಾನ ಮತ್ತು ರಫ್ತು ವಹಿವಾಟಿಗೆ ಅಪಾರ ಕೊಡುಗೆ ನೀಡುತ್ತಿವೆ. ಇದನ್ನು ಮತ್ತಷ್ಟು ವಿಸ್ತರಿಸುವುದು ರಾಜ್ಯ ಸರಕಾರದ ಸಂಕಲ್ಪವಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಕೆಇಎಫ್, ಆಸ್ಟರ್ ಸಮೂಹಗಳ ಆಸಕ್ತಿ: ಅಶ್ವತ್ಥ ನಾರಾಯಣ ಅವರು, ಕೆಇಎಫ್ ಉದ್ಯಮ ಸಮೂಹದ ಮುಖ್ಯಸ್ಥ ಫೈಜಲ್ ಕೊಟ್ಟಿಕೊಲ್ಲಾನ್, ಆಸ್ಟರ್ ಹೆಲ್ತ್ ಕೇರ್ ಸಮೂಹದ ಮುಖ್ಯಸ್ಥ ಆಜಾದ್ ಮೂಪೇನ್ ಸೇರಿದಂತೆ ಹಲವರನ್ನು ರಾಜ್ಯ ದಲ್ಲಿ ಹೂಡಿಕೆ ಮಾಡುವಂತೆ ಆಮಂತ್ರಿಸಿದರು. ಫೈಜಲ್ ಅವರು ಕೇರಳದಲ್ಲಿ ಗ್ರಾಮೀಣ ಶಾಲೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ರೂಪಿ ಸಿರುವ “ಪ್ರಿಸಂ’ ಯೋಜನೆಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಸಚಿವರು ವಿಚಾರ ವಿನಿಮಯ ಮಾಡಿಕೊಂಡರು.
ಇನ್ನು ಆಜಾದ್ ಅವರೊಂದಿಗೆ ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲೂ ಆಸ್ಟರ್ ಆಸ್ಪತ್ರೆಗಳನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಿ, ಇದಕ್ಕೆ ಅಗತ್ಯವಾದ ಬೆಂಬಲವನ್ನು ಕೊಡುವ ಆಶ್ವಾಸನೆ ನೀಡಿದರು. ಹೂಡಿಕೆದಾರರೊಂದಿಗೆ ನಡೆದ ಈ ಸಂವಾದದಲ್ಲಿ ರಾಜ್ಯ ಸರಕಾರದ ಸ್ಟಾರ್ಟಪ್ ವಿಷನ್ ಗ್ರೂಪಿನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ, ಅಮನ್ ಪುರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.