ರೋಹಿತ್ ಚಕ್ರತೀರ್ಥ ವಜಾಕ್ಕೆ ಕಸಾಪ ನಿರ್ಣಯ
Team Udayavani, Jun 3, 2022, 6:49 AM IST
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯ ಪರಿಷ್ಕರಣ ಅಧ್ಯಕ್ಷ ಸ್ಥಾನದಿಂದ ಸರಕಾರ ಕೂಡಲೇ ವಜಾಗೊಳಿಸಬೇಕು ಎನ್ನುವ ನಿರ್ಣಯವನ್ನು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೆಗೆದುಕೊಂಡಿದೆ.
ಗುರುವಾರ ಚಾಮರಾಜಪೇಟೆಯ ಕಸಾಪದ ಕುವೆಂಪು ಸಭಾಂಗಣದಲ್ಲಿ ಸಾಹಿತಿಗಳ, ಕನ್ನಡಪರ ಸಂಘ ಟನೆಗಳ, ಚಿಂತಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ನಗರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರಕಾಶ ಮೂರ್ತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾಹಿತಿ ಪ್ರೊ| ಜಿ. ಅಶ್ವತ್ಥನಾರಾಯಣ, ಸಮಿವುಲ್ಲಖಾನ್, ಕೆ. ರಾಜ ಕುಮಾರ್ ಸೇರಿದಂತೆ ಮತ್ತಿತರ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.