ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳ್ಳರ ಬಂಧನ


Team Udayavani, Oct 8, 2018, 12:20 PM IST

royal-enfie.jpg

ಬೆಂಗಳೂರು: ಮನೆ ಮುಂದೆ, ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತಿಬೆಲೆಯ ಅಸ್ಮತ್‌ ಖಾನ್‌ ಅಲಿಯಾಸ್‌ ಬುಲೆಟ್‌ ಖಾನ್‌, ಸಂತೋಷ್‌, ಮಂಜುನಾಥ್‌ ಬಂಧಿತರು.

ಆರೋಪಿಗಳ ಬಂಧನದಿಂದ ವರ್ತೂರು, ಸುದ್ದುಗುಂಟೆ ಪಾಳ್ಯ, ತಿಲಕ್‌ನಗರ, ಮೈಕೋ ಲೇಔಟ್‌ನಲ್ಲಿ ಎಸಗಿದ್ದ ಬೈಕ್‌ ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು, 10 ರಾಯಲ್‌ ಎನ್‌ಫೀಲ್ಡ್‌, ಎರಡು ಕೆಟಿಎಂ, ಎರಡು ಬಜಾಜ್‌ ಪಲ್ಸರ್‌ ಸೇರಿ 30 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಆರೋಪಿಗಳು ಇತ್ತೀಚೆಗೆ ಕೊಡತಿ ಗೇಟ್‌ ಬಳಿ ಮೂರು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಲ್ಲಿ ಬರುವಾಗ ಗಸ್ತು ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದರು. ಅನುಮಾನದ  ಮೇರೆಗೆ ಮೂವರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಬೈಕ್‌ ಕಳ್ಳರು ಎಂಬುದು ಗೊತ್ತಾಯಿತು. ಆರೋಪಿಗಳು ಈ ಹಿಂದೆ ಅತ್ತಿಬೆಲೆ, ಸೂರ್ಯಸಿಟಿ ಪೊಲೀಸ್‌ ಠಾಣಾವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಸಂಬಂಧ ಜೈಲಿಗೆ ಹೋಗಿ ಜಾಮೀನು ಆಧಾರದಲ್ಲಿ ಬಿಡುಗಡೆಗೊಂಡಿದ್ದರು. ಬಳಿಕವೂ ಹಳೇ ಚಾಳಿ ಮುಂದುವರಿಸಿದ್ದರು.

ಸದ್ಯ, ಹ್ಯಾಂಡಲ್‌ ಲಾಕ್‌ ಮುರಿಯುವುದು ಸುಲಭ ಹಾಗೂ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಜನ ಬೇಗ ಖರೀದಿಸುತ್ತಾರೆ ಎಂಬ ಉದ್ದೇಶದಿಂದ ಅವುಗಳನ್ನೇ ಹೆಚ್ಚು ಕಳವು ಮಾಡುತ್ತಿದ್ದರು. ಕದ್ದ ಬೈಕ್‌ಗಳನ್ನು ಪರಿಚಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

1-shah

Rahul Gandhi ಗ್ಯಾರಂಟಿಗಳು ಕರ್ನಾಟಕ, ಹಿಮಾಚಲದಲ್ಲಿ ಫಸಲು ನೀಡಿವೆ: ಅಮಿತ್ ಶಾ

6

World Heart Day: ನಿಮ್ಮ ಹೃದಯ ಜೀವಕ್ಕೆ ಕುತ್ತಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

1-jjk

Nasrallah ಹ*ತ್ಯೆ ಖಂಡಿಸಿ ಕಾಶ್ಮೀರದಲ್ಲಿ ಬೃಹತ್ ಪ್ರತಿಭಟನೆ; ಮಾಜಿ ಸಿಎಂ ಮುಫ್ತಿ ಬೆಂಬಲ !

Mysore

Mysuru ಸಾಂಸ್ಕೃತಿಕ ನಗರಿಯಲ್ಲಿ ರೇವ್‌ ಪಾರ್ಟಿ: ಪೊಲೀಸ್‌ ದಾಳಿ, 50ಕ್ಕೂ ಹೆಚ್ಚು ಮಂದಿ ಬಂಧನ

Udupi: ಜಾತಿ ವ್ಯವಸ್ಥೆ ಒಳ್ಳೆಯದು, ನಾನು ಯಾವ ಜಾತಿ ಎಂಬುದೇ ಗೊತ್ತಿರಲಿಲ್ಲ: ಯದುವೀರ್

Udupi: ಜಾತಿ ವ್ಯವಸ್ಥೆ ಒಳ್ಳೆಯದು, ನಾನು ಯಾವ ಜಾತಿ ಎಂಬುದೇ ಗೊತ್ತಿರಲಿಲ್ಲ: ಯದುವೀರ್

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

pejavar

Pejawar Swamiji; ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತವಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-bng

Bengaluru: 460 ಕೋಟಿ ರೂ. ಮೌಲ್ಯದ ಆಸ್ತಿ ವಶ ಪಡೆದ ಬಿಡಿಎ!

15-bng

Bengaluru: ತನ್ನ ಖಾಸಗಿ ಕ್ಷಣಗಳಿದ್ದ ಮೊಬೈಲ್‌ ಕದಿಯಲು ಸುಪಾರಿ!

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

Manipal Hospitals; ಹಿರಿಯ ನಾಗರಿಕರಿಗೆ ಆಲ್ಝೈಮರ್ಸ್ ಕಾಯಿಲೆಯ ಕುರಿತು ತಜ್ಞರೊಂದಿಗೆ ಚರ್ಚೆ

12-bng

Bengaluru: ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು “ಸೈನ್ಸ್‌ ಬಸ್‌’

11-bng

Bengaluru: ಸಾಲ ತೀರಿಸಲು ಸರ ಕದಿಯುತ್ತಿದ್ದ ಇಬ್ಬರ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

suicide (2)

Belgavi; ಇಬ್ಬರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

6

Karkala: ಎಲ್ಲಿ ಹೋಯಿತು ಬಂಗ್ಲೆಗುಡ್ಡೆ ವೃತ್ತದ ಸಿಸಿ ಕೆಮರಾ?

1-shah

Rahul Gandhi ಗ್ಯಾರಂಟಿಗಳು ಕರ್ನಾಟಕ, ಹಿಮಾಚಲದಲ್ಲಿ ಫಸಲು ನೀಡಿವೆ: ಅಮಿತ್ ಶಾ

6

World Heart Day: ನಿಮ್ಮ ಹೃದಯ ಜೀವಕ್ಕೆ ಕುತ್ತಾಗುವ ಮುನ್ನ ಎಚ್ಚೆತ್ತುಕೊಳ್ಳೋಣ

5

Karkala: ಬಸ್‌ ನಿಲ್ದಾಣದಲ್ಲಿ ಲಘು ವಾಹನ!ಬಸ್‌ ನಿಲ್ದಾಣದ ಬಗ್ಗೆ ಪುರಸಭೆ ದಿವ್ಯ ನಿರ್ಲಕ್ಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.