ಕ್ಷೇತ್ರದಲ್ಲಿ ಯಾವ ಬಂಡೆ ಆಟವೂ ನಡೆಯಲ್ಲ
Team Udayavani, Oct 21, 2020, 11:49 AM IST
ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ದೊಡ್ಡ ಬಂಡೆ, ಚಿಕ್ಕ ಬಂಡೆ ಆಟ ನಡೆಯಲ್ಲ. ಕಾಂಗ್ರೆಸ್ ಗೂಂಡಾಗಿರಿಗೆ ಅಂತ್ಯ ಹಾಡಬೇಕಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಜಾಲಹಳ್ಳಿ ವಾರ್ಡ್‌ನಲ್ಲಿ ಮಂಗಳವಾರ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರಾದ ಆರ್.ಅಶೋಕ್,ಎಸ್.ಟಿ.ಸೋಮಶೇಖರ್ ಇತರರು ಕಾಂಗ್ರೆಸ್,ಜೆಡಿಎಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಆರ್.ಅಶೋಕ್ ಮಾತನಾಡಿ, ಸಚಿವರಾದ ಎಸ್.ಟಿ.ಸೋಮ ಶೇಖ ರ್ ಯಾವುದೇ ಬೇಡಿಕೆ ಇಲ್ಲದೆ ಪಕ್ಷಕ್ಕೆ ಬಂದರು. ಹೀಗಾಗಿ ಮುನಿರತ್ನ ಅವರನ್ನು ಗೆಲ್ಲಿಸುವಮೂಲಕಋಣ ತೀರಿಸ ಬೇಕಿದೆ. ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬೆಂಗಳೂ ರಿನ ಮತದಾರರು ಯಾರ ಪರವಾಗಿದ್ದಾರೆ ಎಂಬ ಸಂದೇಶ ಸಾರಬೇಕಿದೆ. ಕಾರ್ಯಕರ್ತರ ಭಾವನೆ ಏನೇ ಇದ್ದರೂಅಭಿವೃದ್ಧಿದೃಷ್ಟಿಯಿಂದ ಎಲ್ಲರೂಚುನಾ ವಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ನೀನೇ ನಿಲ್ಲಬೇಕಿತ್ತು: ಈ ಕ್ಷೇತ್ರದಲ್ಲಿ ಎಲ್ಲಾದರೂದೊಡ್ಡ ಬಂಡೆ, ಚಿಕ್ಕ ಬಂಡೆ ಒಂದು ರಸ್ತೆ ಮಾಡಿದ್ದಾರಾ, ಕೊಳವೆಬಾವಿ, ಬೀದಿದೀಪ ಹಾಕಿಸಿದ್ದಾರಾ? ದೌರ್ಜನ್ಯ ಮಾಡುವುದಷ್ಟೇ ಅವರಿಗೆ ಗೊತ್ತಿರುವುದು. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 30,000 ಕಡಿಮೆ ಮತಪಡೆದ ಡಿ.ಕೆ. ಸುರೇಶ್ ಯಾವ ಮುಖ ಇಟ್ಟುಕೊಂಡು ತಾವೇ ಅಭ್ಯರ್ಥಿ ಎನ್ನುತ್ತಾರೆ. ಹಾಗಿದ್ದರೆ ನೀನೇ ನಿಲ್ಲಬೇ ಕಿತ್ತು. ನಿಲ್ಲಬೇಡಿ ಎಂದವರು ಯಾರು. ತಾವೇ ಅಭ್ಯರ್ಥಿಎಂದು ಹೇಳುವ ಮೂಲಕ ಅಭ್ಯರ್ಥಿಗೆ ಅವಮಾನ ಮಾಡಬಾರದು ಎಂದು ವಾಗ್ಧಾಳಿ ನಡೆಸಿದರು.
ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಕ್ಷೇತ್ರದಲ್ಲಿ ಯಾವ ಬಂಡೆ ಆಟವೂ ನಡೆಯಲ್ಲ. ಅವರ ತಮ್ಮ ಚಿಕ್ಕಬಂಡೆ ಕ್ಷೇತ್ರದಲ್ಲಿ ಒಂದು ರೂಪಾಯಿಯ ಕೆಲಸ ಮಾಡಿದ್ದರೆ ತೋರಿಸಲಿ. ಅದೇ ಮುನಿರತ್ನ ಅವರು ಕ್ಷೇತ್ರದಲ್ಲಿ 1000ಕೋ ಟಿ ರೂ. ಮೊತ್ತದ ಕಾಮಗಾರಿ ಕೈಗೊಂಡಿ ದ್ದಾರೆ. ಮುನಿರತ್ನ ಅವರನ್ನು ಸೋಲಿಸಲು ಯಾವ ಬಂಡೆಕೈಯಲ್ಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯಬಿಜೆಪಿಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಕೋವಿಡ್ ಸಂದರ್ಭದಲ್ಲಿ ಎಲ್ಲರೂ ಸುರಕ್ಷತಾ ಸಾಧನಗಳೊಂದಿಗೆ ಪ್ರಚಾರ ನಡೆಸ ಬೇಕು ಎಂದರು. ಸಚಿವ ಬೈರತಿ ಬಸವರಾಜು, ಶಾಸಕ ಸತೀಶ್ ರೆಡ್ಡಿ, ಎಸ್.ಆರ್.ವಿಶ್ವನಾಥ್ ಇದ್ದರು.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಿ: ಬಾಲಕೃಷ್ಣ
ಕೆಂಗೇರಿ: ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ರೈತರು, ಬಡವರು ತಿನ್ನಲು ಅನ್ನ ಆಹಾರವಿಲ್ಲದೆ, ಉಡಲುಬಟ್ಟೆಯಿಲ್ಲದೆ, ಮಲಗಲು ಮನೆಯಿಲ್ಲದೆ ಗೋಳಾಡುತ್ತಿದ್ದರೆ, ಅತ್ತ ಕಡೆ ಸುಳಿಯದೆ ಉಪಮುಖ್ಯಮಂತ್ರಿ, ಸಚಿವರಿಗೆ ಉಪ ಚುನಾವಣೆಯೇ ಪ್ರಧಾನವಾಗಿದ್ದು, ಕೋವಿಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಹಣವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯ ಬೇಕೆಂದು ಮಾಜಿ ಶಾಸಕ ಎಚ್.ಸಿ.ಬಾಲ ಕೃಷ್ಟ ಮತದಾರರಲ್ಲಿ ಮನವಿ ಮಾಡಿದರು.
ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್.ಪರವಾಗಿ ಕೆಬ್ಬೆ ಹಳ್ಳಿ, ಲಗ್ಗೆರೆ, ಪೀಣ್ಯ ಸೇರಿದಂತೆ ವಿವಿಧ ಬಾಗಗಳಲ್ಲಿ ಮತಯಾಚಿಸಿ ಮಾತನಾಡಿದರು.
ನರೇಂದ್ರಮೋದಿ 7 ವರ್ಷದ ಹಿಂದೆ 100 ದಿನದೊಳಗೆಬಡತನ ನಿರ್ಮೂಲನೆ,ಯುವ ಜನಾಂಗಕ್ಕೆ ಉದ್ಯೋಗ, ಕಪ್ಪುಹಣತಂದು ಎಲ್ಲಾ ನಾಗರಿಕರ ಖಾತೆಗೆ 15 ಲಕ Ò ಜಮೆ,ಪೆಟ್ರೋಲ್, ಡೀಸೆಲ್, ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಇಳಿಸುವ ಭರವಸೆ ನೀಡಿ ನಾಗರಿಕರಿಗೆ ಟೋಪಿಹಾಕಿದ್ದಾರೆ.ಮತದಾರರುಈಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿ ಕಲಿಸುವ ಮೂಲಕ ದೇಶಸೇವೆ ಮಾಡುವ, ಬಡವರ, ರೈತರ, ಕಾರ್ಮಿಕರ ಪರವಾಗಿ ದುಡಿಯುವಕಾಂಗ್ರೆಸ್‌ಗೆ ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ದೇಶದಲ್ಲಿ ದಲಿತ,ಹಿಂದುಳಿದ ವರ್ಗದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಿರುವ ವ್ಯಕ್ತಿಗಳಿಗೆ ಬಿಜೆಪಿ ಸರ್ಕಾರ ರಕ್ಷಣೆ ನೀಡುತ್ತಿದೆ. ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅವೈಜ್ಞಾನಿಕ ಕೃಷಿ ನೀತಿಯಿಂದ ದೇಶದೆಲ್ಲೆಡೆ ಸಣ್ಣ, ಮಧ್ಯಮ ವರ್ಗದರೈತರ ಭೂಮಿ ಕಸಿದು ಬಂಡವಾಳ ಶಾಹಿಗಳಿಗೆ ನೀಡಲು ಹೊರಟಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಲು ಜನ ತೀರ್ಮಾನಿಸಿದ್ದಾರೆಂದರು.
ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಮಾತನಾಡಿ, ನಿಮ್ಮ ಮನೆಯ ಮಗಳು, ವಿದ್ಯಾವಂತೆ, ಸಮಾಜಮುಖೀ ಸೇವೆ ಮಾಡಲು ಜಾತ್ಯತೀತವಾಗಿ ನೊಂದಜನರ ಪರವಾಗಿ ಗಟ್ಟಿಯಾಗಿ ಪ್ರಶ್ನಿಸಲು ಮತದಾರರು ಮತ ನೀಡುವ ಮೂಲಕ ಶಕ್ತಿ ತುಂಬಬೇಕೆಂದರು. ಶಾಸಕ ಡಾ.ರಂಗನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಎಸ್.ರವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.