2.19 ಲಕ್ಷ ರೈತರ 1088.90 ಕೋಟಿ ರೂ. ಸಾಲ ಮನ್ನಾ: ಬಂಡೆಪ್ಪ
Team Udayavani, Feb 26, 2019, 12:30 AM IST
ಬೆಂಗಳೂರು:ರಾಜ್ಯದಲ್ಲಿ ಸಾಲಮನ್ನಾ ಘೋಷಣೆಯಾದ ಬಳಿಕ ಇದುವರೆಗೆ 2.19 ಲಕ್ಷ ರೈತರಿಗೆ 1088.90 ಕೋಟಿ ರೂ. ಮನ್ನಾ ಆಗಿದ್ದು ಅಷ್ಟೋ ಮೊತ್ತ ರೈತರ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾಗೆ ಸಂಬಂಧಿಸಿದಂತೆ ಈ ವರ್ಷದ ಜನವರಿವರೆಗೆ 3.87 ಲಕ್ಷ ರೈತರ 1796.76 ಕೋಟಿ ರೂ. ಮನ್ನಾ ಆಗಲಿದೆ. ಆರ್ಥಿಕ ಇಲಾಖೆಯಿಂದ ಸಾಲ ಮನ್ನಾ ಬಾಬಿ¤ಗೆ 2600 ಕೋಟಿ ರೂ. ಸಹಕಾರ ಇಲಾಖೆಗೆ ಬಂದಿದ್ದು ಇನ್ನು 1500 ಕೋಟಿ ರೂ. ಬರಬೇಕಾಗಿದೆಎಂದು ಹೇಳಿದರು.
ಒಟ್ಟು, 22.38 ಲಕ್ಷ ರೈತರು ಖಾತೆ. 18.71 ಲಕ್ಷ ರೈತರು ಸಾಲ ಮನ್ನಾ ವ್ಯಾಪ್ತಿಗೆ ತಮ್ಮ ಮಾಹಿತಿ ಒದಗಿಸಿದ್ದಾರೆ. 15.5 ಲಕ್ಷ ರೈತರ ಮಾಹಿತಿ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಬಂದಿವೆ. ಜನವರಿ 31 ರವರೆಗೆ ಸುಮಾರು 2 ಲಕ್ಷ ರೈತರ 843 ಕೋಟಿ ರೂ. ಸಾಲ ಮನ್ನಾ ಆಗಿದೆ. ಅಲ್ಲದೆ 5 ಲಕ್ಷ ರೈತರ ಮಾಹಿತಿ ಸರಿಯಿದ್ದು ಅವರ ಖಾತೆಗಳಿಗೆ 1300 ಕೋಟಿ ರೂ. ಐದು ದಿನಗಳಲ್ಲಿ ಜಮೆ ಆಗಲಿದೆ ಎಂದು ತಿಳಿಸಿದರು.
ಬಡವರಬಂಧು ಯೋಜನೆಯಡಿ ಇದುವರೆಗೆ 18,021 ಬೀದಿ ಬದಿ ವ್ಯಾಪಾರಿಗಳಿಗೆ 10.32 ಕೋಟಿ ರೂ.ವಿತರಿಸಲಾಗಿದೆ. ಮಾರ್ಚ್ 31 ರವರೆಗೆ 53 ಸಾವಿರ ಬೀದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಅದೇ ರೀತಿ ಕಾಯಕ ಯೋಜನೆಯಡಿ 212 ಸ್ವ ಸಹಾಯ ಸಂಘಗಳಿಗೆ 10 ಲಕ್ಷ ರೂ. ವರೆಗೆ ಶೇ.4 ರ ಬಡ್ಡಿ ದರದಲ್ಲಿ ಸಾಲ ನೀಡಲು 11.36 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್ಐಟಿ: ಸಚಿವ ಸಂಪುಟ ನಿರ್ಧಾರ
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.