ಒಂದೇ ದಿನದಲ್ಲಿ 16 ಲಕ್ಷ ರೂ.ಖಾದಿ ಉಡುಪು ವಹಿವಾಟು


Team Udayavani, Oct 4, 2018, 12:15 PM IST

blore-9.jpg

ಬೆಂಗಳೂರು: ಮಹಾತ್ಮ ಗಾಂಧಿ ಜಯಂತಿ ಹಾಗೂ ರಿಯಾಯಿತಿ ದರದ ಮಾರಾಟದ ಹಿನ್ನೆಲೆ ಯಲ್ಲಿ ಖಾದಿ ಎಂಪೋರಿಯಂ ಮಂಗಳವಾರದಿಂದ ಆರಂಭಿಸಿರುವ ರಿಯಾಯ್ತಿ ಮಾರಾಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ದಿನವೇ 16 ಲಕ್ಷ ರೂ. ವಹಿವಾಟು ನಡೆದಿದೆ.

ಗಾಂಧಿ ಭವನದ ಆವರಣದಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಸಂಬಂಧಪಟ್ಟ ಖಾದಿ ಎಂಪೋರಿಯಂನಲ್ಲಿ ಗಾಂಧಿ ಜಯಂತಿಯಂದು ಭಾರಿ ವ್ಯಾಪಾರ- ವಹಿವಾಟು ನಡೆದಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯ 50ರಿಂದ 60 ಸಾವಿರ ರೂ. ನಷ್ಟಿರುತ್ತಿದ್ದ ವ್ಯಾಪಾರ ಮಂಗಳವಾರ 16 ಲಕ್ಷ ರೂ. ದಾಟಿತ್ತು. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಅಥವಾ ಇತರೆ ರಾಷ್ಟ್ರೀಯ ಹಬ್ಬಗಳಂದು ಖಾದಿ ಮತ್ತು ಗ್ರಾಮೋದ್ಯೋಗದ ವಸ್ತ್ರ, ವಸ್ತುಗಳ ವಹಿವಾಟು ಸುಮಾರು 70ರಿಂದ 80 ಸಾವಿರ ರೂ.ದಷ್ಟಿರುತ್ತಿತ್ತು. ಆದರೆ ಗಾಂಧಿ ಜಯಂತಿ ಹಾಗೂ ರಿಯಾಯಿತಿ ಮಾರಾಟದ ಹಿನ್ನೆಲೆಯಲ್ಲಿ ಈ ವರ್ಷ ಒಟ್ಟು 16,00,177.45 ರೂ.ನಷ್ಟು ವ್ಯಾಪಾರವಾಗಿದೆ. ಕಳೆದ ವರ್ಷ
ಗಾಂಧಿ ಜಯಂತಿಯಂದು 12.48 ಲಕ್ಷ ರೂ. ವಹಿವಾಟು ನಡೆದಿತ್ತು ಎನ್ನುತ್ತಾರೆ ಗಾಂಧಿ ಭವನದ ಖಾದಿ ಎಂಪೋರಿಯಂ ಮಳಿಗೆಯ ಸಹಾಯಕ ವ್ಯವಸ್ಥಾಪಕಿ ವಿಜಯಕುಮಾರಿ.

ಎಂದಿನಂತೆ ಈ ಬಾರಿಯೂ ಗಾಂಧಿ ಜಯಂತಿ ಅಂಗವಾಗಿ ಒಟ್ಟು 55 ದಿನಗಳ ಕಾಲ ರಿಯಾಯಿತಿ ದರದ ಮಾರಾಟ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಅ.2ರಿಂದ ಡಿ.7ರವರೆಗೆ ನಡೆದ ರಿಯಾಯಿತಿ ಮಾರಾಟದಲ್ಲಿ ವಹಿವಾಟು ಒಟ್ಟು 2.40 ಕೋಟಿ ರೂ. ಮೀರಿತ್ತು. ಈ ಬಾರಿ ಎರಡುವರೆ ಕೋಟಿ ರೂ. ಗಿಂತ ಹೆಚ್ಚು ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ಯುವ ಪೀಳಿಗೆ ಹಾಗೂ ಹಿರಿಯ ನಾಗರಿಕರು ಖಾದಿ ಬಳಕೆಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಅದರಲ್ಲೂ ಕಾರ್ಪೋರೇಟ್‌ ಕಂಪೆನಿಗಳ ಉದ್ಯೋಗಿಗಳು ಮತ್ತು ಕಾಲೇಜು ಯುವತಿಯರು ಖಾದಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣದ ಉಡುಗೆಗಳತ್ತ ಚಿತ್ತ ಹರಿಸುತ್ತಿರುವ ಯುವ ಪೀಳಿಗೆ ಶರ್ಟ್‌, ಸ್ಕರ್ಟ್‌, ಟಾಪ್‌ಗ್ಳ ಕಡೆಗೆ ಹೆಚ್ಚು ಆಕರ್ಷಿತವಾಗುತ್ತಿದೆ. ಮಸ್ಲಿನ್‌ ಖಾದಿ ಶರ್ಟ್‌ಗಳು, ಜುಬ್ಟಾ ಸೆಟ್‌, ಚೂಡಿದಾರ್‌ ಸೆಟ್‌, ಖಾದಿ ಸೀರೆಗಳು, ಕೋಲ್ಕತ್ತಾ ಮತ್ತು ಒಡಿಶಾದ ಖಾದಿ ಉಡುಪುಗಳಿಗೆ ಭಾರಿ ಬೇಡಿಕೆ ಇದೆ. ಹುಬ್ಬಳ್ಳಿ ಸೀರೆಗಳು ಈ ಸಮಯದಲ್ಲಿ ಹೆಚ್ಚಾಗಿ ಮಾರಾಟವಾಗಲಿವೆ ಎನ್ನುತ್ತಾರೆ ಸಿಬ್ಬಂದಿ.

ನಾನಾ ಬಗೆಯ ವಸ್ತ್ರ ಮಾರಾಟ ಗಾಂಧಿ ಭವನದ ಬಳಿಯ ಸರ್ಕಾರಿ ಸ್ವಾಮ್ಯದ ಖಾದಿ ಎಂಪೋರಿಯಂನಲ್ಲಿ ಹತ್ತಿ (ಕಾಟನ್‌) ಖಾದಿ 9,66,702.85 ರೂ., ಉಲನ್‌ ಖಾದಿ 7,715 ರೂ., ರೇಷ್ಮೆ ಖಾದಿ 4,22,007 ರೂ., ಕರಕುಶಲ ವಸ್ತುಗಳು 16,870 ರೂ., ಚರ್ಮದ ಉತ್ಪನ್ನಗಳು 14,922, ಪಾಲಿಸ್ಟರ್‌ ವಸ್ತ್ರಗಳು 1,00,286 ರೂ.ನಷ್ಟು ವ್ಯಾಪಾರ ವಹಿವಾಟು ನಡೆದಿದೆ.

ಡಿ.7ರವರೆಗೆ ರಿಯಾಯಿತಿ ಖಾದಿ ಗ್ರಾಮೋದ್ಯೋಗ ಮಂಡಳಿಗೆ ಸಂಬಂಧಿಸಿದ ಮಳಿಗೆಗಳು ಹಾಗೂ ಖಾದಿ ಎಂಪೋರಿಯಂನಲ್ಲಿ ಡಿ.7ರವರೆಗೆ ಖಾದಿ ವಸ್ತ್ರಗಳ ಮೇಲೆ ಶೇ.35ರಷ್ಟು ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಅಲ್ಲದೆ ಖಾದಿ ಎಂಪೋರಿಯಂ ಅಕ್ಟೋಬರ್‌ನಲ್ಲಿ ನಾಲ್ಕು ಭಾನುವಾರಗಳು ತೆರೆದಿರಲಿದೆ.

ಶ್ರುತಿ ಮಲೆನಾಡತಿ

ಟಾಪ್ ನ್ಯೂಸ್

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Train

Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ

Covid test

HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ

Kalaburagi-BJP-Protest

Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

1-vit-22

Dakshina Kannada; ಆರು ತಿಂಗಳ ಅಂತರದಲ್ಲಿ ಮತ್ತೊಂದು ದೊಡ್ಡ ದರೋಡೆ

1-nity

Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-water-price

Water Price Hike: ಬಸ್‌ ದರ ಏರಿಕೆ ಬೆನ್ನಲ್ಲೇ ನೀರಿನ ಬೆಲೆ ಹೆಚ್ಚಳ ಬಿಸಿ?

19-bng

Cyber ಕೈಚಳಕ: 2.47 ಕೋಟಿ ರೂ. ವಂಚನೆ

18-bng

Bengaluru: ಪೊಲೀಸ್‌ ಮೇಲೆ ಹಲ್ಲೆ ನಡೆಸಿದ್ದ ವಿದೇಶಿ ಪ್ರಜೆ ಸೆರೆ

17-bng

Bengaluru: ಅನಧಿಕೃತ ಕಾಲ್‌ಸೆಂಟರ್‌ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

16-bng

Bengaluru: ಪ್ರೀತಿಸಿದವಳು ದೂರಾಗಿದ್ದಕ್ಕೆ ಯುವಕ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!

Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು‌ ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್‌ ಎದುರಾಳಿ

Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್‌ ಎದುರಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.