ಹೇಳದೆ ಕೇಳದೆ ರಸ್ತೆ ಅಗೆದರೆ 25 ಲಕ್ಷ ರೂ. ದಂಡ


Team Udayavani, Jun 20, 2017, 12:34 PM IST

road-agetha.jpg

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ರಸ್ತೆ ಅಗೆಯುವವರಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಬಿಬಿಎಂಪಿ, ಅನುಮತಿ ಪಡೆಯದೆ ರಸ್ತೆ ಅಗೆಯುವವರಿಗೆ ಭಾರಿ ದಂಡ ವಿಧಿಸುವ ನಿಯಮ ಜಾರಿಗೆ ಸಿದ್ಧವಾಗಿದೆ.

ಪಾಲಿಕೆಯಿಂದ ಅನುಮತಿ ಪಡೆಯದೆ ರಸ್ತೆ ಅಗೆಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಸೂಚಿಸಿದ್ದಾರೆ. ಇದರೊಂದಿಗೆ ಪ್ರಸ್ತಕ ಸಾಲಿನ ಬಜೆಟ್‌ನಲ್ಲೂ ಅನಧಿಕೃತವಾಗಿ ರಸ್ತೆ ಅಗೆಯುವವರಿಗೆ ಭಾರಿ ದಂಡ ವಿಧಿಸುವ ನಿಯಮ ಜಾರಿಗೊಳಿಸುವುದಾಗಿ ಘೋಷಿಸಲಾಗಿದೆ. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು “ದಂಡ ನಿಯಮ’ ಜಾರಿಗೆ ಮುಂದಾಗಿದ್ದಾರೆ.

ನಾಗರಿಕರು ಮತ್ತು ಸಂಸ್ಥೆಗಳು ಅಥವಾ ಏಜೆನ್ಸಿಗಳು ಅನಧಿಕೃತವಾಗಿ ರಸ್ತೆ ಅಗೆಯುತ್ತಾರೆ. ನಂತರ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದ ಕಾರಣ ರಸ್ತೆಗಳಲ್ಲಿ ಸಂಚರಿಸಲು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗುತ್ತಿದೆ. ಜತೆಗೆ ಅಪಘಾತಗಳು ಸಂಭವಿಸುತ್ತಿರುವುದರಿಂದಾಗಿ ಪಾಲಿಕೆ ಈ ನಿಯಮ ಜಾರಿಗೊಳಿಸುತ್ತಿದೆ.

ನಗರದ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ರಸ್ತೆ ಅಗೆದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಕೇಂದ್ರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲ ವಲಯಗಳಲ್ಲಿ ಅಧಿಕಾರಿಗಳು ಅನಧಿಕೃತವಾಗಿ ಒಎಫ್ಸಿ ಅಳವಡಿಸುವ ಹಾಗೂ ರಸ್ತೆ ಅಗೆಯುವವರಿಗೆ ಲಕ್ಷಾಂತರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.

ರಸ್ತೆ ಅಗೆದರೆ ಭಾರಿ ದಂಡ: ಪಾಲಿಕೆಯ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಅನುಮತಿ ಪಡೆಯದೆ ರಸ್ತೆ ಅಗೆಯುವ ಮನೆಯವರಿಗೆ 10 ಲಕ್ಷ ರೂ. ದಂಡ ಹಾಗೂ ಕಂಪನಿ ಅಥವಾ ಏಜೆನ್ಸಿಗೆ 25 ಲಕ್ಷ ರೂ. ದಂಡ ವಿಧಿಸುವಂತೆ ಹಿರಿಯ ಅಧಿಕಾರಿಗಳು ಸುತ್ತೋಲೆಯ ಮೂಲಕ ಜಂಟಿ ಆಯುಕ್ತರಿಗೆ ತಿಳಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಪೂರ್ವ ವಲಯದಲ್ಲಿ ಹಲವಾರು ಏಜೆನ್ಸಿಗಳಿಗೆ ದಂಡ ವಿಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

ಜಾಗೃತಿ ಅಭಿಯಾನ: ದಂಡ ವಿಧಿಸುವ ಕುರಿತು ಈಗಾಗಲೇ ಪಾಲಿಕೆ ವತಿಯಿಂದ ಜಾಗೃತಿ ಮೂಡಿಸುವ ಅಭಿಯಾನ ನಡೆಸಲಾಗಿದೆ. ಇದರೊಂದಿಗೆ ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳಿಗೂ ಈ ಕುರಿತು ಮಾಹಿತಿ ರವಾನೆ ಮಾಡಲಾಗಿದೆ. ಅದಾದ ಬಳಿಕವೂ ನಾಗರಿಕರು ಮತ್ತು ಏಜೆನ್ಸಿಗಳು ತಪ್ಪು ಮಾಡಿದರೆ ಭಾರಿ ದಂಡ ವಿಧಿಸಲು ಪಾಲಿಕೆ ಮುಂದಾಗಿದೆ. 

ಅನುಮತಿ ಪಡೆಯದೆ ನಾಗರಿಕರು ಮತ್ತು ಏಜೆನ್ಸಿಗಳು ರಸ್ತೆ ಅಗೆಯುತ್ತಿರುವ ಕಾರಣ ಗುಂಡಿಗಳು ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಕಠಿಣ ನಿರ್ಧಾರ ಕೈಗೊಳ್ಳಲಾಗಿದ್ದು, ಭಾರಿ ದಂಡ ವಿಧಿಸುವ ಮೂಲಕ ಅನಧಿಕೃತ ರಸ್ತೆ ಅಗೆತ ತಡೆಯಲಾಗುವುದು.
-ಜಿ.ಪದ್ಮಾವತಿ, ಮೇಯರ್‌

ಟಾಪ್ ನ್ಯೂಸ್

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

ಲಿವ್ ಇನ್ ಸಂಗಾತಿಯನ್ನು ಕೊಂದು ದೇಹವನ್ನು 6 ತಿಂಗಳು ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆರೋಪಿ

Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

15-metro

Bengaluru: ಪ್ರತಿ ಸೋಮವಾರ ಮುಂಜಾನೆ 4.15ರಿಂದಲೇ ಮೆಟ್ರೋ ಸೇವೆ

14-bng

Bengaluru: ತಾಯಿಗೆ ನಿಂದಿಸುತ್ತಿದ್ದ ತಮ್ಮನ ಕೊಂದ ಸಹೋದರನ ಬಂಧನ

13-bng

Bengaluru: ಕೆಂಗೇರಿಯ ಮಧು ಪೆಟ್ರೋಲ್‌ ಬಂಕ್‌ ಜಂಕ್ಷನ್‌ ಮೃತ್ಯುಕೂಪ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.