ಹತ್ತೇ ಸಂಸ್ಥೆ ವಂಚಿಸಿದ್ದು 3200 ಕೋಟಿ!
Team Udayavani, Jul 30, 2017, 11:25 AM IST
ಬೆಂಗಳೂರು: ಸೈಟು, ಫ್ಲ್ಯಾಟು, ಅಧಿಕ ಬಡ್ಡಿ ಹಣ ಕೊಡುವ ನೆಪದಲ್ಲಿ ವಂಚಕ ಕಂಪನಿಗಳು ರಾಜ್ಯದ ಜನರಿಂದ ದೋಚಿರುವ ಹಣವೆಷ್ಟು ಗೊತ್ತೇ? 3,273 ಕೋಟಿ ರೂ.ಗಳಿಗಿಂತಲೂ ಮಿಗಿಲು. ವಂಚನೆ ಪ್ರಕರಣಗಳ ತನೀಖೆ ಮಾಡುತ್ತಿರುವ ಸಿಐಡಿಯದ್ದೇ ಮಾಹಿತಿ ಇದು. ಇಂಥ ವಂಚಕ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸಿಐಡಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಐಡಿ ಪೊಲೀಸ್ ಮಾಹಾನಿರ್ದೇಶಕ ಕಿಶೋರ್ ಚಂದ್ರ ಅವರು, ಅಗ್ರಿಗೋಲ್ಡ್, ಮೈತ್ರೀ ಪ್ಲಾಂಟೇಷನ್, ಡ್ರೀಮ್ಸ್ ಇನ್‌ಫ್ರಾ, ಟಿಜಿಎಸ್, ಗೃಹ ಕಲ್ಯಾಣ ಸೇರಿದಂತೆ ಹತ್ತು ವಂಚಕ ಕಂಪೆನಿಗಳು ರಾಜ್ಯದ 17 ಲಕ್ಷ ಮಂದಿಗೆ ವಂಚಿಸಿವೆ. ಜನರಿಗೆ ಮೋಸ ಮಾಡಿದ ಕಂಪೆನಿಗಳ ವಿರುದ್ಧ 2013ರಿಂದ 2016ರವರೆಗೆ ಮೂರು ವರ್ಷಗಳ ಅವಧಿಯಲ್ಲಿ 422 ವಂಚನೆ ಪ್ರಕರಣ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಠೇವಣಿದಾರರ ಹಿತಾಸಕ್ತಿ ಸಂರಕ್ಷಣ ಅಧಿನಿಯಮ 2004 ಕಲಂ 3 ರ ಅಡಿಯಲ್ಲಿ ಸಿಐಡಿಯ ಆರ್ಥಿಕ ಅಫರಾಧಗಳ ಅಧಿಕಾರಿಗಳು ಆರೋಪಿತ ಸಂಸ್ಥೆಗಳ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮತ್ತು ಅವುಗಳ ಹರಾಜು ಪ್ರಕ್ರಿಯೆ ನಡೆಸಿ, ಅದರಿಂದ ಬರುವ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಈ ನಡುವೆ ಹೆಚ್ಚಿನ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ರಚಿಸಲಾಗಿದ್ದ ಸಕ್ಷಮ ಪ್ರಾಧಿಕಾರವು ಅಗ್ರಿಗೋಲ್ಡ್‌ನ 430 ಎಕರೆ ಜಮೀನು, ಮೈತ್ರೀ ಪ್ಲಾಟೆಂಷನ್ ಅಂಡ್ ಹಾರ್ಟಿಕಲ್ಚರ್‌ನ 383 ಎಕರೆ ಜಮೀನು ಮತ್ತು ಗ್ರೀನ್ ಬಡ್ಸ್ ಆಗ್ರೋ ಫಾರಂನ 205 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಕಿಶೋರ್ ಚಂದ್ರ ತಿಳಿಸಿದರು.
ಆಕರ್ಷಕ ಜಾಹಿರಾತು ನೀಡಿ ವಂಚನೆ: ಈ ಕಂಪೆನಿಗಳು ಅಂತರ್ಜಾಲ, ವೆಬ್‌ಸೈಟ್‌ಗಳ ಮೂಲಕ ಆಕರ್ಷಕ ಜಾಹೀರಾತು ನೀಡುತ್ತಿದ್ದವು. ಸಿನಿಮಾ ತಾರೆಯರನ್ನು ಬಳಸಿಕೊಂಡು ಸಾರ್ವಜನಿಕರಿಂದ ನಂಬಿಕೆ ಗಳಿಸುತ್ತಿದ್ದರು. ಬಳಿಕ ನಿವೇಶನ, ಫ್ಲ್ಯಾಟ್, ಬಡ್ಡಿ ಹಾಗೂ ಇತರೆ ಆಸ್ತಿಗಳ ಆಮಿಷವೊಡ್ಡಿ ಸಾವಿರಾರು ರೂ. ಹೂಡಿಕೆ ಮಾಡಿಸುತ್ತಿದ್ದರು. ಇದೇ ರೀತಿ ಸೇವಾನಿರತ, ನಿವೃತ್ತ ಸರ್ಕಾರಿ ನೌಕರರು, ಮಿಲಿಟರಿ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು, ವೈದ್ಯರು, ಸಾಫ್ಟ್‌ವೇರ್ ಎಂಜಿಯರ್‌ಗಳು,
ರೈತರು ಹಾಗೂ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ಸಹ ಹಣ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಚೆನ್ನಾಗಿ ನಡೆಸುತ್ತಿದ್ದ ಸಂಸ್ಥೆಗಳು, ನಂತರ ಹೆಚ್ಚಿನ ಬೇಡಿಕೆ ಬಂದಾಗ ಹೂಡಿಕೆ ಹಣದೊಂದಿಗೆ ಪರಾರಿಯಾಗುತ್ತಿದ್ದರು. ಹೀಗೆ ವಂಚಿಸಿರುವ ಹಣವನ್ನು ತಮ್ಮ ಹೆಸರಿನಲ್ಲಿ ಮತ್ತು ಬೇನಾಮಿ ಹೆಸರಿನಲ್ಲಿ ಜಮೀನುಗಳನ್ನು, ಐಶಾರಾಮಿ ಮನೆಗಳು, ದುಬಾರಿ ವಾಹನಗಳ ಖರೀದಿ, ಚಲನಚಿತ್ರಗಳ ನಿರ್ಮಾಣಗಳಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದರು.
ತಕ್ಷಣ ದೂರು ಕೊಡಿ
ಡ್ರಿಮ್ಸ್ ಕಂಪೆನಿಯ 6500 ಹೂಡಿಕೆದಾರರ ಪೈಕಿ 2382 ಮಂದಿ, ಗೃಹ ಕಲ್ಯಾಣ ಕಂಪೆನಿಯ 2,200 ಹೂಡಿಕೆದಾರರ ಪೈಕಿ 814 ಮಂದಿ, ಟಿಜಿಎಸ್ ಕಂಪೆನಿಯ 5315 ಹೂಡಿಕೆದಾರರ ಪೈಕಿ 2750 ಮಂದಿ ಮಾತ್ರ ದೂರು ನೀಡಿದ್ದಾರೆ. ಇನ್ನುಳಿದವರು ಹೂಡಿಕೆದಾರರ ಈ ಕಂಪೆನಿಗಳು ಮಾತ್ರವಲ್ಲದೇ ಇತರೆ ಕಂಪನಿಗಳ ಹೂಡಿಕೆದಾರರು ಸಿಐಡಿ ಕಚೇರಿಗೆ ಆಗಮಿಸಿ ದೂರುಗಳನ್ನು ಸಲ್ಲಿಸಬಹುದು ಅಥವಾ ಸಿಐಡಿ ಕಚೇರಿ 080-22942444 ಅಥವಾ [email protected] ಎಂಬ ಮೇಲ್‌ಗೆ ದೂರುಗಳನ್ನು ದಾಖಲಿಸಬಹುದು.
ಹೂಡಿಕೆದಾರರ ಗಮನಕ್ಕೆ
ಹೂಡಿಕೆದಾರರು ಹಣವನ್ನು ಹೂಡಿಕೆ ಮಾಡುವಾಗ ಈ ರೀತಿಯ ಕಂಪನಿಗಳು ಅಧಿಕೃತವೇ ಅಥವಾ ಅನಧಿಕೃತವೇ ಎಂಬ ವಿಷಯವನ್ನು ಖಚಿತ ಪಡಿಸಿಕೊಳ್ಳಬೇಕು. ಜತೆಗೆ ಸಂಸ್ಥೆಗಳ ಸಕ್ಷಮ ಪ್ರಾಧಿಕಾರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಯುರಿಟಿ ಎಕ್ಸ್‌ಚೆಂಜ್ ಬೋರ್ಡ್ ಆಫ್ ಇಂಡಿಯಾ, ರಿಜಿಸ್ಟರ್ ಆಫ್ ಕಂಪನಿಸ್ ಮತ್ತು ರಿಜಿಸ್ಟರ್ ಆಫ್ ಕೋ-ಆಪರೇಟಿವ್ ಸೊಸೈಟಿಯಿಂದ ಅನುಮತಿ ಪಡೆದುಕೊಳ್ಳಲಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಈ ವಿಷಯಗಳ ಬಗ್ಗೆ ಯಾವುದೇ ರೀತಿಯ ಸಂಶಯ ಬಂದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಆರಂಭಿಸಿರುವ ಡಿಡಿಡಿ.slcc.kಚr.nಜಿc.ಜಿn ಮೂಲಕ ದೂರು ನೀಡಬಹುದು ಎಂದು ಅವರು ತಿಳಿಸಿದರು.
ವಂಚಿಸಿದ ಕಂಪೆನಿಗಳ ಗುರುತಿಸಿದ ಆಸ್ತಿ ಮೊತ್ತ(ಕೋಟಿ ರೂಗಳಲ್ಲಿ)
-ಅಗ್ರಿಗೋಲ್ಡ್ ಕಂಪನಿ- 250
-ಹಿಂದೂಸ್ಥಾನ್ ಇನ್‌ಪ್ರಕಾನ್ ಕಂಪನಿ-34
-ಮೈತ್ರೀ ಪ್ಲಾಂಟೇಷನ್ ಮತ್ತು ಹಾರ್ಟಿಕಲ್ಚರ್-43
-ಗ್ರೀನ್ ಬಡ್ಸ್ ಆಗ್ರೋ ಫಾರಂ ಕಂಪನಿ-30
-ಹರ್ಷ ಏಂಟರ್‌ಟೈನ್‌ಮೆಂಟ್ ಸಂಸ್ಥೆ-40
-ಡ್ರೀಮ್ಸ್ ಇನ್‌ಪ್ರಾ ಕಂಪನಿ- 100
-ಟಿಜಿಎಸ್ ಕಂಪನಿ- 65
-ಗೃಹ ಕಲ್ಯಾಣ ಕಂಪನಿ-21
-ಸೆವನ್ ಹಿಲ್ಸ್ ಕಂಪನಿ- 11
-ವೃಕ್ಷ ಬಿಜಿನಸ್ ಸಲ್ಯೂಶನ್-0.10
-ಒಟ್ಟು 594.10
ಯಾರ್ಯಾರ ವಂಚನೆ ಎಷ್ಟು?:
-ಅಗ್ರಿಗೋಲ್ಡ್ ಸಂಸ್ಥೆಯ ಅವ್ವಾ ವೆಂಕಟರಾಮರಾವ್ – 1,640
-ಹಿಂದೂಸ್ಥಾನ್ ಇನ್‌ಫ್ರಾಕಾನ್‌ನ ಲಕ್ಷ್ಮಿನಾರಾಯಣ -389
-ಮೈತ್ರಿ ಪ್ಲಾಂಟೇಷನ್ ಮತ್ತು ಹಾರ್ಟಿಕಲ್ಚರ್‌ನ ಕೊಂಡರೆಡ್ಡಿ – 9.82
-ಗ್ರೀನ್ ಬಡ್ಸ್ ಆಗ್ರೋ ಫಾರಂ ಕಂಪನಿಯ ಬಿ.ಎಲ್. ರವೀಂದ್ರನಾಥ – 53.88
-ಹರ್ಷ ಏಂಟರ್‌ಟೈನ್‌ಮೆಂಟ್ ಸಂಸ್ಥೆಯ ಸುಭೋದ್ – 136
-ಡ್ರೀಮ್ಸ್ ಇನ್‌ಫ್ರಾ ಕಂಪನಿಯ ಸಚಿನ್ ನಾಯಕ್, ದೀಶಾ ಚೌಧರಿ – 573
-ಟಿಜಿಎಸ್ ಕಂಪನಿಯ ಸಚಿನ್ ನಾಯಕ್ ಮತ್ತು ಮನದೀಪ್‌ಕೌರ್ – 260
-ಗೃಹ ಕಲ್ಯಾಣ ಕಂಪನಿಯ ಸಚಿನ್ ನಾಯಕ್ ಮತ್ತು ಮಜುಂದಾರ್ ಶತಪರ್ಣಿ – 277
-ಸೆವನ್ ಹಿಲ್ಸ್ ಕಂಪನಿಯ ಜಿ.ನಾರಾಯಣಪ್ಪ – 81
-ವೃಕ್ಷ ಬಿಜಿನಸ್ ಸಲ್ಯೂಶನ್‌ನ ಜೀವರಾಜ್ ಪುರಾಣಿಕ್ – 31 (ಕೋಟಿ ರೂ.ಗಳಲ್ಲಿ)
ಖಾಸನೀಸ್ ಸೋದರರು ವಂಚಿಸಿದ್ದು 136 ಕೋಟಿ; ವಂಚಕರ ಬಳಿ ಇರುವ ಆಸ್ತಿ ಮಾತ್ರ 36.27
ಬೆಂಗಳೂರು: ಅಧಿಕ ಬಡ್ಡಿಯ ಆಮಿಷವೊಡ್ಡಿ ಸುಮಾರು 7,400 ಮಂದಿಗೆ 136 ಕೋಟಿ ರೂ. ವಂಚಿಸಿರುವ ಹರ್ಷ ಎಂಟರ್‌ಟೈನ್‌ಮೆಂಟ ಎಂಬ ಹಣಕಾಸು ಸಂಸ್ಥೆಯ ಖಾಸನೀಸ್ ಸಹೋದರ 36.27 ಕೋಟಿ ಮೌಲ್ಯದ ಆಸ್ತಿಯನ್ನು ಸಿಐಡಿ ಆರ್ಥಿಕ ಅಫರಾಧ ವಿಭಾಗದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಧಾರವಾಡದ ಕಲಘಟಗಿಯ ಸತ್ಯಬೋದ ಅಲಿಯಾಸ್ ಹರ್ಷ ಖಾಸನೀಸ್ ಮತ್ತು ಶ್ರೀಕಾಂತ್ ಎಸ್ ಖಾಸನೀಸ್, ಸಂಜೀವ್ ಖಾಸನೀಸ್ ಸಹೋದರರು ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಂಗ್ರಹಿಸಿದ ಹಣವನ್ನು ಚಿನ್ನ, ಬೆಳ್ಳಿ ಆಭರಣಗಳು, ವಾಹನ ಖರೀದಿ, ಷೇರು ಮಾರುಕಟ್ಟೆ, ಚಲನಚಿತ್ರ ನಿರ್ಮಾಣಗಳಲ್ಲಿ ತೊಡಗಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಸಿಐಡಿ ಹೆಚ್ಚುವರಿ ಪೊಲೀಸ್ ಮಾಹಾನಿರ್ದೇಶಕ ಪ್ರತಾಪ್ ರೆಡ್ಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಕಳೆದ 2009ರಲ್ಲಿ ಹಣಕಾಸು ಸಂಸ್ಥೆ ಆರಂಭಿಸಿ ಮಾಸಿಕ ಶೇ.6ರಿಂದ 7ರವರೆಗೆ 2016ರವರೆಗೆ ಸಾರ್ವಜನಿಕರಿಗೆ ಬಡ್ಡಿ ನೀಡಿದ್ದರು. ಇದರಿಂದ ಉತ್ತೇಜಿತರಾದ 7,400 ಮಂದಿ ಮಂದಿ ಸುಮಾರು 136 ಕೋಟಿ ರೂ.ಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದರು. ಅದನ್ನು ತೆಗೆದುಕೊಂಡು ಮೂವರು ಸಹೋದರರು ಕುಟುಂಬ ಸಮೇತ ನಾಪತ್ತೆಯಾಗಿದ್ದರು.
ಈ ಸಂಬಂಧ ದಾಖಲಾದ ದೂರಿನ್ವಯ ಸಿಐಡಿ ಎಸ್ಪಿ ಸಿದ್ದರಾಮಯ್ಯ ನೇತೃತ್ವದ ತಂಡ ಹರ್ಷ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರ, ವಾದಿರಾಜ, ಮಹೇಶ, ಶಂಭುಲಿಂಗ ಎಂಬವರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದರು. ಇವರ ಹೇಳಿಕೆಯನ್ನಾಧರಿಸಿ ಮೇ 28ರಂದು ಉತ್ತರ ಪ್ರದೇಶದ ಮಥುರಾದಲ್ಲಿ ಮೂವರು ಸಹೋದರರನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದರು.
ಆರೋಪಿಗಳ ಆಸ್ತಿ ಮೊತ್ತ: ಆರೋಪಿಗಳು 9. 42 ಕೋಟಿ ರೂ.ಹಣವನ್ನು 8 ಚಲನಚಿತ್ರಗಳ ನಿರ್ಮಾಣ, ಷೇರು ಮಾರುಕಟ್ಟೆಯಲ್ಲಿ 20.63 ಕೋಟಿ ರೂ, ಮನೆ ಜಮೀನು ನಿವೇಶನ ಖರೀದಿಗೆ 6 ಕೋಟಿ, ವಾಹನ ಚಿನ್ನಾಭರಣಕ್ಕೆ 22 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಹಾಗೆಯೇ ಇದುವರೆಗೂ ಖಾಸನೀಸ್ ಸಹೋದರರ 36.27 ಕೋಟಿ ಮೊತ್ತದ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.