ಸಮಾಜ ಕಟ್ಟುವಲ್ಲಿ ಆರೆಸ್ಸೆಸ್ ನಿರತ
Team Udayavani, Jul 15, 2018, 12:45 PM IST
ಬೆಂಗಳೂರು: ಸಮಾಜ ಒಡೆಯುವ ಗುಂಪುಗಳ ಮಧ್ಯೆ ಸಮಾಜ ಕಟ್ಟುವ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿರತವಾಗಿದೆ ಎಂದು ಲೇಖಕ ರತನ್ ಶಾರದ ತಿಳಿಸಿದ್ದಾರೆ.
ಥಿಂಕರ್ ಫೋರಂ ವತಿಯಿಂದ ಜೈನ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ “ಆರ್‌ಎಸ್‌ಎಸ್ 360 ಡಿಗ್ರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಸೈದ್ಧಾಂತಿಕ ಯುದ್ಧವಾಗುತ್ತಿದೆ. ಇದಕ್ಕೆ ಪೂರಕವಾಗಿ ತುಕ್ಡೆ ಗುಂಪು ಹಾಗೂ ಬ್ರೇಕಿಂಗ್ ಇಂಡಿಯಾದಂತಹ ಗುಂಪುಗಳು ಸಮಾಜ ಒಡೆಯುವ ಕಾರ್ಯ ಮಾಡುತ್ತಿದ್ದರೆ, ಆರ್‌ಎಸ್‌ಎಸ್ ಸಮಾಜ ಕಟ್ಟುವ ಕಾರ್ಯದಲ್ಲಿ ನಿರತವಾಗಿದೆ ಎಂದರು.
ಹಲವು ಮಂದಿ ಬೆಳಗ್ಗೆ ತಮ್ಮ ವೃತ್ತಿಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿ ಸಂಜೆ ಸಂಘದ ಶಾಖೆಗಳಲ್ಲಿ ಕೆಲಸ ಮಾಡುತ್ತಾರೆ. ಹೀಗೆ ಪ್ರಾಮಾಣಿಕವಾಗಿ ಸಂಘಕ್ಕೆ ದುಡಿದವರು ಸಮಾಜದಲ್ಲಿ ಉನ್ನತ ಗೌರವ ಪಡೆದುಕೊಂಡಿದ್ದಾರೆ. ಹಲವು ಗೌರವಾನ್ವಿತ ವ್ಯಕ್ತಿಗಳು ಸಂಘದಿಂದ ಬಂದವರಾಗಿದ್ದಾರೆ ಎಂದರು.
ದೇಶ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಆರ್‌ಎಸ್‌ಎಸ್ ಬಗ್ಗೆ ಅನೇಕ ಟೀಕೆಗಳು ಕೇಳಿ ಬರುತ್ತಿವೆ. ಅದರಲ್ಲಿ ಮುಖ್ಯವಾಗಿ ಸಂಘ ವಾಸ್ತವ ಜಗತ್ತಿನಲ್ಲಿ ಇಲ್ಲ. ಹಳೆಯ ವಿಚಾರಧಾರೆಗಳನ್ನು ಒಳಗೊಂಡಿದೆ. ಇಲ್ಲಿ ಪ್ರಜಾಪ್ರಭುತ್ವವಿಲ್ಲ ಎಂದು ಟೀಕೆಗಳನ್ನು ಮಾಡುತ್ತಾರೆ. ಆದರೆ, ಆರ್‌ಎಸ್‌ಎಸ್‌ನಲ್ಲಿರುವ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಬಹಳ ಮಂದಿಗೆ ತಿಳಿದಿಲ್ಲ ಎಂದು ಹೇಳಿದರು.
ಸ್ವರಾಜ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ವಿಶ್ವನಾಥನ್ ಮಾತನಾಡಿ, ಭಾರತದಲ್ಲಿ ಅನೇಕ ಸಂಘಟನೆಗಳು ಹುಟ್ಟಿವೆ ಹಾಗೂ ಬೆಳೆದಿವೆ. ಆದರೆ ಇಷ್ಟು ವರ್ಷಗಳ ಕಾಲ ಒಂದು ಸಂಘಟನೆ ಉಳಿದಿರುವುದು ಅಪರೂಪ. 56 ಸಾವಿರ ಶಾಖೆಗಳು, ಲಕ್ಷಾನುಗಟ್ಟಲೇ ಸ್ವಯಂ ಸೇವಕರಿದ್ದಾರೆ ಎಂದರು.
ಆರ್‌ಎಸ್‌ಎಸ್‌ನ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್ ಮಾತನಾಡಿ, ಸಮಾಜಕ್ಕೆ ಅಗತ್ಯವಾಗಿರುವುದನ್ನು ಸ್ವಯ ಸೇವಕರು ನೀಡುತ್ತಾರೆ. ಅವರನ್ನು ಆ ರೀತಿ ಸಂಘ ತರಬೇತುಗೊಳಿಸಿರುತ್ತದೆ. ಆರ್‌ಎಸ್ ಎಸ್ 360 ಡಿಗ್ರಿ ಕೃತಿಯಲ್ಲಿ ಸಂಘದ ಪ್ರಾರ್ಥನೆ, ಹಿಂದೂಗಳ ಒಗ್ಗೂಡುವಿಕೆ, ಸಂಘದ ಕಾರ್ಯ ವಿಧಾನ, ಶಾಖೆಗಳು, ಸ್ವಯಂ ಸೇವಕರು, ಸಂಘದ ಸಾಧನೆಗಳನ್ನು ವಿವರಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.