ಆರೆಸ್ಸೆಸ್ ನ ಉನ್ನತ ಮಟ್ಟದ ಸಭೆ ಆರಂಭ: ಮೋಹನ್ ಭಾಗವತ್, ಭೈಯಾಜೀ ಜೋಶಿಯವರಿಂದ ಉದ್ಘಾಟನೆ
Team Udayavani, Mar 19, 2021, 9:15 AM IST
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ ನಿರೂಪಣೆ ಹಾಗೂ ನಿರ್ಣಯ ತೆಗೆದುಕೊಳ್ಳುವ ಅಖಿಲಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಬೆಂಗಳೂರಿನ ಚೆನ್ನೇನಹಳ್ಳಿಯಲ್ಲಿ ಆರಂಭಗೊಂಡಿದೆ.
ಸರಸಂಘಚಾಲಕ್ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ಭೈಯಾಜೀ ಜೋಶಿಯವರು ಎಬಿಪಿಎಸ್ ಉದ್ಘಾಟನೆ ನೆರವೇರಿಸಿದರು.
ಇದನ್ನೂ ಓದಿ:ಲಾಕ್ ಡೌನ್, ಕರ್ಫ್ಯೂ ಇರಲಿ… ಇನ್ನೂ ಕ್ವಾರಂಟೈನ್ ಯಾಕಿಲ್ಲ? ಮೂಲ ನಿಯಮವನ್ನೇ ಮರೆತ ಸರ್ಕಾರ
ಸಹಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ಸಿ.ಆರ್.ಮುಕುಂದ, ಸುರೇಶ್ ಸೋನಿ, ಕೃಷ್ಣಗೋಪಾಲ್, ಭಾಗಯ್ಯ ಸೇರಿದಂತೆ ಬಿಜೆಪಿ, ವಿಶ್ವಹಿಂದು ಪರಿಷತ್, ಎಬಿವಿಪಿ, ವಿದ್ಯಾಭಾರತಿ, ಸೇವಾ ಭಾರತಿ ಮೊದಲಾದ ಸಂಘಪರಿವಾರ ಸಂಘಟನೆಗಳ ಸುಮಾರು 450 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮಾ.20ರ ವರೆಗೂ ಎಬಿಪಿಎಸ್ ನಡೆಯಲಿದೆ.
ಸಂಘ ಶಾಖೆಯ ವಿಸ್ತಾರ ಸೇರಿದಂತೆ ವಿವಿಧ ಚಟುವಟಿಕೆಗಳ ವರದಿ, ಮುಂದಿನ ಕಾರ್ಯಯೋಜನೆ ಹಾಗೂ ರಾಷ್ಟ್ರೀಯ ಮಹತ್ವದ ಪ್ರಮುಖ ವಿಷಯದ ಚರ್ಚೆ ಎಬಿಪಿಎಸ್ ನಲ್ಲಿ ಆಗಲಿದೆ. ಹಾಗೆಯೇ ಮಾ.20ರಂದು ಸರಕಾರ್ಯವಾಹ ಆಯ್ಕೆಯ ಚುನಾವಣೆ ಕೂಡ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತ ಕ್ರಮಗಳನ್ನು ತೆಗೆದುಕೊಂಡಿದ್ದು, ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದವರಿಗೆ ವರ್ಚುವಲ್ ವ್ಯವಸ್ಥೆ ಮೂಲಕ ಭಾಗವಹಿಸಲು ಅನುಕೂಲ ಆಗುವಂತೆ ದೇಶದ 44 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.