ರುದ್ರೇಶ್ ಕೊಲೆ ಕೇಸ್: ಐವರ ವಿರುದ್ಧ NIA ಚಾರ್ಜ್ ಶೀಟ್
Team Udayavani, Apr 22, 2017, 11:41 AM IST
ಬೆಂಗಳೂರು: ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಐವರು ಆರೋಪಿಗಳ ವಿರುದ್ಧ ಶುಕ್ರವಾರ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ಸದಸ್ಯರಾದ, ನಗರದ ಗೋವಿಂದಪುರ ನಿವಾಸಿ ಇರ್ಫಾನ್ ಪಾಷಾ (32), ಆಸ್ಟೀನ್‌ಟೌನ್ ನಿವಾಸಿ ವಸೀಂ (32), ಮಾರಪ್ಪ ಗಾರ್ಡ್‌ನ್‌ನ ಮೊಹಮ್ಮದ್ ಸಿದ್ದಿಕಿ (35), ಆರ್.ಟಿ.ನಗರದ ಮೊಹಮ್ಮದ್ ಮುಜಿದ್ ಉಲ್ಲಾ (46), ಬೆನ್ಸ್‌ನ್‌ಟೌನ್ ನಿವಾಸಿ ಆಸೀಂ ಷರೀಫ್ (40) ವಿರುದ್ಧ ಐಪಿಸಿ 302, 34, 120 ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 16 1(ಎ), 18, 20 ಅಡಿಯಲ್ಲಿ ಪ್ರಕರಣ ದಾಖಲಿಸಿ ಜಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಆರೋಪಿಗಳ ಪೈಕಿ ಆಸೀಂ ಷರೀಫ್ ಪಿಎಫ್ಐ ಬೆಂಗಳೂರು ಘಟಕದ ಅಧ್ಯಕ್ಷನಾಗಿದ್ದು, ಇನ್ನುಳಿದ ಆರೋಪಿಗಳು ಸಂಘಟನೆಗಳ ಸದಸ್ಯರಾಗಿದ್ದರು. ರುದ್ರೇಶ್ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ, ರುದ್ರೇಶ್ ಶಿವಾಜಿನಗರ ಸೇರಿ ನಗರಾದ್ಯಂತ ಆರ್‌ಎಸ್‌ಎಸ್ ಸಂಘಟನೆ ಬಲಪಡಿಸಲು ಸಂಘಟನೆಯ ಮುಂದಾಳತ್ವ ವಹಿಸಿದ್ದರು. ರಾಜಕೀಯ ದಲ್ಲಿ ಕ್ಷಿಪ್ರ ರೀತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದರು ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಎನ್‌ಐಎ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿದೆ.
ಪ್ರಾರ್ಥನಾ ಮಂದಿರದಲ್ಲಿ ಸಂಚು: ರುದ್ರೇಶ್ ಹತ್ಯೆಗೊ ಒಂದು ತಿಂಗಳ ಮೊದಲು ಆರೋಪಿಗಳು ಪಿಎಫ್ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ಕೆಲ ನಾಯಕರ ಜತೆ ನಗರದ ಪ್ರಾರ್ಥನಾ ಮಂದಿರಧಿಗಳಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಆರೋಪಿಗಳಿಗೆ ಸಂಘಟನೆಗಳ ಮುಖಂಡರು, ನಗರದಲ್ಲಿ ಆರ್‌ಎಸ್‌ಎಸ್ ಸಂಘಟನೆ ಬಲಗೊಳ್ಳುತ್ತಿದೆ. ಇದನ್ನು ಕುಗ್ಗಿಸಬೇಕಿದೆ. ಆಗ ಸ್ವಾಭಾವಿಕವಾಗಿ ಸಂಘಟನೆ ಕಾರ್ಯಚಟುವಟಿಕೆಗಳು ಕಡಿಮೆಯಾಗುತ್ತವೆ ಎಂದು ಪ್ರಚೋದಿಸಿದ್ದರು.
2016 ಅ.16ರಂದು ಮಧ್ಯಾಹ್ನ 12.40ರ ಸುಮಾರಿಗೆ ಕಮರ್ಷಿಯಲ್ ಸ್ಟ್ರೀಟ್‌ನ ಶಿವಾಜಿ ಸರ್ಕಲ್ ಬಳಿಯ ಬಿಇಒ ಕಚೇರಿ ಬಳಿ ಸ್ನೇಹಿತರೊಂದಿಗೆ ಮಾತನಾಡಿಕೊಂಡು ನಿಂತಿದ್ದ ರುದ್ರೇಶ್‌ನನ್ನು ಇಬ್ಬರು ಮುಸುಕುಧಾರಿಗಳು ಬೈಕ್‌ನಲ್ಲಿ ಬಂದು ಹತ್ಯೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕೆ.ಆರ್.ಪುರ ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ತಂಡ ಅ.27ರಂದು ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. ನ.3ರಂದು ಪಿಎಫ್ಐ ನಗರಾಧ್ಯಕ್ಷ ಆಸೀಂ ಷರೀಫ್ ಸಿಕ್ಕಿಬಿದ್ದಿದ್ದ.
ಬಂಧಿತ ಆರೋಪಿಗಳ ಪೈಕಿ ಆಸೀಂ ಷರೀಫ್, ಇರ್ಫಾನ್ ಪಾಷಾ ಹೈಕೋರ್ಟ್ ಮೂಲಕ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಎನ್‌ಐಎ ತನಿಖೆ ರದ್ದು ಪಡಿಸುವಂತೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಎನ್‌ಐಎ ತನಿಖೆ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಎನ್‌ಐಎ ಅಧಿಕಾರಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ವಿಶೇಷ ಪ್ರಕರಣವಾದ್ದರಿಂದ ಚಾರ್ಜ್‌ಧಿಶೀಟ್ ಸಲ್ಲಿಸಲು 180 ದಿನಗಳ ಕಾಲವಕಾಶ ಕೇಳಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ವಿಭಾಗೀಯ ಪೀಠ ತನಿಖೆ ಮುಂದುವರಿಸುವಂತೆ ಏ.7ರಂದು ಆದೇಶ ನೀಡಿತ್ತು.
ಮತ್ತೆ ಕೋರ್ಟ್‌ಗೆ ಮನವಿ
ಪಿಎಫ್ಐ ಸಂಘಟನೆ ಸ್ಥಳೀಯ ಮುಖಂಡ ಆಸೀಂ ಷರೀಫ್ನನ್ನು ಕೆಲ ದಿನಗಳ ಹಿಂದೆ ವಶಕ್ಕೆ ಪಡೆದಿದ್ದ ಎನ್‌ಐಎ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಕೋರ್ಟ್‌ಗೆ ಹಾಜರು ಪಡಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದೀಗ ಸಲ್ಲಿಕೆಯಾಗಿರುವುದು ರುದ್ರೇಶ್ ಹತ್ಯೆ ಪ್ರಕರಣ ಚಾರ್ಜ್‌ಶೀಟ್ ಮಾತ್ರ. ಆರೋಪಿಗಳು ಕೇರಳ ಹಾಗೂ ಇತರೆಡೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಖೆಯಿದೆ. ಈ ಹಿನ್ನೆಲೆಯಲ್ಲಿ ಐವರು ಆರೋಪಿಗಳನ್ನು ಮತ್ತಷ್ಟು ದಿನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೋರ್ಟ್‌ಗೆ ಸದ್ಯದಲ್ಲೇ ಮನವಿ ಮಾಡಲಾಗುವುದು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.