ಮುಂದಿನ ತಿಂಗಳು ಸಾರ್ಕ್ ಉಪಗ್ರಹ ಉಡಾವಣೆ
Team Udayavani, Mar 19, 2017, 3:50 AM IST
ಬೆಂಗಳೂರು: ಪ್ರಧಾನಿ ಮೋದಿ ಅವರ ಕನಸಿನ ಬಾಹ್ಯಾಕಾಶ ಯೋಜನೆ “ಸೌತ್ ಏಷ್ಯಾ ಸೆಟ್‌ಲೆಟ್ ಪ್ರಾಜೆಕ್ಟ್ (ಆರಂಭ
ದಲ್ಲಿ ಸಾರ್ಕ್ ಹೆಸರಿತ್ತು)’ ಉಪಗ್ರಹದ ಉಡಾವಣೆಗೆ ಮುಹೂರ್ತ ನಿಗದಿಯಾಗಿದೆ. ಪಾಕಿಸ್ಥಾನ ಹೊರತು ಪಡಿಸಿ ದಂತೆ, ಸಾರ್ಕ್ ದೇಶಗಳಿಗೆ ಸಂವಹನ ಸೇವೆ ಒದಗಿಸಲು ಮೋದಿ ಉಡುಗೊರೆ ರೂಪ ದಲ್ಲಿ ನೀಡುವ ಈ ಉಪಗ್ರಹದ ಉಡಾವಣೆ ಎಪ್ರಿಲ್‌ನಲ್ಲಿ ಆಂಧ್ರದ ಶ್ರೀಹರಿ ಕೋಟಾದಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ್‌ಕುಮಾರ್ ತಿಳಿಸಿದ್ದಾರೆ.
ಏಕಕಾಲಕ್ಕೆ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿ ಬಿಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ವಿಶ್ವ ದಾಖಲೆ ನಿರ್ಮಿ ಸಿದೆ. ಈ ಸಾಧನೆ ಬಳಿಕ ಇಸ್ರೋದ ಅಧ್ಯಕ್ಷ ಕಿರಣ್ ಕುಮಾರ್ ಅವರು “ಉದಯವಾಣಿ’ಗೆ ಪ್ರಪ್ರಥಮ ವಿಶೇಷ ಸಂದ ರ್ಶನ ನೀಡಿದ್ದು, ಈ ವೇಳೆ ಅವರು, ಇಸ್ರೋದ ಮುಂದಿನ ಬಾಹ್ಯಾಕಾಶ ಯೋಜನೆಗಳ ಬಗ್ಗೆ ಸವಿಸ್ತಾರ ವಾಗಿ ಮಾತ ನಾಡಿದ್ದಾರೆ.
“ದಕ್ಷಿಣ ಏಷ್ಯಾ(ಸಾರ್ಕ್) ಉಪಗ್ರಹದ ಉಡಾವಣೆ ವಿಳಂಬವಾಗಿರುವುದು ನಿಜ. ಯಾವುದೇ ಉಪಗ್ರಹ ಉಡಾವಣೆಗೆ ತಯಾರಿ ನಡೆ
ಯುತ್ತಿರಬೇಕಾದರೆ, ವಿವಿಧ ಕಾರಣಗಳಿಂದ ವಿಳಂಬವಾಗುವುದು ಸಹಜ. ಈಗ, ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಎಪ್ರಿಲ್‌ನಲ್ಲಿ ಈ ಉಪಗ್ರಹದ ಉಡಾವಣೆಯಾಗಲಿದೆ. ಆದರೆ, ದಿನಾಂಕ ಇನ್ನೂ ನಿಗದಿಪಡಿಸಿಲ್ಲ. ಬೆಂಗಳೂರಿ ನಲ್ಲಿರುವ ಇಸ್ರೋ ಉಪಗ್ರಹ ಕೇಂದ್ರ ಐಸ್ಯಾಕ್‌ನಲ್ಲಿ ಉಪಗ್ರಹ ಸಿದ್ಧಗೊಂಡಿದೆ. ಶ್ರೀಹರಿಕೋಟಾದಲ್ಲಿಯೂ ಈ ಉಪಗ್ರಹದ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಾಸಾಂತ್ಯಕ್ಕೆ ಉಪಗ್ರಹವನ್ನು ಶ್ರೀಹರಿಕೋಟಾಗೆ ಕೊಂಡೊಯ್ಯಲಾಗುವುದು. ಜಿಎಸ್‌ಎಲ್‌ವಿ ಮಾರ್ಕ್ ಐಐ ರಾಕೆಟ್ ಮೂಲಕ ದಕ್ಷಿಣ ಏಷ್ಯಾ ಉಪಗ್ರಹದ ಉಡಾವಣೆಯಾಗಲಿದೆ’ ಎಂದರು.
ಜಿಎಸ್‌ಎಲ್‌ವಿ ಮಾರ್ಕ್ ಐಐಐ (3)ರೆಡಿ
“ಜಿಎಸ್‌ಎಲ್‌ವಿ ಮಾರ್ಕ್ ಐಐಐ ಇಸ್ರೋದ ಮುಂದಿರುವ ಮುಂದಿನ ಮಹತ್ವದ ಉಡಾವಣೆ ಯೋಜನೆ. ಜಿಎಸ್‌ಎಲ್‌ವಿ ಮಾರ್ಕ್ ಐಐಐ ರಾಕೆಟ್‌ನ ಕ್ರೆಯೋಜನಿಕ್ ಸ್ಟೇಜ್ ಪರೀಕ್ಷಾರ್ಥ ಉಡಾವಣೆ ಕಳೆದ ತಿಂಗಳು ಯಶಸ್ವಿಯಾಗಿ ನಡೆದಿದೆ. ಈ ಹಿನ್ನೆಲೆಯಲ್ಲಿ ಸ್ವದೇಶಿ ನಿರ್ಮಿತ ಕ್ರೆಯೋಜನಿಕ್ ಇಂಜಿನ್ ಹೊಂದಿರುವ ಥರ್ಡ್ ಜನರೇಷನ್ ರಾಕೆಟ್ ಆಗಿರುವ ಜಿಎಸ್‌ಎಲ್‌ವಿ ಮಾರ್ಕ್ ಐಐಐ ಉಡಾವಣೆ ಎಪ್ರಿಲ್ ಅಥವಾ ಮೇನಲ್ಲಿ ನಡೆಯಲಿದೆ. ಶ್ರೀಹರಿಕೋಟಾದಲ್ಲಿ ಅದರ ಉಡಾವಣೆಗೂ ಅಂತಿಮ ಹಂತದ ತಯಾರಿ ನಡೆಯುತ್ತಿದೆ. ಜಿಎಸ್‌ಎಲ್‌ವಿ ಮಾರ್ಕ್ ಐಐಐ ರಾಕೆಟ್ 4,000 ಕೆ.ಜಿ. ತೂಕದ ಉಪಗ್ರಹ ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. ಇಸ್ರೋದ ಇತಿಹಾಸದಲ್ಲಿ ಇದು ಕೂಡ ಮಹತ್ವದ ಸಂಶೋಧನೆಯಾಗಿದೆ’ ಎಂದು ಕಿರಣ್ ಕುಮಾರ್ ಹೇಳಿದರು.
ನೋಡುವ ರೀತಿ ಬದಲಾಗಿದೆ: “104 ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಉಡಾ ವಣೆ ಮಾಡಿದ ಅನಂತರ ಬೇರೆ ದೇಶಗಳು ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ನಮ್ಮ ದೇಶದ ಸಾಮರ್ಥ್ಯ ಈಗ ಜಾಗತಿಕವಾಗಿ ಗೊತ್ತಾಗಿದೆ. ಇಡೀ ವಿಶ್ವದಲ್ಲಿ ಹೊಸ ರೀತಿಯ ವಾತಾವರಣ ನಿರ್ಮಾಣವಾಗಿರುವುದು ನಿಜ. ಎಲ್ಲಿಯೂ 104 ಉಪಗ್ರಹಗಳನ್ನು ಒಟ್ಟಿಗೆ ಉಡಾವಣೆ ಮಾಡಿ ವಿಶ್ವದಾಖಲೆ ಮಾಡಬೇಕೆಂಬ ಉದ್ದೇಶ ಇಸ್ರೋಗೆ ಇರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
“ಈ ಲಾಂಚ್ ವೇಳೆ 720 ಕೆ.ಜಿ. ತೂಕದ ನಮ್ಮ ಉಪಗ್ರಹಗಳನ್ನಷ್ಟೇ ಉಡಾವಣೆಗೆ ಸಿದ್ಧತೆ ನಡೆಸಲಾಗಿತ್ತು. ನಮ್ಮ ರಾಕೆಟ್‌ನಲ್ಲಿ ಇನ್ನೂ ಅಷ್ಟೇ ತೂಕದ ಉಪಗ್ರಹಗಳ ಉಡಾವಣೆಗೆ ಜಾಗ, ಸಾಮರ್ಥ್ಯವಿತ್ತು. ಅದೇ ವೇಳೆಗೆ, ಸಣ್ಣ ದೇಶಗಳೂ ಉಪಗ್ರಹ
ಗಳನ್ನು ಉಡಾಯಿಸುವುದಕ್ಕೆ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿತ್ತು. ಈ ಅವಕಾಶವನ್ನು ಸದುಪಯೋಗಪಡಿಸಿ ನಮ್ಮ ದೇಶದ ಉಡಾವಣೆ ಖರ್ಚು ಕಡಿಮೆಗೊಳಿಸುವುದು ಇಸ್ರೋದ ಉದ್ದೇಶವಾಗಿತ್ತು. ಸಣ್ಣ ಗಾತ್ರದ ಉಪಗ್ರಹ ಏಕಕಾಲಕ್ಕೆ ಬಾಹ್ಯಾಕಾಶಕ್ಕೆ ಹಾರಿ ಬಿಡುವುದೂ ದೊಡ್ಡ ಸವಾಲಿನ ಕೆಲಸ. ಅಂತರಿಕ್ಷದಲ್ಲಿ ಅವು ಒಂದಕ್ಕೊಂದು ಢಿಕ್ಕಿ ಹೊಡೆಯುವ ಅಪಾಯ ವಿರುತ್ತದೆ. ಆದರೆ, ನಮ್ಮ ವಿಜ್ಞಾನಿಗಳು 3-4 ತಿಂಗಳು ಅಧ್ಯಯನ ಮಾಡಿ ಆ ಉಡಾವಣೆ ಯನ್ನು ಯಶಸ್ವಿಗೊಳಿಸಿದರು’ ಎಂದರು.
ಜಿಎಸ್‌ಎಲ್‌ವಿ ಮಾರ್ಕ್ ಐಐಐ (3) ರಾಕೆಟ್
ನೆಕ್ಸ್ಟ್ ಜನರೇಷನ್ ರಾಕೆಟ್ ಎಂದೇ ಕರೆಸಿಕೊಂಡಿರುವ ಸಂಪೂರ್ಣ ಸ್ವದೇಶಿ ನಿರ್ಮಿತ ಜಿಎಸ್‌ಎಲ್‌ವಿ ಮಾರ್ಕ್ ಐಐಐ ರಾಕೆಟ್‌ನ ಉಡಾವಣೆಯೂ ಇಸ್ರೋದ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು. ಸುಮಾರು 3.2 ಟನ್ ತೂಕದ ಉಪಗ್ರಹ ಹೊತ್ತ ಜಿಸ್ಯಾಟ್-19 ಉಡಾವಣೆಯೂ ಎಪ್ರಿಲ್‌ನಲ್ಲಿ ನಡೆಯಲಿರುವುದು ವಿಶೇಷ. ಇದು ನಮ್ಮ ದೇಶದ ಬಾಹ್ಯಾಕಾಶಕ್ಕೆ ಅತ್ಯಂತ ಪ್ರಬಲಶಾಲಿ ರಾಕೆಟ್ ಆಗಿದ್ದು, ಸುಮಾರು 4 ಟನ್ ಭಾರದ ಉಪಗ್ರಹ ಹೊತ್ತೂಯ್ಯುವ ಸಾಮರ್ಥ್ಯವಿದೆ. ಇದು ಜಿಎಸ್‌ಎಲ್‌ವಿ ಮಾರ್ಕ್ ಐಐನ ಎರಡರಷ್ಟು ಜಾಸ್ತಿ ಸಾಮರ್ಥ್ಯ ಹೊಂದಿದೆ. 2 ಟನ್‌ಗಿಂತ ಜಾಸ್ತಿ ತೂಕದ ಉಪಗ್ರಹ ಉಡಾಯಿಸಬೇಕಾದರೆ ಇಸ್ರೋ, ಯುರೋಪಿಯನ್ ರಾಕೆಟ್ ಅನ್ನು ಅವಲಂಬಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ 104 ವಿಶ್ವ ದಾಖಲೆ ಉಡಾವಣೆ ಬಳಿಕ ಇದೀಗ ಜಿಎಸ್‌ಎಲ್‌ವಿ ಮಾರ್ಕ್ ಐಐಐ ರಾಕೆಟ್‌ನಿಂದ ಜಿಸ್ಯಾಟ್-19 ಉಪಗ್ರಹಗಳ ಉಡಾವಣೆ ಮೂಲಕ ಮತ್ತೂಂದು ಮಹತ್ವದ ಸಾಧನೆಗೆ ಇಸ್ರೋ ವಿಜ್ಞಾನಿಗಳು ಅಣಿಯಾಗಿದ್ದಾರೆ.
ಅಂತರಿಕ್ಷಕ್ಕೆ ಸಾರ್ಕ್
ಸೌತ್ ಏಷ್ಯಾ ಸೆಟ್‌ಲೆçಟ್ ಪ್ರಾಜೆಕ್ಟ್ ಮೂಲಕ ನೆರೆ ದೇಶಗಳ ನಡುವಿನ ಬಾಂಧವ್ಯ ಹೆಚ್ಚಿಸುವುದು ಪ್ರಧಾನಿ ಮೋದಿ ಆಶಯ. ಸಾರ್ಕ್ ದೇಶಗಳಾದ ನೇಪಾಲ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್‌ನಂಥ ಸಣ್ಣ ದೇಶಗಳಿಗೆ ಪ್ರಕೃತಿ ವಿಕೋಪಗಳ ಬಗ್ಗೆ ಮುನ್ನೆಚ್ಚರಿಕೆ, ಡಿಟಿಎಚ್ ಸೇವೆಗೆ ಉಪಗ್ರಹ ತಯಾರಿಸಿ ಉಡುಗೊರೆ ರೂಪದಲ್ಲಿ ನೀಡುವುದಾಗಿ ನೇಪಾಲದಲ್ಲಿ 2014ರಲ್ಲಿ ನಡೆದಿದ್ದ ಸಾರ್ಕ್ ಸಮ್ಮೇಳನದಲ್ಲಿ ಮೋದಿ ಘೋಷಣೆ ಮಾಡಿದ್ದರು. ಆದರೆ ಉರಿ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ ಕಳೆದ ವರ್ಷ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಸಾರ್ಕ್ ಸಮ್ಮೇಳನ ರದ್ದಾಗಿತ್ತು. ಆಗ ಇಸ್ರೋ ಉಡಾವಣೆ ಮಾಡಬೇಕಾಗಿದ್ದ ಈ ಸಾರ್ಕ್ ಉಪಗ್ರಹದ ಬಗ್ಗೆಯೂ ಪಾಕಿಸ್ಥಾನ ಅಪಸ್ವರವೆತ್ತಿತ್ತು. ಹೀಗಾಗಿ, ಅಮೆರಿಕದಲ್ಲಿ ನಡೆದಿದ್ದ ವಿಶ್ವಸಂಸ್ಥೆ ಸಮ್ಮೇಳನದ ವೇಳೆ ಸಾರ್ಕ್ ಉಪಗ್ರಹ ಉಡಾವಣೆ ಗುಂಪಿನಿಂದ ಪಾಕಿಸ್ಥಾನವನ್ನು ಕೈಬಿಡುವ ತೀರ್ಮಾನ ಕೈಗೊಳ್ಳಲಾಯಿತು. ಅನಂತರ ಸಾರ್ಕ್ ಬದಲಿಗೆ “ಸೌತ್ ಏಷ್ಯಾ ಸೆಟ್‌ಲೆçಟ್’ ಎಂದು ಮರು ನಾಮಕರಣ ಮಾಡಲಾಯಿತು. ಈ ರೀತಿ ನೆರೆ ರಾಷ್ಟ್ರಗಳ ನಡುವಿನ ವಿವಿಧ ರೀತಿಯ ವಿವಾದಗಳಿಂದಾಗಿ 2014ರಲ್ಲಿ ಮೋದಿ ಘೋಷಣೆ ಮಾಡಿದ್ದ ಈ ಉಪಗ್ರಹ ಯೋಜನೆ ಎರಡು ವರ್ಷಗಳ ಬಳಿಕ ಇಸ್ರೋದಿಂದ ಸಾಕಾರಗೊಳ್ಳುತ್ತಿರುವುದು ಗಮನಾರ್ಹ.
ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ಕೆಐಎಡಿಬಿಗೆ ಬಂಪರ್: ಸಾಲ ಮಿತಿ 5000 ಕೋ.ರೂ.ಗೆ ಹೆಚ್ಚಳ
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
ನೇತ್ರಾವತಿ ನದಿಯಲ್ಲಿ ಗೋಮಾಂಸ ಪತ್ತೆ ಮತಾಂಧತೆ ತೋರಿಸುತ್ತದೆ: ಸಿ.ಟಿ. ರವಿ ಕಿಡಿ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.