ನಾಳೆಯಿಂದ ಬಿಗ್ ಬಜಾರ್‌ನಲ್ಲಿ “ಸಬ್ಸೆ ಸಸ್ತೆ 5 ದಿನ್’ ಉತ್ಸವ
Team Udayavani, Jan 22, 2019, 6:41 AM IST
ಬೆಂಗಳೂರು: ದೇಶದ ಪ್ರಮುಖ ಸರಕು ಮಾರಾಟ ಸಂಸ್ಥೆಯಾಗಿರುವ ಬಿಗ್ ಬಜಾರ್ ಮಳಿಗೆಗಳಲ್ಲಿ ಜ.23ರಿಂದ 27ವರೆಗೆ ವಿಶೇಷ ರಿಯಾಯಿತಿಗಳನ್ನು ಒಳಗೊಂಡ “ಸಬ್ಸೆ ಸಸ್ತೆ 5 ದಿನ್’ ಉತ್ಸವ ನಡೆಯಲಿದೆ.
ದೇಶದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಖರೀದಿ ಉತ್ಸವ ಇದಾಗಿದ್ದು, ಕಳೆದ 12 ವರ್ಷಗಳಿಂದ ಬಿಗ್ ಬಜಾರ್ ಉತ್ಸವ ಆಯೋಜಿಸುತ್ತಿದೆ. ಅದರಂತೆ ಉತ್ಸವದ ವೇಳೆ ಗ್ರಾಹಕರಿಗೆ ಗೃಹೋಪಯೋಗಿ, ಅಡುಗೆಮನೆ ಸಲಕರಣೆ, ಆಟಿಕೆ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಎಲ್ಲ ರೀತಿಯ ಉತ್ಪನ್ನಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ.
ಉತ್ಸವದ ಐದು ದಿನಗಳ ಅವಧಿಯಲ್ಲಿ 3 ಸಾವಿರ ರೂ. ಮೊತ್ತದ ಖರೀದಿ ಮಾಡುವ ಗ್ರಾಹಕರಿಗೆ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇನ್ನು ರೂಪೇ ಕಾರ್ಡ್ ಬಳಸುವವರಿಗೂ ರಿಯಾಯಿತಿ ಇದೆ. ಜತೆಗೆ ಪೇಟಿಎಂನಿಂದ ಬಿಗ್ ಬಜಾರ್ ಗಿಫ್ಟ್ ವೋಚರ್ ಖರೀದಿಸುವವರಿಗೆ ಶೇ.50ರಷ್ಟು ಕ್ಯಾಷ್‌ಬ್ಯಾಕ್ ಹಾಗೂ ಹೆಚ್ಚುವರಿಯಾಗಿ ಶೇ.20ರಷ್ಟು ಹಣ ಬರಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಂಸ್ಥೆಯು ತನ್ನ ಗ್ರಾಹಕರಿಗೆ ಅನೇಕ ಅಚ್ಚರಿ ಕೊಡೆಗಳನ್ನು ನೀಡುತ್ತಿದೆ. ಹೀಗಾಗಿ ಉತ್ಸವ ನಡೆಯುವ ಐದು ದಿನಗಳು ನೀಡುವ ರಿಯಾಯಿತಿಯನ್ನು ಗ್ರಾಹಕರು ಪಡೆಯಬೇಕು ಎಂದು ಸಂಸ್ಥೆಯ ಸಿಇಒ ಸದಾಶಿವ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.