ಸಾಲದ ಸಹವಾಸವಿಲ್ಲ, ವಾಸ್ತವ ದತ್ತ ಚಿತ್ತ


Team Udayavani, Mar 26, 2017, 12:14 PM IST

keerthi-byline.jpg

ಬೆಂಗಳೂರು: ಜನಪ್ರಿಯತೆಗಾಗಿ ಸಾಲದ ಪ್ರಮಾಣ ಹೆಚ್ಚಿಸಿಕೊಂಡು ಗಜ ಗಾತ್ರದ ಬಜೆಟ್‌ ಮಂಡಿಸಿ ಬಳಿಕ ಅರ್ಧದಷ್ಟನ್ನೂ ಜಾರಿಗೊಳಿಸಲಾಗದೆ ಹಿಂದೆಲ್ಲ ಬೋಗಸ್‌ ಬಜೆಟ್‌ ಎನ್ನುವಷ್ಟರ ಮಟ್ಟಿಗೆ ಕುಖ್ಯಾತಿ ಪಡೆದಿದ್ದ ಬಿಬಿಎಂಪಿ ಬಜೆಟ್‌ ಈ ಬಾರಿ ವಾಸ್ತವದ ಹಾದಿಗೆ ಬಂದಿದೆ. 

ತನ್ನ ಸ್ವಂತ ಆದಾಯದ ಮಿತಿಯೊಳಗೆ, ಸರ್ಕಾರದ ಅನುದಾನದ ನೆರವಿನೊಂದಿಗೆ ನಗರವನ್ನು ಅಭಿವೃದ್ಧಿ­ಪಡಿ­ಸುವ ರೂಪು-ರೇಷೆಯೊಂದಿಗೆ ಮಂಡಿಸಿರುವ 2017-18ನೇ ಸಾಲಿನ ಪಾಲಿಕೆಯ ಸುವರ್ಣ ಮುಂಗಡ ಪತ್ರ ಒಂದು ರೀತಿಯಲ್ಲಿ ನಿರ್ವಹಣಾ ಬಜೆಟ್‌ ಎನ್ನಲು ಅಡ್ಡಿಯಿಲ್ಲ.

ಹೊಸ ಯೋಜನೆಗಳ ಘೋಷಣೆಯಿಲ್ಲದಿದ್ದರೂ ಚಾಲ್ತಿಯಲ್ಲಿರುವ ಕಾಮಗಾರಿಗಳ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಶೇ.45 ರಷ್ಟು ಅನದಾನ ನಿಗದಿಪಡಿಸಿ­ರುವುದು ಒಂದಷ್ಟು ಭರವಸೆ ಮೂಡಿಸಿದೆ. ಇದರ ಜತೆಗೆ, ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ಸಹಜವಾಗಿ ಮತ ಸೆಳೆಯುವ ಕಸರತ್ತೂ ಬಜೆಟ್‌ನಲ್ಲಿ ಕಾಣಿಸುತ್ತದೆ. ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಯಾದರೂ, ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪವಿಲ್ಲದಿರುವುದು ಸ್ವಲ್ಪ ಮಟ್ಟಿನ ತಾರತಮ್ಯ ಎನಿಸಿದೆ. 

ವಾಸ್ತವದ ಆಯವ್ಯಯ: ಈ ಬಾರಿಯ ಪಾಲಿಕೆ ಬಜೆಟ್‌ ಮೊತ್ತ ಕಳೆದ ಬಾರಿಯ ಬಜೆಟ್‌ಗಿಂತ ಸುಮಾರು 80 ಕೋಟಿ ರೂ. ಇಳಿಕೆಯಾಗಿದೆ. ಆಸ್ತಿ ತೆರಿಗೆ ಹಾಗೂ ಒಎಫ್ಸಿ ಶುಲ್ಕದಿಂದ ಕಳೆದ ವರ್ಷಕ್ಕಿಂತ 600 ಕೋಟಿ ರೂ. ಹೆಚ್ಚು ಆದಾಯ ನಿರೀಕ್ಷಿಸಲಾಗಿದೆ. ಬಜೆಟ್‌ ಗಾತ್ರ ಕುಗ್ಗಿರುವುದು ಆಯವ್ಯಯ ವಾಸ್ತವಕ್ಕೆ ಮರಳಿರುವುದರ ಕುರುಹು. 

ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದ ಬಿಬಿಎಂಪಿಯ ಸ್ಥಿತಿ ತುಸು ಸುಧಾರಿಸಿದ್ದು, ಇನ್ನಷ್ಟು ಆರ್ಥಿಕ ಶಿಸ್ತಿನ ಮೂಲಕ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಒಂದಿಷ್ಟು ಭರವಸೆಯ ಕ್ರಮಗಳನ್ನು ಬಜೆಟ್‌ನಲ್ಲಿ ಕೈಗೊಳ್ಳಲಾಗಿದೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ವಿಚಾರದಲ್ಲಿ ಅಂಕಿ-ಸಂಖ್ಯೆಗಳ ಮ್ಯಾಜಿಕ್‌ಗೆ ಮೊರೆ ಹೊಗದೆ ನಿಖರ ಆದಾಯ, ಖಚಿತ ವೆಚ್ಚದ ಸ್ಪಷ್ಟ ಮಾರ್ಗಗಳ ಉಲ್ಲೇಖವಿದೆ. 

ಸಾಲದ ಶೂಲದಿಂದ ದೂರ: ಸತತ ಎರಡನೇ ವರ್ಷವೂ ಸಾಲ ಮಾಡದಿರಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ. ಇಷ್ಟಾದರೂ ಪಾಲಿಕೆಗೆ ಇನ್ನೂ 1,434 ಕೋಟಿ ರೂ. ಸಾಲವಿದೆ. ಈ ಸಾಲವನ್ನು ದುಬಾರಿ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿದರಕ್ಕೆ ಪರಿವರ್ತಿಸಿಕೊಳ್ಳುವ ಭರವಸೆ ನೀಡಲಾಗಿದೆ. ಇದರೊಂದಿಗೆ ವಾರ್ಷಿಕ 112 ಕೋಟಿ ರೂ. ಬಡ್ಡಿ ದರ ಕಡಿತವಾಗಲಿದೆ ಎಂದು ಉಲ್ಲೇಖೀಸಲಾಗಿದೆ. ಇದು ಕಾರ್ಯಗತವಾದರೆ ಪಾಲಿಕೆಗೆ ನಿಜಕ್ಕೂ ಉಳಿತಾಯದ ಪ್ರಯೋಜನ ಸಿಗಲಿದೆ.

ಈ ಬಾರಿಯ ಬಜೆಟ್‌ನಲ್ಲಿ ಬೃಹತ್‌ ಯೋಜನೆಗಳನ್ನು ರಾಜ್ಯ ಸರ್ಕಾರದ ಅನುದಾನಡಿ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಿರುವುದರಿಂದ ಪಾಲಿಕೆಯ ಮೇಲೆ ಆರ್ಥಿಕ ಹೊರೆ ತಪ್ಪಿದಂತಾಗಿದೆ. 9,241 ಕೋಟಿ ರೂ. ಮೊತ್ತದ ಬಜೆಟ್‌ ಮಂಡನೆಯಾಗಿದ್ದರೂ ಇದರಲ್ಲಿ 4,249 ಕೋಟಿ ರೂ. ಅನುದಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನೇ ನೆಚ್ಚಿಕೊಳ್ಳಲಾಗಿದೆ. ರಾಜ್ಯ ಸರ್ಕಾರದಿಂದ 3,891 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದಿಂದ 358 ಕೋಟಿ ರೂ. ಅನುದಾನ ನಿರೀಕ್ಷೆಯಲ್ಲಿ ಬಜೆಟ್‌ನ ಅರ್ಧದಷ್ಟು ಕಾರ್ಯಕ್ರಮ­ಗಳು ಅನುಷ್ಟಾನಗೊಳ್ಳಬೇಕಿದೆ.

ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜಿಗೆ ಕಾರಣವಾಗಿದ್ದ ತ್ಯಾಜ್ಯದ ಸಮಸ್ಯೆ ನಿವಾ­ರಣೆಗೆ ಬಜೆಟ್‌ನಲ್ಲಿ ಒತ್ತು ಕೊಟ್ಟು, ಆಯವ್ಯಯ ಗಾತ್ರದ 10 ನೇ ಒಂದು ಭಾಗ ಅನುದಾನವನ್ನು ಕಾಯ್ದಿರಿಸಲಾಗಿದೆ. ಕಲ್ಯಾಣ ಕಾರ್ಯಕ್ರಮಗಳಿಗೆ ಶೇ.8 ರಷ್ಟು ಅನುದಾನ ಒದಗಿಸಲಾಗಿದೆ. ಪರಿಸರ ಸಂರಕ್ಷಣೆ ಮತ್ತು ಕೆರೆಗಳ ಅಭಿವೃದ್ಧಿಗೆ ಶೇ.15ರಷ್ಟು ಅನುದಾನವಿದ್ದು, ಹಸಿರು ಉಳಿಸುವ ಪ್ರಯತ್ನವನ್ನೂ ಬಜೆಟ್‌ನಲ್ಲಿ ಕಾಣಬಹುದು. ಈ ಮೂರು ವಲಯಕ್ಕೆ ಶೇ.33 ರಷ್ಟು ಅನುದಾನ ನಿಗದಿಯಾಗಿದೆ.

ತಾರತಮ್ಯ: ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗ ಸುಧಾರಣೆ, ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆಗಳ ಮುಂದುವರಿಕೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯಕ್ಕೆ ಬೃಹತ್‌ ಮೊತ್ತ ಕಾಯ್ದಿರಿಸಿದೆ. ಆದರೆ ಪಾಲಿಕೆಗೆ ಸೇರಿ 10 ವರ್ಷ ಕಳೆದರೂ ಮೂಲ ಸೌಕರ್ಯವಿಲ್ಲದೆ ಸೊರಗಿರುವ 110 ಹಳ್ಳಿಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸದಿರುವುದು ಅಸಮತೋಲ ನ ತೋರಿಸುತ್ತದೆ. ಮೂರು ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಸೂಪರ್‌ಸ್ಟೆಷಾಲಿಟಿ ಆಸ್ಪತ್ರೆ ನಿರ್ಮಾಣ ಘೋಷಣೆ ಮಾಡಲಾಗಿದೆ. ಅದರ ಬದಲಿಗೆ ಅಗತ್ಯವಿರುವ ಕಡೆ ಆಸ್ಪತ್ರೆ ಆರಂಭಿಸಬಹುದಿತ್ತು. 

ಪಾಲಿಕೆಯ ಕೆಲ ವರ್ಷಗಳ ಬಜೆಟ್‌ಗೆ ಹೋಲಿಸಿ ದರೆ ವಾಸ್ತವಕ್ಕೆ ಹತ್ತಿರದಲ್ಲಿರುವ ಹಾಗೂ ಬೃಹತ್‌ ಮೊತ್ತದ ಯೋಜನೆಗಳ ಪ್ರಸ್ತಾಪ­ವಿಲ್ಲದೇ ನಿರ್ವಹ ಣೆಗೆ ಒತ್ತು ನೀಡಿರುವ ಬಜೆಟ್‌ ಇದಾಗಿದೆ. ಆದರೆ,  ಈ  ಎಲ್ಲ ಕ್ರಮಗಳೂ ಪಾಲಿಕೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಯಶಸ್ವಿಯಾಗು­ವುದೇ ಎಂಬುದನ್ನು ಕಾದು ನೋಡಬೇಕಿದೆ.

ಜನಪ್ರಿಯ ಕಾರ್ಯಕ್ರಮಗಳ ಮಂತ್ರ 
ಪ್ರತಿ ವಾರ್ಡ್‌ಗೆ 50 ಹೊಲಿಗೆ ಯಂತ್ರ, 50 ಬೈಸಿಕಲ್‌, ಕಸವಿಂಗಡಣೆಗಾಗಿ ನಾಗರಿಕರಿಗೆ ಎರಡು ಕಸದ ಬುಟ್ಟಿ, ಚೀಲ ವಿತರಣೆ, ಬಡ ಅರ್ಹ ರೋಗಿಗಳಿಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಉಚಿತ “ಸ್ಟಂಟ್‌’ ಅಳವಡಿಕೆ, 20 ಡಯಾಲಿಸಿಸ್‌ ಕೇಂದ್ರ, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಒದಗಿಸುವ ಮೂಲಕ ಜನಪ್ರಿಯ ಕಾರ್ಯಕ್ರಮಳಿಗೂ ಒತ್ತು ನೀಡಿದಂತಾಗಿದೆ.

ಖಾಲಿ ಹುದ್ದೆಗಳ ಭರ್ತಿ ಸ್ಪಷ್ಟತೆ ಇಲ್ಲ
ಆಡಳಿತ ಸುಧಾರಣೆಗೆ ಅವಶ್ಯಕವಾದ ಸಿಬ್ಬಂದಿ -ನೌಕರರ ನೇಮಕಾತಿ ಬಗ್ಗೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಿದಂತಿಲ್ಲ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಅಗತ್ಯವಾದ ನೌಕರ, ಸಿಬ್ಬಂದಿ ನೇಮಕದ ಬಗ್ಗೆ ಪ್ರಸ್ತಾಪವೇ ಇಲ್ಲ. ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಲಾಗಿದ್ದರೂ ಯಾವ ವಿಭಾಗದಲ್ಲಿ, ಎಷ್ಟು ಹುದ್ದೆ ಭರ್ತಿ ಮಾಡಲಾಗುತ್ತದೆ ಎಂಬ ವಿವರವಿಲ್ಲ. ಪಾಲಿಕೆಯಲ್ಲಿ ಒಟ್ಟು 18000 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ ಅರ್ಧದಷ್ಟು ಅಂದರೆ 9000 ಹುದ್ದೆ ಖಾಲಿ ಇದೆ. 

ದಿಟ್ಟ ಕ್ರಮದ ಎಚ್ಚರಿಕೆ
ನಕ್ಷೆ ಉಲ್ಲಂ ಸಿ ಕಟ್ಟಡ ನಿರ್ಮಿಸಿದರೆ ನೆಲ ಮಹಡಿ ಜಫ್ತಿ, ಅನುಮತಿ ಪಡೆಯದೆ ರಸ್ತೆ ಅಗೆದವರಿಗೆ 10ರಿಂದ 25 ಲಕ್ಷ ರೂ. ದಂಡ ವಿಧಿಸುವ ದಿಟ್ಟ ಕ್ರಮದ ಎಚ್ಚರಿಕೆ ಬಜೆಟ್‌ನಲ್ಲಿ ನೀಡಿರುವುದು ಮೆಚ್ಚುವಂತದ್ದೇ ಎನ್ನ ಬಹುದು.  ಈಗಲಾದರೂ ಅಕ್ರಮಕ್ಕೆ ಕಡಿ­ವಾಣ ಹಾಕುವ ನಿಟ್ಟಿನಲ್ಲಿ ಪಾಲಿಕೆ ದಿಟ್ಟತನ ತೋರಿದೆ.

ವಿವಿಧ ವಿಭಾಗಗಳಿಗೆ ಏನೇನು ಕಾರ್ಯಕ್ರಮ?
* ಆಸ್ತಿಗಳು ಮತ್ತು ಸ್ವತ್ತುಗಳ ನಿರ್ವಹಣೆ
* ಸ್ಥಿರ ಮತ್ತು ಚರಾಸ್ತಿಗಳ ರಕ್ಷಣೆಗಾಗಿ ತಂತ್ರಾಂಶ ಅಭಿವೃದ್ಧಿ
* ಪಾಲಿಕೆಯ ಆಸ್ತಿಗಳ ಕುರಿತು ಸಮಗ್ರ ಸಮೀಕ್ಷೆ
* ಪಾಲಿಕೆಯ ರಸ್ತೆ, ಸುರಂಗ ಮಾರ್ಗ, ಉದ್ಯಾನ, ಕಟ್ಟಡಗಳ ಮಾಹಿತಿ ತಂತ್ರಾಂಶದಲ್ಲಿ ಅಳವಡಿಕೆ
* ಪಶುಪಾಲನೆ ವಿಭಾಗ
* ಆರೋಗ್ಯ ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲು 1.50 ಕೋಟಿ ರೂ.
* 8 ವಲಯಗಳಲ್ಲಿ ಮೃತ ಪ್ರಾಣಿಗಳ ದಹನ ಘಟಕಕ್ಕೆ 2 ಕೋಟಿ ರೂ.
* ಪ್ರಾಣಿ ಹಿಡಿಯುವ ವಾಹನ, ಶವ ಸಾಗಾಣೆ ವಾಹನಗಳ ಖರೀದಿಗೆ 3 ಕೋಟಿ ರೂ.
* ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮಕ್ಕೆ 3 ಕೋಟಿ ರೂ.
* ಆರೋಗ್ಯ ವೈದ್ಯಕೀಯ ಇಲಾಖೆ
* ಆರೋಗ್ಯ ಘಟಕಗಳಲ್ಲಿ ಜನೌಷಧಿ (ಜನರಿಕ್‌ ಔಷಧಾಲಯ) ಸ್ಥಾಪನೆ
* ರೆಫ‌ರಲ್‌ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ತಜ್ಞ ವೈದ್ಯರ ಸೇವೆಗಳ ಬಳಕೆ
* ನೂತನ ಆಸ್ಪತ್ರೆಗಳಲ್ಲಿ ಸಮಗ್ರ ಆರೋಗ್ಯ ಸೇವೆ 
* ನಾಗರಿಕರ ಸೇವೆಗೆ ಸಂಚಾರಿ ಆರೋಗ್ಯ ಘಟಕ ಪ್ರಾರಂಭಿಸಲು 3 ಕೋಟಿ ರೂ.
* ಹಿರಿಯ ನಾಗರಿಕರಿಗಾಗಿ ದಾಸಪ್ಪ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ಘಟಕ
* ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ 73 ಕೋಟಿ ರೂ.ಕಲ್ಯಾಣ
* ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗಾಗಿ 167 ಕೋಟಿ ರೂ.
* ದಿವ್ಯಾಂಗ ಚೇತನರು ಆರ್ಥಿಕ ಸ್ವಾವಲಂಬಿಗಳಾಗಲು 55 ಕೋಟಿ ರೂ.
* ಹಿರಿಯ ನಾಗರಿಕರ ಕಲ್ಯಾಣಕ್ಕೆ 1 ಕೋಟಿ ರೂ.
* ಟೈಲರಿಂಗ್‌, ನಿಟ್ಟಿಂಗ್‌ ಮತ್ತು ಎಂಬ್ರಾಯಿಡರಿ ಶಾಲೆಗಳ ಕಟ್ಟಡಗಳ ನಿರ್ಮಾಣಕ್ಕೆ 4 ಕೋಟಿ ರೂ.
* ಎಲ್ಲ ವಲಯಗಳಲ್ಲಿ ರಾತ್ರಿ ಆಶ್ರಯ ತಾಣಗಳ ನಿರ್ಮಾಣಕ್ಕೆ 2 ಕೋಟಿ ರೂ.
* ಚಿರಶಾಂತಿ ಧಾಮ
* ರುದ್ರಭೂಮಿಗಳ ಸಮಗ್ರ ಸುಧಾರಣೆ ಕೈಗೊಳ್ಳಲು 125 ಕೋಟಿ ರೂ. ನಿಗದಿ
* ಚಾಮರಾಜಪೇಟೆ ರುದ್ರಭೂಮಿಯ ಆವರಣದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಹೊಸ ವಿದ್ಯುತ್‌ ಚಿತಾಗಾರ ನಿರ್ಮಾಣ
* ರುದ್ರಭೂಮಿಗಳ ಒತ್ತುವರಿ ಸರ್ವೆ ನಡೆಸಿ ವರದಿ ನೀಡುವಂತೆ ಸರ್ಕಾರಕ್ಕೆ ಮನವಿ
* ಮುಂದಿನ ಮಾಸ್ಟರ್‌ ಪ್ಲಾನ್‌ನಲ್ಲಿ ರುದ್ರಭೂಮಿ ಮತ್ತು ಚಿತಾಗಾರಗಳಿಗೆ ಸ್ಥಳಾವಕಾಶ ಕಾಯ್ದಿರಿಸುವಂತೆ ಸರ್ಕಾರಕ್ಕೆ ಮನವಿ
* ಕಲ್‌ಪಲ್ಲಿ ರುದ್ರಭೂಮಿಯಲ್ಲಿರುವ ಮಾಜಿ ರಾಷ್ಟ್ರಪತಿ ದಿವಂಗತ ನೀಲಂ ಸಂಜೀವ ರೆಡ್ಡಿ ಸಮಾಧಿ ಅಭಿವೃದ್ಧಿಗೆ 1 ಕೋಟಿ ರೂ. 
* ರುದ್ರಭೂಮಿಗಳಲ್ಲಿ ಗಿಡಗಳನ್ನು ನೆಡುವುದು ಮತ್ತು ನಿರ್ವಹಣೆಗಾಗಿ 25 ಕೋಟಿ ರೂ.
* ರುದ್ರಭೂಮಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ನೀಡಲಾಗುತ್ತಿರುವ ಗೌರವ ಧನ ಹೆಚ್ಚಳ
* ವಿಲ್ಸನ್‌ ಗಾರ್ಡನ್‌ ರುದ್ರಭೂಮಿಯ ಸುಂದರೀ­ಕರಣ ಮತ್ತು ನಿರ್ವಹಣೆಗೆ 1.20 ಕೋಟಿ ರೂ.
* ವಿದ್ಯುತ್‌ ಚಿತಾಗಾರ ನಿರ್ವಹಣೆಗೆ 1.30 ಕೋಟಿ ರೂ.
* ಮಾರುಕಟ್ಟೆಗಳ ಮತ್ತು ಪಾರಂಪಾರಿಕ ಕಟ್ಟಡಗಳ ನವೀಕರಣ ಮತ್ತು ನಿರ್ವಹಣೆಗಾಗಿ 3 ಕೋಟಿ ರೂ.

* ಎಂ.ಕೀರ್ತಿಪ್ರಸಾದ್‌ 

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.