23ರಂದು ಸಮುದಾಯದತ್ತ ಶಾಲೆ
Team Udayavani, Oct 17, 2018, 6:55 AM IST
ಬೆಂಗಳೂರು: ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಸಮುದಾಯದತ್ತ ಶಾಲೆ ಅ.23 ಮತ್ತು ಅ.25ರಂದು ನಡೆಯಲಿದೆ. ಪ್ರಾಥಮಿಕ ಶಾಲೆಯ ಸಮುದಾಯದತ್ತ ಕಾರ್ಯಕ್ರಮ ಅ.23ರಂದು ಹಾಗೂ ಪ್ರೌಢಶಾಲೆಯ ಕಾರ್ಯಕ್ರಮ ಅ.25ರಂದು ನಡೆಸಲು ತೀರ್ಮಾನಿಸಲಾಗಿದೆ. ಎರಡನೇ ಹಂತದ ಸಮುದಾಯದತ್ತ ಶಾಲೆ 2019ರ ಏಪ್ರಿಲ್ 9 ಮತ್ತು 10ರಂದು ನಡೆಯಲಿದೆ ಎಂದು ಸಾರ್ವಜನಿಕ
ಶಿಕ್ಷಣ ಇಲಾಖೆ ತಿಳಿಸಿದೆ.
ಸಮುದಾಯದತ್ತ ಶಾಲೆ ಬೆಳಗ್ಗೆ 10.30ರಿಂದ ಆರಂಭಗೊಂಡು ಮಧ್ಯಾಹ್ನ 3.30ರವರೆಗೂ ನಡೆಯಲಿದೆ. ನಂತರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ಶಾಲೆಗೆ ಸತತ ಗೈರಾದ ವಿದ್ಯಾರ್ಥಿಗಳ ಮನೆಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಣಾಧಿಕಾರಿಗಳು ಭೇಟಿ ನೀಡಲಿದ್ದಾರೆ. ಸಮುದಾಯದತ್ತ ಶಾಲೆಯ ಮಾಹಿತಿ ಮಕ್ಕಳ ಪಾಲಕರಿಗೆ ಹಾಗೂ ಶಾಲಾಭಿವೃದಿಟಛಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಿಗೆ ಶಾಲೆಯಿಂದ ಮುಂಚಿತವಾಗಿ ತಿಳಿಸಬೇಕು. ಸಮುದಾಯದತ್ತ ಶಾಲೆ ಅಂಗವಾಗಿ ಶಾಲಾ ಪರಿಸರವನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಬೇಕು. ವಿದ್ಯಾರ್ಥಿಗಳ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನದ ಫಲಿತಾಂಶ ಅಧ್ಯಾಪಕರು ಸಿದ್ಧಪಡಿಸಬೇಕು. ಸಮುದಾಯದತ್ತ ಶಾಲೆಗೆ ಪಾಲಕರು ಕಡ್ಡಾಯವಾಗಿ ಬರುವಂತೆ ಮನವೊಲಿಸಬೇಕು ಎಂದು ಶಾಲಾ ಮುಖ್ಯಶಿಕ್ಷಕರಿಗೆ ಇಲಾಖೆ ನಿರ್ದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.