ಡ್ರಗ್ಸ್: ಮತ್ತೂಬ್ಬ ನಟಿ ಹೆಸರು ಬೆಳಕಿಗೆ
Team Udayavani, Dec 23, 2020, 12:13 PM IST
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಮತ್ತೂಬ್ಬ ಸ್ಯಾಂಡಲ್ವುಡ್ ನಟಿಯ ಬೆನ್ನು ಬಿದ್ದಿದ್ದಾರೆ.
ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ 12ನೇ ಆರೋಪಿ ವಿನಯ್ಕುಮಾರ್ ವಿಚಾರಣೆ ವೇಳೆ ನಟಿಯ ಹೆಸರು ಬಾಯಿಬಿಟ್ಟಿದ್ದು, ಆಕೆಗೂ ಡ್ರಗ್ಸ್ ದಂಧೆಗೂ ನಂಟು ಇದೆ ಎಂಬುದು ಗೊತ್ತಾಗಿದೆ.
ಹೀಗಾಗಿ ಆಕೆಗೆ ಸದ್ಯದಲ್ಲೇ ನೋಟಿಸ್ಕೊ ಟ್ಟು ವಿಚಾರಣೆಗೆ ಕರೆಸಿಕೊಳ್ಳಲಾಗುವುದು. ಆದರೆ, ಸದ್ಯ ಆ ನಟಿ ಅಮೆರಿಕಾಕ್ಕೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಡಾ.ರಾಜ್ಕುಮಾರ್ ರಸ್ತೆ ಬ್ರಿಗೇಡ್ ಗೇಟ್ ಅಪಾರ್ಟ್ಮೆಂಟ್ ನಿವಾಸಿ ವಿನಯ್ ಕುಮಾರ್ನನ್ನು ಇತ್ತೀಚೆಗೆ ಸಿಸಿಬಿ ಪೊಲೀಸರು ಬಂಧಿಸಿ ಡಿ.28ವರೆಗೆ ವಶಕ್ಕೆ ಪಡೆದಿದ್ದರು. ತೀವ್ರ ವಿಚಾರಣೆ ವೇಳೆ ಈತನ ಜತೆಗೆ ಕನ್ನಡ ಮತ್ತೂಬ್ಬ ನಟಿ ಪೇಜ್-3 ಪಾರ್ಟಿಗಳಿಗೆ ಹೋಗುತ್ತಿದ್ದವಿಚಾರಬೆಳಕಿಗೆಬಂದಿದೆ.ಈಬಗ್ಗೆ ಸಿಸಿಬಿ ಪೊಲೀಸರು ಪೂರಕ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ವಿನಯ್, ಪೇಜ್-3 ಪಾರ್ಟಿಗಳ ಆಯೋಜಕ ಆರೋಪಿ ವೈಭವ್ ಜೈನ್ ಆಪ್ತನಾಗಿದ್ದ. ರೆಸಾರ್ಟ್, ಪಂಚತಾರಾ ಹೋಟೆಲ್ ಮತ್ತು ತೋಟದ ಮನೆಗಳಲ್ಲಿ ವೈಭವ್ ಜೈನ್ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಿಗೆ ವಿನಯ್ ಕುಮಾರ್ ವಿದೇಶಿ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ಪೊಂಗಲ್ ಸಂಭ್ರಮ: ಕೋವಿಡ್ ಮಾರ್ಗಸೂಚಿಯಂತೆ ಜಲ್ಲಿಕಟ್ಟು ಆಚರಣೆಗೆ ಅನುಮತಿ: ತಮಿಳುನಾಡು
ಅಂತಾರಾಜ್ಯ ಪೆಡ್ಲರ್ಗಳ ಬಂಧನ :
ಬೆಂಗಳೂರು: ಐಷಾರಾಮಿ ಕಾರು ಖರೀದಿಸಿ ಅದರಲ್ಲಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ಗಳನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಸನ್ನದ್ (24) ಮತ್ತು
ಮೊಹಮ್ಮದ್ ಬಿಲಾಲ್ (24) ಬಂಧಿತರು. ಆರೋಪಿಗಳಿಂದ ಹತ್ತು ಕೆ.ಜಿ.ಗಾಂಜಾ ಮತ್ತು 12 ಲಕ್ಷ ರೂ.ಬೆಲೆಬಾಳುವ ಕಾರು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮೊಹಮ್ಮದ್ ಬಿಲಾಲ್ ಎಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು, ಸನ್ನದ್ ಪಿಯುಸಿ ವ್ಯಾಸಂಗ ಮಾಡಿದ್ದಾನೆ. ಆರೋಪಿಗಳು ಡ್ರಗ್ಸ್ ದಂಧೆಯನ್ನು ವೃತ್ತಿಯ ನ್ನಾಗಿಸಿಕೊಂಡಿದ್ದಾರೆ. ಏಳೆಂಟು ವರ್ಷಗಳಿಂದ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳು ಆಂಧ್ರಪ್ರದೇಶದಿಂದ ಗಾಂಜಾ ಖರೀದಿ ಮಾಡಿ ನಗರಕ್ಕೆಕಾರಿನಲ್ಲಿ ತಂದು, ಟೆಕ್ಕಿಗಳು, ವಿದ್ಯಾರ್ಥಿ ಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಡ್ರಗ್ಸ್ ದಂಧೆಯಲ್ಲಿ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಆರೋಪಿಗಳು ಜೆ.ಸಿ.ನಗರದ ಯುಟಿಸಿ ಕಾಲೇಜು ಸಮೀಪ ಕಾರು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಐ ನಾಗರಾಜ್ ಮತ್ತು ಪಿಎಸ್ಐ ವಿನೋದ್ ಜಿರಗಾಳೆ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಪೊಲೀಸ ರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆರೋಪಿಗಳು 12 ಲಕ್ಷ ರೂ. ಮೌಲ್ಯದ ಕಾರುಖರೀದಿ ದಂಧೆಯಲ್ಲಿ ಬಂದ ಹಣಲ್ಲೇ ಕಾರು ಖರೀದಿಸಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.