ಗ್ರಾಪಂಗೊಂದು ಸ್ಯಾನಿಟರಿ ದಹನ ಯಂತ್ರ
ನಗರ ಜಿಪಂ ವ್ಯಾಪ್ತಿಯ ಪ್ರತಿ ಗ್ರಾಪಂಗೆ ಅಳವಡಿಕೆ | 18. 6 ಲಕ್ಷ ರೂ.ಅನುದಾನ
Team Udayavani, Mar 14, 2021, 10:52 AM IST
ಬೆಂಗಳೂರು: ಗ್ರಾಮಗಳ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಿರುವ ಬೆಂಗಳೂರು ನಗರ ಜಿಪಂ ಈಗ ತನ್ನ ವ್ಯಾಪ್ತಿಯ ಪ್ರತಿ ಗ್ರಾಮಪಂಚಾಯ್ತಿಗಳಲ್ಲಿ ಒಂದು “ಸ್ಯಾನಿಟರಿ ನ್ಯಾಪ್ ಕಿನ್ ದಹನ ಯಂತ್ರ’ ಅಳವಡಿಕೆ ಮುಂದಾಗಿದೆ.
ಗ್ರಾಮೀಣ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವತ್ಛ ಭಾರತ್ ಮಿಷನ್ (ಗ್ರಾಮೀಣ)ಯಡಿ ದಹನಯಂತ್ರಗಳ ಅಳವಡಿಕೆಗೆ ಯೋಜನೆ ರೂಪಿಸಿದೆ.
ನಗರ ಜಿಪಂ ವ್ಯಾಪ್ತಿಯಲ್ಲಿ 93 ಗ್ರಾಪಂಗಳಲ್ಲಿವೆ. ಅವುಗಳಲ್ಲಿ ರಾಜಾನುಕುಂಟೆ,ದೊಡ್ಡಜಾಲ, ಸಿಂಗನಾಯಕನಹಳ್ಳಿ ಮತ್ತು ಶಾಂತಿಪುರ ಗ್ರಾಪಂ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಈಗಾಗಲೇಪ್ರಯೋಗಾರ್ಥವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ದಹನ ಯಂತ್ರಗಳನ್ನ ಅಳವಡಿಸಲಾಗಿದೆ. ಈಪ್ರಯೋಗ ಯಶಸ್ವಿಯಾದ ನಂತರ ನಗರ ಜಿಪಂ ಎಲ್ಲಾ ಗ್ರಾಪಂಗಳಲ್ಲಿ ದಹನ ಯಂತ್ರ ಅಳವಡಿಕೆಗೆ ಮುಂದಾಗಿದೆ.
ನಗರ ಜಿಪಂ ಸ್ವಚ್ಛ ಭಾರತ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಸಂಬಂಧ ಹಲವು ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಕೇಂದ್ರೀಕರಿಸಿಯೇ ಯೋಜನೆ ರೂಪಿಸಿರುವುದೂ ಸೇರಿದೆ. ಬಳಕೆ ಮಾಡಿದಸ್ಯಾನಿಟರಿ ನ್ಯಾಪ್‌ಕಿನ್‌ಗಳಿಂದ ಹಲವುರೀತಿಯ ಅಪಾಯಗಳು ಎದುರಾಗುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ತಕ್ಷಣದಲ್ಲೇ ಅವುಗಳನ್ನು ದಹನ ಮಾಡಲುಸಲುವಾಗಿಯೇ ಪ್ರತಿ ಗ್ರಾಪಂಗೆ ಒಂದರಂತೆಯಂತ್ರಗಳನ್ನು ಅಳವಡಿಕೆ ಮಾಡಲಾಗುತ್ತಿದೆ.
18.6 ಲಕ್ಷ ರೂ.ಅನುದಾನ: ಗ್ರಾಪಂ ವ್ಯಾಪ್ತಿಯ ಘನತಾಜ್ಯ ನಿರ್ವಹಣಾ ಘಟಕಗಳಲ್ಲಿ ಈ ಯಂತ್ರಗಳನ್ನು ಅಳವಡಿಕೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಕಾರ್ಯಗತಕ್ಕಾಗಿಯೇಸುಮಾರು 18. 6ಲಕ್ಷ ರೂ. ಅನುದಾನ ಬಳಕೆಮಾಡಿಕೊಳ್ಳಲಾಗುತ್ತಿದೆ. ಸ್ವಚ್ಛ ಭಾರತ್ ಮಿಷನ್ ಅಡಿ ಪ್ರತಿ ಗ್ರಾಪಂಗೆ 20 ಸಾವಿರರೂ. ನೀಡಲಾಗುತ್ತದೆ ಎಂದು ಬೆಂಗಳೂರು ನಗರ ಜಿಪಂ ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಸ್ಯಾನಿಟರಿ ನ್ಯಾಪ್‌ಕಿನ್ ದಹನ ಯಂತ್ರಗಳ ಅಳವಡಿಕೆ ಕುರಿತಂತೆ ಹಿರಿಯಅಧಿಕಾರಿಗಳೊಂದಿಗೆ ಸಮಾಲೋಚನೆಮಾಡಲಾಗಿದೆ. ಶೀಘ್ರದಲ್ಲೆ ಪ್ರತಿಯೊಂದು ಗ್ರಾಪಂಗಳಲ್ಲಿ ಯಂತ್ರಗಳ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.
ಕರಗುವ ಗುಣ ಕಡಿಮೆ :
ಘನ ತ್ಯಾಜ್ಯದಲ್ಲಿ ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಹಾನಿಕಾರಕ ತ್ಯಾಜ್ಯ ಮೂರು ವಿಧಗಳಿವೆ. ಹಾನಿಕಾರಕ ತ್ಯಾಜ್ಯದಲ್ಲಿ ನ್ಯಾಪ್‌ಕಿನ್ ಕೂಡ ಸೇರಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಕರಗುವ ಗುಣ ಕಡಿಮೆಯಿದೆ. ಹೀಗಾಗಿ ಇದು ಅಂತರ್ಜಲ ಕುಸಿತಕ್ಕೂ ಕಾರಣವಾಗಲಿದೆ. ಆ ಹಿನ್ನೆಲೆಯಲ್ಲಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ದಹನ ಮಾಡುವ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ ಎಂದು ನಗರ ಜಿಲ್ಲಾಡಳಿತದ ಸ್ವತ್ಛ ಭಾರತ್ ಮಿಷನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಯಂತ್ರ ಕಾರ್ಯನಿರ್ವಹಿಸಲು ವಿದ್ಯುತ್ ಬೇಕಾಗುತ್ತದೆ. ಇದನ್ನು ಆಯಾ ಗ್ರಾಪಂಗಳು ಸ್ಥಳೀಯ ಅನುದಾನದಿಂದ ಭರಿಸಬೇಕಾಗುತ್ತದೆ. ಈ ಬಗ್ಗೆ ಆಯಾ ಗ್ರಾಪಂಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ನಗರ ಜಿಲ್ಲಾಡಳಿತ ಗ್ರಾಮಗಳ ಸ್ವತ್ಛತೆಗೆ ಆದ್ಯತೆ ನೀಡಿದ್ದು ಅದನ್ನು ಕೇಂದ್ರೀಕರಿಸಿಯೇ ಯೋಜನೆಗಳನ್ನು ರೂಪಿಸುತ್ತಿದೆ. ಅದರ ಭಾಗವಾಗಿ ಈಗ ಪ್ರತಿ ಗ್ರಾಪಂಗಳ ಘನತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ಒಂದು ಸ್ಯಾನಿಟರಿ ನ್ಯಾಪ್ ಕಿನ್ ದಹನ ಯಂತ್ರಗಳ ಅಳವಡಿಕೆ ಮಾಡಲಾಗುವುದು. –ಡಾ.ಸಿದ್ದರಾಮಯ್ಯ, ನಗರ ಜಿಪಂ ಉಪ ಕಾರ್ಯದರ್ಶಿ
–ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.