ಗಾಂಜಾ ಗಿಡಗಳಿಂದ ಸ್ಯಾನಿಟರಿ ಪ್ಯಾಡ್!
ಹಿಮಾಲಯನ್ ಹೆಂಪ್ ಕಮ್ಯುನಿಟಿ ಸಂಸ್ಥೆಯಿಂದ ಅಭಿವೃದ್ಧಿ
Team Udayavani, Nov 19, 2022, 1:24 PM IST
ಬೆಂಗಳೂರು: ಗಾಂಜಾ ಎಂದಾಕ್ಷಣ ಕಣ್ಮುಂದೆ ಬರುವುದು ಮಾದಕದ್ರವ್ಯ. ಆದರೆ, ಈ ನಕಾರಾತ್ಮಕ ಕಲ್ಪನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನವೊಂದು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿದ್ದು, ಗಾಂಜಾ ಗಿಡದಿಂದ ಅತ್ಯುತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಎನ್-95 ಮಾಸ್ಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.
ಈ ಪ್ರಯೋಗ ವಿಶ್ವದಲ್ಲೇ ಮೊದಲು ಎಂದು ವಿಶ್ಲೇಷಿಸಲಾಗಿದೆ. “ಹಿಮಾಲಯನ್ ಹೆಂಪ್ ಕಮ್ಯುನಿಟಿ’ ಎಂಬ ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟನ್ಸ್ ಕೌನ್ಸಿಲ್ (ಬೈರಾಕ್) 50 ಲಕ್ಷ ನಗದು ಪ್ರಶಸ್ತಿ ಕೂಡ ದೊರಕಿದೆ. ಆ ಅನುದಾನದ ನೆರವಿನಿಂದ ಶೀಘ್ರದಲ್ಲೇ ಈ ಸಂಸ್ಥೆಯು ಗಾಂಜಾ ಗಿಡಗಳಿಂದ ತಯಾರಿಸಿದ ಮಾಸ್ಕ್ಗಳು ಮತ್ತು ಸ್ಯಾನಿಟರಿ ಪ್ಯಾಡ್ ಗಳು ಮಾರುಕಟ್ಟೆ ಪ್ರವೇಶಿಸಲಿವೆ.
ಇದನ್ನೂ ಓದಿ: ಶಬರಿಮಲೆಗೆ ಹೊರಟಿದ್ದ ಯಾತ್ರಾರ್ಥಿಗಳ ಬಸ್ ಪಲ್ಟಿ: 18 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ
ಟೆಕ್ ಸಮಿಟ್‌ನಲ್ಲಿ ಇದರ ಮಳಿಗೆ ಹಾಕಲಾಗಿದ್ದು, ತನ್ನ ವಿನೂತನ ಉತ್ಪನ್ನದಿಂದ ಆಕರ್ಷಣೆಯ ಕೇಂದ್ರಬಿಂದು ಆಗಿದೆ. ಈ ಕಂಪನಿಯು ಬೆಂಗ ಳೂರು ಮೂಲದ ಶ್ರೀಮ್ ಲೋಟಸ್ ಫ್ಯಾಬ್ರಿಕ್ ಪ್ರೈ.ಲಿ., ಜತೆ ಸಹಭಾಗಿತ್ವವನ್ನೂ ಹೊಂದಿದೆ. “ದಕ್ಷಿಣ ಭಾರತದಲ್ಲಿ ಗಾಂಜಾ ಗಿಡಗಳನ್ನು ಬೆಳೆಯುವುದು ಕಾನೂನು ಬಾಹಿರ. ಆದರೆ, ದಕ್ಷಿಣ ಭಾರತದ ಹಲವೆಡೆ ಶೇ. 0.3ಕ್ಕಿಂತ ಕಡಿಮೆ ಟಿಎಚ್‌ಸಿ (ಟೆಟ್ರಾಹೈಡ್ರೋ ಕೆನ್ನಾಬಿನಾಲ್) ಪ್ರಮಾಣ ಇರುವ ಗಾಂಜಾ ಬೆಳೆಯ ಲಾಗುತ್ತಿದೆ. ಅದರ ಕಾಂಡಗಳಲ್ಲಿ ನಾರಿನ ಅಂಶ ಹೇರಳವಾಗಿರುತ್ತದೆ. ಅದನ್ನು ತಂತ್ರಜ್ಞಾನ ಬಳಸಿಕೊಂಡು ತೆಗೆಯಲಾಗುವುದು. ಅದರಿಂದ ಮಾಸ್ಕ್ ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಲಾಗುತ್ತಿದೆ.
ಇದನ್ನು ಪ್ರತಿಷ್ಠಿತ ಅಹಮದಾಬಾದ್ ಟೆಕ್ಸ್‌ಟೈಲ್ ಇಂಡಸ್ಟ್ರಿ ರಿಸರ್ಚ್ ಅಸೋಸಿ ಯೇಷನ್ (ಎಟಿಐಆರ್‌ಎ) ಪ್ರಮಾಣೀ ಕರಿಸಿದೆ’ ಎಂದು ಹಿಮಾಲಯನ್ ಹೆಂಪ್ ಕಮ್ಯುನಿಟಿಯ ಶ್ರೇಯಸ್ “ಉದಯ ವಾಣಿ’ಗೆ ತಿಳಿಸಿದರು. ಸಂಪೂರ್ಣ ಸಾವಯವ: ಪ್ರಸ್ತುತ ಬಳಕೆಯಾಗುತ್ತಿರುವ ಸ್ಯಾನಿಟರಿ ಪ್ಯಾಡ್‌ಗಳು ಅಂಡಾ ಶಯ, ಥೈರಾಯ್ಡ, ಚರ್ಮ ಸಂಬಂಧಿತ ಸೋಂಕು ಕಂಡುಬರುತ್ತಿವೆ.
ಆದರೆ, ಗಾಂಜಾ ಗಿಡದ ನಾರಿನಾಂಶಗಳಿಂದ ತಯಾ ರಿಸಿದ ಸ್ಯಾನಿಟರಿ ಪ್ಯಾಡ್ ಸಂಪೂರ್ಣ ಸಾವಯವ ಆಗಿದ್ದು, ಆರೋಗ್ಯಕ್ಕೆ ಪೂರಕವಾಗಿವೆ.
7,200 ಟನ್ ಪ್ಲಾಸ್ಟಿಕ್!: ಅನುಪಯುಕ್ತ ಕಟ್ಟಿಗೆ ಚೂರುಗಳಿಂದ ಇಟ್ಟಿಗೆ ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಸುಮಾರು 47 ಕೋಟಿ ಮಹಿಳೆಯರು 12 ರಿಂದ 48 ವರ್ಷದ ಒಳಗಿನವರಾಗಿದ್ದು, ಅವರಲ್ಲಿ ಬಹುತೇಕರು ಬಳಕೆ ಮಾಡಿ ಎಸೆಯಬಹುದಾದ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ಮಾಡುತ್ತಿದ್ದಾರೆ. ಪ್ರತಿ ಪ್ಯಾಡ್‌ನಲ್ಲಿ 36 ಗ್ರಾಂ ಪ್ಲಾಸ್ಟಿಕ್ ಇರುತ್ತದೆ. ಅದನ್ನು ಲೆಕ್ಕಹಾಕಿದರೆ, ಹೆಚ್ಚು-ಕಡಿಮೆ 7,200 ಟನ್ ವೈದ್ಯಕೀಯ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಆಗುತ್ತದೆ. ಈ ನಿಟ್ಟಿನಲ್ಲಿ ಗಾಂಜಾ ಗಿಡದಿಂದ ತಯಾರಿಸುವ ಸ್ಯಾನಿಟರಿ ಪ್ಯಾಡ್‌ಗಳು ಪರಿಸರ ಸ್ನೇಹಿಯೂ ಆಗಿವೆ ಎಂದರು.
ಅನುಪಯುಕ್ತ ಕಟ್ಟಿಗೆ ಚೂರುಗಳಿಂದ ಇಟ್ಟಿಗೆ : ಇದಲ್ಲದೆ, ಗಾಂಜಾ ಗಿಡಗಳಲ್ಲಿರುವ ನಾರಿನಾಂಶದಿಂದ ಬಟ್ಟೆ ತಯಾರಿಸಲಾಗುತ್ತಿದೆ. ಅದರಲ್ಲಿನ ಅನುಪಯುಕ್ತ ಕಟ್ಟಿಗೆ ಚೂರುಗಳಿಂದ ಇಟ್ಟಿಗೆ ತಯಾರಿಸಬಹುದು. ಈಗಾಗಲೇ ಎರಡು ಮನೆಗಳನ್ನು ಈ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ, ನೂರಾರು ವರ್ಷ ಮನೆಗಳು ಬಾಳಿಕೆ ಬರುತ್ತವೆ ಎಂದು ಮಾಹಿತಿ ನೀಡಿದರು. ಇನ್ನು ಈ ಉತ್ಪನ್ನಗಳಿಗಾಗಿ ನೇರವಾಗಿ ಪರವಾನಗಿ ಹೊಂದಿ ಗಾಂಜಾ ಬೆಳೆಯುತ್ತಿರುವ ರೈತರಿಂದ ಗಿಡಗಳನ್ನು ಖರೀದಿಸಲಾಗುತ್ತದೆ. ಈಗಾಗಲೇ 15 ರೈತರು ನಮ್ಮಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಎಕರೆ ಗಾಂಜಾಕ್ಕೆ 80 ಸಾವಿರದಿಂದ 1 ಲಕ್ಷ ರೂ. ಆದಾಯ ಬರುತ್ತದೆ ಎಂದು ಹೇಳಿದರು.
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.