ಓಕಳೀಪುರದಲ್ಲಿ ಸಂಕ್ರಾಂತಿ ಸಡಗರ
Team Udayavani, Jan 16, 2018, 11:40 AM IST
ಬೆಂಗಳೂರು: ನಗರದ ಹೃದಯ ಭಾಗ ಮೆಜೆಸ್ಟಿಕ್ ಸಮೀಪದ ಓಕಳೀಪುರದಲ್ಲಿ ಸೋಮವಾರ ಸಂಕ್ರಾಂತಿ ಸಂಭ್ರಮ ಮೇಳೈಸಿತ್ತು. ಎಲ್ಲ ಓಣಿಗಳ ಮನೆಯಂಗಳಗಳು ರಂಗೋಲಿಯಿಂದ ಕಂಗೊಳಿಸುತ್ತಿದ್ದವು. ಮನೆಬಾಗಿಲಿಗೆ ಬರುವ ಅತಿಥಿಯ ಸ್ವಾಗತಕ್ಕೆ ಅಣಿಗೊಂಡಿದ್ದವು. ಓಕಳೀಪುರದ ಸುತ್ತಮುತ್ತ ತಮಿಳು ಮತ್ತು ಕನ್ನಡಿಗರು ನೆಲೆಸಿರುವುದರಿಂದ ಪೊಂಗಲ್ ಮತ್ತು ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಮನೆಮಾಡಿತ್ತು.
ಬೆಳಗ್ಗೆ ಓಕಳೀಪುರದ ಗಣೇಶ ದೇವಸ್ಥಾನದ ಮೂಲಕ ಎತ್ತಿನಗಾಡಿಯಲ್ಲಿ ಮೆರವಣಿಗೆ ಸಾಗಿದ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್, ಶ್ರೀರಾಂಪುರ ವೃತ್ತ ಸೇರಿದಂತೆ ಓಕಳೀಪುರದ ಗಲ್ಲಿ, ಗಲ್ಲಿಗಳಲ್ಲಿ ಸಾಗಿದರು. ಕಾಂಗ್ರೆಸ್ ಕಾರ್ಯಕರ್ತರು ಗಾನ ಬಜಾನದ ಮೂಲಕ ಸ್ವಾಗತಿಸಿದರು.
ಇದೇ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ನಾವೆಲ್ಲರೂ ಹಳ್ಳಿಯಿಂದಲೇ ಬಂದವರು. ಆದರೆ ಈಗ ಹಳ್ಳಿಯ ವಾತಾವರಣ, ಆಚರಣೆ ಮರೆಯುತ್ತಿದ್ದೇವೆ. ನಗರದಲ್ಲಿ ನೆಲೆಸಿರುವ ಈಗಿನವರಿಗೆ ಹಳ್ಳಿಯ ಸಂಕ್ರಾಂತಿಯ ಸೊಬಗು ತಿಳಿದಿಲ್ಲ.
ಹಳ್ಳಿಯ ಆ ಸೊಗಡನ್ನು ಮತ್ತೆ ನೆನಪಿಸುವ ಉದ್ದೇಶದಿಂದ ಮೆರವಣಿಗೆಯಲ್ಲಿ ಸಾಗಿ ಶುಭಾಷಯ ಕೋರಿದ್ದಾಗಿ ಹೇಳಿದರು. ಜನರ ಆಥಿತ್ಯಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಸಂಕ್ರಮಣ ಎಲ್ಲರಿಗೂ ಸುಖ ಮತ್ತು ಸಮೃದ್ಧಿª ನೀಡಲಿ ಎಂದು ಹಾರೈಸಿದರು.
ಗೋವಾ ಸಚಿವರು ಕ್ಷಮೆ ಯಾಚಿಸಬೇಕು: ಮಹದಾಯಿ ನೀರಿನ ವಿಚಾರವಾಗಿ ಕನ್ನಡಿಗರ ಬಗ್ಗೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗಂಡೂರಾವ್, ಎರಡೂ ರಾಜ್ಯಗಳ ನಡುವೆ ಸೌಹರ್ದತೆ ಬೆಸೆಯುವ ಕೆಲಸವನ್ನು ಉನ್ನತ ಸ್ಥಾನದಲ್ಲಿದ್ದವರು ಮಾಡುಬೇಕು.
ಅದನ್ನು ಬಿಟ್ಟು, ಸಚಿವ ವಿನೋದ್ ಪಾಲೇಕರ್ ಕನ್ನಡಿಗರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಗೋವಾ ಸಚಿವರು ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ವಿನೋದ್ ಪಾಲೇಕರ್ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಟೀಕಿಸಿದರು.
20 ಟನ್ ಕಬ್ಬು ವಿತರಣೆ: ಸಂಕ್ರಾಂತಿಯನ್ನು ಎಳ್ಳು, ಬೆಲ್ಲ ವಿತರಿಸಿ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ನಗರದ ಚುಂಚಘಟ್ಟ ಮುಖ್ಯರಸ್ತೆಯ ಆಂಜನೇಯ ದೇವಾಲಯದ ಸಮೀಪ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರದಮಲ್ಲಿ 10 ಸಾವಿರ ಸಾರ್ವಜನಿಕರಿಗೆ ಸುಮಾರು 20 ಟನ್‌ನಷ್ಟು ಕಬ್ಬಿನ ಜತೆಗೆ ಸುಮಾರು 10 ಟನ್ ಕಡಲೆಕಾಯಿ, 1 ಟನ್ ಎಳ್ಳು ಹಾಗೂ 1 ಟನ್ ಬೆಲ್ಲ ಉಚಿತವಾಗಿ ವಿತರಿಸಲಾಯಿತು.
ಎಚ್.ದೇವರಾಜು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಕ್ಕರೆನಾಡು ಮಂಡ್ಯ ಮತ್ತು ಇತರೆಡೆಗಳಿಂದ ತರಿಸಿದ್ದ 20 ಟನ್‌ನಷ್ಟು ಕಬ್ಬು ಮತ್ತು ಎಳ್ಳು-ಬೆಲ್ಲವನ್ನು ಸಾರ್ವಜನಿಕರಿಗೆ ವಿತರಿಸಿ, ಸಂಕ್ರಾಂತಿ ಸುಗ್ಗಿ ಸಂಭ್ರಮ ಆಚರಿಸಲಾಯಿತು. ಕಾಂಗ್ರೆಸ್ ಮುಖಂಡ ಡಾ. ರಾಮೋಜಿ ಗೌಡ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Bengaluru: ಅಪರಾಧ, ರೌಡಿಸಂ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಿ: ಡಿಜಿಪಿ ಸೂಚನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
MUST WATCH
ಹೊಸ ಸೇರ್ಪಡೆ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.