ಸಂಸ್ಕೃತದ ಅಂತರ್ ಶಾಸ್ತ್ರೀಯ ಅಧ್ಯಯನ ಅಗತ್ಯ
Team Udayavani, Feb 21, 2018, 12:44 PM IST
ಬೆಂಗಳೂರು: ಜಗತ್ತಿನ ಬೇರೆಲ್ಲ ಭಾಷೆಗಳಿಗಿಂತ ಹೆಚ್ಚಿನ ಸಾಹಿತ್ಯ ಪರಂಪರೆ ಹೊಂದಿರುವ ಸಂಸ್ಕೃತ ಭಾಷೆಯ ಅಂತರ್ ಶಾಸ್ತ್ರೀಯ ಅಧ್ಯಯನ ಅಗತ್ಯವಿದೆ ಎಂದು ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಕುಲಪತಿ ಪ್ರೊ.ಸತ್ಯವ್ರತ ಶಾಸ್ತ್ರೀ ಹೇಳಿದರು.
ಮಂಗಳವಾರ ಕೆ.ಆರ್.ರಸ್ತೆಯ ಕುವೆಂಪು ಸಭಾಂಗಣದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 6ನೇ ದೀಕ್ಷಾಂತ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕರ್ನಾಟಕವು ಅನೇಕ ಆಚಾರ್ಯರ ಕರ್ಮಭೂಮಿ ಮತ್ತು ಜನ್ಮಭೂಮಿಯಾಗಿದೆ. ಇಲ್ಲಿ ಅನೇಕ ಮತಗಳು ಆರಂಭಗೊಂಡಿದೆ ಎಂದರು.
ತುಲನಾತ್ಮಕ ಅಧ್ಯಯನ: ಪ್ರತಿ ಭಾಷೆಗೂ ಅದರದ್ದೇ ಆದ ವೈಶಿಷ್ಟéತೆ ಇದೆ. ಸಂಸ್ಕೃತಕ್ಕೂ ಮಹಾನ್ ಇತಿಹಾಸ ಹಾಗೂ ವೈಶಿಷ್ಟತೆ ಇದೆ. ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿದೇಶಿ ಭಾಷೆಗಳ ಅಧ್ಯಯನ ಪೀಠವನ್ನು ಆರಂಭಿಸಬೇಕು. ಇದರಿಂದ ಸಂಸ್ಕೃತ ಮತ್ತು ವಿದೇಶಿ ಭಾಷೆಗಳ ತುಲನಾತ್ಮಕ ಅಧ್ಯಯನ ನಡೆಸಲು ಸಾಧ್ಯವಿದೆ. ಕಾಂಬೋ, ಮಲೆಯ, ಥಾಯ್, ಲಾವೋ ಮೊದಲಾದ ದೇಶದ ಭಾಷೆಗಳ ಅಧ್ಯಯನ ಪೀಠ ತೆರೆಯಬೇಕು. ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅನುವಾದ ಕೋರ್ಸ್ ಕೂಡ ಆರಂಭಿಸಬೇಕು ಎಂದು ತಿಳಿಸಿದರು.
ಸಂಸ್ಕೃತ ವಿವಿಗೆ 800 ಕೋಟಿ ಪ್ರಸ್ತಾವನೆ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾಶೇಖರ್ ಮಾತನಾಡಿ, ಮಾಗಡಿ ತಾಲೂಕಿನ ತಿಪ್ಪಸಂದ್ರ ಎಂಬಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ 3 ಎಕರೆ ಜಮೀನು ಸರ್ಕಾರದಿಂದ ಮಂಜೂರಾಗಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿಗೆ 800 ಕೋಟಿಯ ಪ್ರಸ್ತಾವನೆ ಕಳುಹಿಸಿದ್ದೇವೆ.
ಉನ್ನತ ಶಿಕ್ಷಣ ಸಚಿವರು 20 ಕೋಟಿ ರೂ. ಒದಗಿಸುವ ಭರವಸೆ ನೀಡಿದ್ದಾರೆ. ಆರಂಭದಲ್ಲಿ ಆಡಳಿತಾತ್ಮಕ ಕೆಲಸಕ್ಕೆ ಬೇಕಾದ ಕಟ್ಟಡ ನಿರ್ಮಾಣ ಮಾಡಲಿದ್ದೇವೆ. ಊಟ, ವಸತಿ ಸಹಿತಿವಾಗಿ ಸಂಸ್ಕೃತ ಪಾಠಶಾಲೆ ತೆರೆಯಬೇಕಾಗುವುದರಿಂದ ಸ್ವಲ್ಪ ಹಣಕಾಸಿನ ಅಗತ್ಯ ಇರುತ್ತದೆ ಎಂದು ಹೇಳಿದರು.
ಒಡಂಬಡಿಕೆ: ಮಣಿಪಾಲ್ ವಿಶ್ವವಿದ್ಯಾಲಯ, ಫ್ರೆಂಚ್ ಇನ್‌ಸ್ಟಿಟ್ಯೂಟ್ ಆಫ್ ಪಾಂಡಿಚೇರಿ, ಬೆಲ್ಜಿಯಂ ಘೆಂಟ್ ವಿವಿ, ಗುಜರಾತ್‌ನ ಸೋಮನಾಥ ಸಂಸ್ಕೃತ ವಿವಿ ಮತ್ತು ಪಶ್ಚಿಮ ಬಂಗಾಲದ ಗೌರ್‌ಬಂಗ್ ವಿವಿ ಜತೆ ಬೋಧನೆ ಮತ್ತು ವಿದ್ಯಾರ್ಥಿ ವಿನಿಯಮ ಕುರಿತಂತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ. ಮುಂದಿನ ವರ್ಷದಿಂದ ಈ ಕಾರ್ಯ ಆರಂಭವಾಗಲಿದೆ ಎಂದರು.
ಪದವಿ ಪ್ರದಾನ: 607 ಸಂಸ್ಕೃತ ಸ್ನಾತಕೋತ್ತರ ಪದವೀಧರರಿಗೆ, 310 ಸಂಸ್ಕೃತ ಪದವೀಧರರಿಗೆ ರಾಜ್ಯಪಾಲ ವಿ.ಆರ್.ವಾಲಾ ಪದವಿ ಪ್ರದಾನ ಮಾಡಿದರು. ಹಾಗೆಯೇ ವಿದ್ವಾನ್ ಬಿ.ರಾಜಶೇಖರಯ್ಯ ಅವರಿಗೆ ಗೌರವ ಡಿ.ಲಿಟ್ ಹಾಗೂ ಅಭಿಜಿತ್ ಜೋಶಿಯವರಿಗೆ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು.
ನಮ್ಮದು ಮೂಲ ಊರು ಶಿರಸಿ, ಪೋಷಕರು ಊರಲ್ಲಿ ಕೃಷಿ ಮಾಡುತ್ತಿದ್ದಾರೆ. ಪ್ರಾಚೀನ ಗಣಿತ, ವಿಜ್ಞಾನವನ್ನು ಸಂಸ್ಕೃತದಿಂದ ಅಧ್ಯಯನ ಮಾಡಲು ಸಾಧ್ಯ ಎಂಬ ಉದ್ದೇಶದಿಂದ ಸಂಸ್ಕೃತ ಸ್ನಾತಕೋತ್ತರದ ಅಧ್ಯಯನ ಮಾಡಿದೆ. ಚಿನ್ನದ ಪದಕದ ನಿರೀಕ್ಷೆಯೂ ಮಾಡಿರಲಿಲ್ಲ.
-ಬಾಲಚಂದ್ರ ಕೃಷ್ಣ ಭಟ್, ಅಲಂಕಾರ ಶಾಸ್ತ್ರದಲ್ಲಿ ಗರಿಷ್ಠ ಅಂಕ
ನಮ್ಮೂರು ಎಚ್.ಡಿ.ಕೋಟೆ. ಸದ್ಯ ಮೈತ್ರೇಯ ಗುರುಕುಲದಲ್ಲಿ ವೇದ, ದರ್ಶನ ಶಾಸ್ತ್ರದ ಶಿಕ್ಷಕಿಯಾಗಿ ವಿದ್ಯಾರ್ಥಿನಿಯರಿಗೆ ಬೋಧನೆ ಮಾಡುತ್ತಿದ್ದೇನೆ. ಸಂಸ್ಕೃತ ಭಾಷಾಸ್ವಾಧವನ್ನು ಎಲ್ಲರೂ ಸವಿಯುವಂತಾಗಬೇಕು.
-ಕೆ.ಎಸ್.ಶೃತಿ, ವ್ಯಾಕರಣ ಶಾಸ್ತ್ರದಲ್ಲಿ ಗರಿಷ್ಠ ಅಂಕ
ಸಂಸ್ಕೃತದ ಮೇಲಿನ ಅಭಿಮಾನದಿಂದಾಗಿ ಸಂಸ್ಕೃತದಲ್ಲಿ ಪದವಿ ಪಡೆಯಲು ಸಾಧ್ಯವಾಗಿದೆ. ನಮ್ಮೂರು ಶಿರಸಿ, ಸದಸ್ಯ ಮೈಸೂರಿನಲ್ಲಿ ಶಾಲೆಯೊಂದರಲ್ಲಿ ಸಂಸ್ಕೃತ ಬೋಧಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಎಲ್ಲರೂ ಸಂಸ್ಕೃತ ಅಭ್ಯಸಿಸಬೇಕು.
-ಕೆ.ಎಸ್.ಕೃಷ್ಣ, ಪೂರ್ವ ಮೀಮಾಂಸಯಲ್ಲಿ ಗರಿಷ್ಠ ಅಂಕ
ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಓದಬೇಕೆಂಬ ಉದ್ದೇಶದಿಂದ ಸಂಸ್ಕೃತ ಅಧ್ಯಯನ ಮಾಡಿದೆ. ಈಗ ಎಂ.ಫಿಲ್ ಮಾಡುತ್ತಿದ್ದೇನೆ. ಪೂರ್ಣ ಪ್ರಜ್ಞಾ ವಿದ್ಯಾಪೀಠದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಚಿನ್ನದ ಪದಕ ಬಂದಿರುವುದು ಖುಷಿ ತಂದಿದೆ.
-ಬಿ.ರಾಧಾಕೃಷ್ಣ, ಜೋತಿಷ್ಯ ಶಾಸ್ತ್ರದಲ್ಲಿ ಗರಿಷ್ಠ ಅಂಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.