“ಸಮರ್ಥನಂ’ ಸಮರ್ಥ ತ್ಯಾಜ್ಯ ಸೂತ್ರ
Team Udayavani, Apr 25, 2017, 12:34 PM IST
ಬೆಂಗಳೂರು: ನಗರದ ಕಸದ ಸಮಸ್ಯೆಗೆ ಮುಕ್ತಿ ಕಾಣಿ ಸಲು ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿ ಸಬೇಕು ಎಂದು ಸರ್ಕಾರ ಪದೇ ಪದೇ ಮನವಿ ಮಾಡುತ್ತಿದೆ. ಆದರೆ, ಕಸ ವಿಂಗಡಣೆ ಕಡ್ಡಾಯ ಆದೇಶಕ್ಕೂ ಮುನ್ನವೇ ಹಲವು ವರ್ಷಗಳಿಂದ ಕೆಲ ಸಂಸ್ಥೆಗಳು ವೈಜ್ಞಾನಿಕ ಕಸ ವಿಲೇವಾರಿ ಕಾರ್ಯದಲ್ಲಿ ಸದ್ದಿಲ್ಲದೆ ತೊಡಗಿಸಿಕೊಂಡಿವೆ.
ಈ ಪೈಕಿ ಸಮರ್ಥನಂ ಪರಿಸರ, ಘನತ್ಯಾಜ್ಯ ನಿರ್ವಹಣೆ ರೌಂಡ್ ಟೇಬಲ್, ಹಸಿರು ದಳ, ಶ್ರೀ ಫೌಂಡೇಶನ್, ಸ್ವಚ್f ಸೇರಿದಂತೆ ಹಲವು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜತೆಗೂಡಿ ವೈಜ್ಞಾನಿಕ ಕಸ ವಿಂಗಡಣೆ ಮತ್ತು ನಿರ್ವಹಣೆಯಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಸ ಸಮಸ್ಯೆಗೆ ಸರ್ಕಾರ, ಪಾಲಿಕೆಯನ್ನೇ ನೆಚ್ಚಿಕೊಳ್ಳದೆ ಸ್ವಯಂ ಪ್ರೇರಿತವಾಗಿ ಕಸ ವಿಲೇವಾರಿ ಯಲ್ಲಿ ತೊಡಗಿರುವ ಈ ಸಂಸ್ಥೆಗಳು ಮಾದರಿಯಾಗಿ ನಿಂತಿವೆ.
“ಸಮರ್ಥನಂ ಪರಿಸರ’ ಎಂಬ ಹೆಸರಲ್ಲಿ ಸಮರ್ಥನಂ ವಿಕಲಚೇತನರ ಸಂಸ್ಥೆಯು 13 ವರ್ಷ ಗಳಿಂದ ಈ ಕಾಯಕದಲ್ಲಿ ತೊಡಗಿಸಿಧಿಕೊಂಡಿದೆ. ಹಾಗೆಯೇ ಹಲವು ಸಂಸ್ಥೆಗಳು ತೆರೆಮರೆಯಲ್ಲೇ ಕಸ ವಿಂಗಡಣೆ ಹಾಗೂ ವೈಜ್ಞಾನಿಕ ಸಂಸ್ಕರಣೆಗೆ ಬಗ್ಗೆ ಜಾಗೃತಿ ಮೂಡಿಸಿ ಕಸ ವಿಲೇವಾರಿಗೆ ಸಹಕಾರ ನೀಡುತ್ತಿವೆ. ರಾಜಧಾನಿ ಬೆಂಗಳೂರನ್ನು ತ್ಯಾಜ್ಯ ಮುಕ್ತ ಹಾಗೂ ಪರಿಸರ ಸ್ನೇಹಿ ಮಾಡುವ ಉದ್ದೇಶದಿಂದ 2003ರಲ್ಲಿ ಸಮರ್ಥನಂ ಸಂಸ್ಥೆ “ಸಮರ್ಥನಂ ಪರಿಸರ’ ಕಾರ್ಯಕ್ರಮ ಆರಂಭಿಸಿತು. ಸತತ 13 ಪ್ರತಿ ತಿಂಗಳು ಅಂದಾಜು 100 ಟನ್ ಒಣ ತ್ಯಾಜ್ಯ ಸಂಗ್ರಹಿಸಿ, ಕಸವನ್ನು ರಸವನ್ನಾಗಿ ಮಾಡಲಾಗುತ್ತಿದೆ.
ಬಳಿಕ ಅದನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ಪೀಣ್ಯ ಬಳಿಯ ಸಿಂಗಸಂದ್ರದಲ್ಲಿರುವ ತನ್ನದೇ ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಿ ಅವುಗಳಿಂದ ಮರುಬಳಕೆ ವಸ್ತುಗಳನ್ನು ತಯಾರಿಸಲು ವಿವಿಧ ತಯಾರಿಕಾ ಘಟಕಗಳಿಗೆ ನೀಡುತ್ತದೆ. ಈ ಸಂಸ್ಕರಣಾ ಘಟಕದಲ್ಲಿ 30ಕ್ಕೂ ಹೆಚ್ಚು ಕೆಲಸಗಾರರಿದ್ದು, ಅವರಲ್ಲಿ ಬಹುತೇಕರು ವಿಕಲಚೇತನರು ಎಂಬುದು ವಿಶೇಷ. ಇನ್ನು, ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಹಿಂದಿನಿಂದಲೂ ಜಾಗೃತಿ ಮೂಡಿಸುವ ಜತೆಗೆ ಪ್ರೋತ್ಸಾಹ ನೀಡುತ್ತಿರುವ ಘನ ತ್ಯಾಜ್ಯ ನಿರ್ವಹಣೆ ರೌಂಡ್ ಟೇಬಲ್ ಸಂಸ್ಥೆಯು ಹಲವು ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಿದೆ.
ಹಸಿರು ದಳ ಸಂಸ್ಥೆಯು ಚಿಂದಿ ಆಯುವವರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಅವರು ತ್ಯಾಜ್ಯ ಸಂಸ್ಕರಣೆಯಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತಿದೆ. ಕೆಲವೆಡೆ ಒಣ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸಂಪೂರ್ಣ ನಿರ್ವಹಣೆ ಮಾಡುವಷ್ಟರ ಮಟ್ಟಿಗೆ ಚಿಂದಿ ಆಯುವವರನ್ನು ಸಜ್ಜುಗೊಳಿಸಿದೆ. ಹಾಗೆಯೇ “ಶ್ರೀ ಫೌಂಡೇಶನ್’ ಹಾಗೂ “ಸ್ವತ್ಛ’ ಹೆಸರಿನ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಧಿಡಿವೆ. ಜತೆಗೆ 1000ಕ್ಕೂ ಹೆಚ್ಚು ಸ್ವಯಂಸೇವಧಿಕರಿಗೆ ತರಬೇತಿ ನೀಡುತ್ತಿದೆ.
ಮರುಬಳಕೆ ವಸ್ತುಗಳ ಮಾರಾಟದಿಂದ ಕಲ್ಯಾಣ ಕಾರ್ಯ
ಕಾರ್ಪೋರೇಟ್ ಕಂಪನಿಗಳಿಂದ ಲ್ಯಾಪ್‌ಟಾಪ್, ಪ್ರಿಂಟರ್, ಆಹಾರ ಪೊಟ್ಟಣಗಳು, ಶಿಕ್ಷಣ ಸಂಸ್ಥೆಗಳಿಂದ ಕಾಗದ ತ್ಯಾಜ್ಯ ಮತ್ತು ಅಪಾರ್ಟ್‌ಮೆಂಟ್‌ಗಳಿಂದ “ಸಮರ್ಥನಂ ಪರಿಸರ ಸಂಸ್ಥೆ’ಯು ಒಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುತ್ತಿದೆ. ಕಾಗದ ತ್ಯಾಜ್ಯವನ್ನು “ಐಟಿಸಿ’ ಎಂಬ ಸಂಸ್ಥೆಗೂ, ಪ್ಲಾಸ್ಟಿಕ್ ವಸ್ತುಗಳನ್ನು “ಈಶಾ ಫೈಬರ್’ ಎಂಬ ಸಂಸ್ಥೆಗೂ ನೀಡಲಾಗುತ್ತಿದೆ.
“ನಾವು ಕೊಟ್ಟ ವಸ್ತುಗಳಿಂದ ಮರುಬಳಕೆ ವಸ್ತು ತಯಾರಿಸಿ ಆ ಕಂಪೆನಿಗಳು ನಮಗೆ ನೀಡುತ್ತವೆ. ಅದನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಅಂಗವಿಕಲ ಮಕ್ಕಳ ಕಲ್ಯಾಣ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ದಿನಪತ್ರಿಕೆಗಳು ಹಾಗೂ ವೃತ್ತಪತ್ರಿಕೆಗಳಿಂದ ಪೇಪರ್ ಬ್ಯಾಗ್, ನೋಟ್‌ಬುಕ್ಸ್, ಡೈರಿ ಹಾಗೂ ಬ್ರೈಲ್ ಟೆಕ್ಸ್ಟ್ಬುಕ್‌ಗಳನ್ನು ತಯಾರಿಸಲಾಗುತ್ತದೆ,’ ಎಂದು ಸಮರ್ಥನಂ ಸಂಸ್ಥೆಯ ಪದಾಧಿಕಾರಿಯೊಬ್ಬರು ಹೇಳುತ್ತಾರೆ.
ರೆಡ್ನೂಸ್-ರೀಯ್ಯೂಸ್-ರಿಸೈಕಲ್
ಒಣ ತ್ಯಾಜ್ಯ ಮುಕ್ತ ಪರಿಸರ ನಿರ್ಮಾಣ ಮಾಡುವುದು ಸಮರ್ಥನಂ ಪರಿಸರದ ಗುರಿ. ಇದೊಂದು ಅಗ್ಗದ ವೆಚ್ಚದ ಕಾರ್ಯಕ್ರಮ. ವಿಕಲ ಚೇತನ ಮಕ್ಕಳ ಸ್ವಾವಲಂಬನೆಗೆ ಸಹಕಾರಿ ಆಗಲಿದೆ. ಒಣ ತ್ಯಾಜ್ಯದ ಸಂಸ್ಕರಣೆ, ಅದರಿಂದ ತಯಾರಾಗುವ ವಸ್ತುಗಳ ಬಳಕೆ ಮತ್ತು ಮಾರು ಕಟ್ಟೆಗೆ ಪ್ರೋತ್ಸಾಹಿಸುತ್ತಿರುವ ಸಮರ್ಥನಂ ಸಂಸ್ಥೆಯು “ರೆಡ್ನೂಸ್-ರಿಯೂಸ್ ಆ್ಯಂಡ್ ರಿಸೈಕಲ್’ ಹೀಗೆ ಮೂರು “ಆರ್’ ಸೂತ್ರದಡಿ ಪರಿಸರ ಕಾರ್ಯಕ್ರಮವನ್ನು ಕಾರ್ಯಗತಗೊತಗೊಳಿಸುತ್ತಿದೆ. ನಾಗರಿ ಕರೂ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಸಮರ್ಥನಂ ಸಂಸ್ಥೆ ಮಾಧ್ಯಮ ಸಂಯೋಜಕ ಎಸ್. ನಿರಂಜನ್ ಕೋರಿದ್ದಾರೆ.
ತ್ಯಾಜ್ಯ ಸಂಸ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ತಲೆದೋರಿದಾಗ ಯಾರೇ ಸಂಪರ್ಕಿಸಿದರೂ ಪರಿಹಾರ ನೀಡುವುದರ ಜತೆಗೆ ಸಮರ್ಪಕ ನಿರ್ವಹಣೆ ಬಗ್ಗೆ ಸಲಹೆ, ಮಾರ್ಗದರ್ಶನವನ್ನೂ ನೀಡಲಾಗುವುದು.
-ಎನ್.ಎಸ್. ಮುಕುಂದ್, ಮುಖ್ಯಸ್ಥ, ಘನತ್ಯಾಜ್ಯ ನಿರ್ವಹಣೆ ರೌಂಡ್ ಟೇಬಲ್
* ರಫೀಕ್ ಅಹಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.