ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮುಲಾಜಿಲ್ಲದೇ ನೋಟಿಸ್
Team Udayavani, Jan 25, 2017, 11:23 AM IST
ಬೆಂಗಳೂರು: ಆಸ್ತಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮತ್ತು ಬೃಹತ್ ಮಾಲ್‌ಗಳಿಗೆ ಪ್ರತಿ ವಾರ ಮುಲಾಜಿಲ್ಲದೆ ನೋಟಿಸ್ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಸ್ಪಷ್ಟವಾಗಿ ಹೇಳಿದ್ದಾರೆ.
ನಗರದ ನಾಗವಾರದಲ್ಲಿ ಮಂಗಳವಾರ ಪಾದಚಾರಿ ಮೇಲ್ಸೇತುವೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ” ಈ ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಸಮರ್ಪಕ ವ್ಯವಸ್ಥೆಯೇ ಇರಲಿಲ್ಲ. ಎಷ್ಟೋ ಸಲ ಪಾಲಿಕೆ ಸಿಬ್ಬಂದಿಯೇ ತೆರಿಗೆ ವಸೂಲಿಗೆ ಹೋಗದ ಉದಾಹರಣೆಗಳೂ ಇವೆ. ಆದರೆ, ಈಗ ಎಲ್ಲವರೂ ಬದಲಾಗಿದೆ. ಆ ಪದ್ಧತಿ ಸದ್ಯ ಇಲ್ಲ,” ಎಂದರು.
ಕಳೆದ ಬಾರಿ ಇಡೀ ಹಣಕಾಸು ವರ್ಷಾoತ್ಯಕ್ಕೆ 1,910 ಕೋಟಿ ತೆರಿಗೆ ವಸೂಲಿ ಆಗಿತ್ತು. ಈ ವರ್ಷ ಈಗಾಗಲೇ 1,850 ಕೋಟಿ ರೂ. ಬಂದಿದೆ. ಅದೇ ರೀತಿ, ಟ್ರೇಡ್ ಲೈಸನ್ಸ್‌ನಲ್ಲಿ 46 ಕೋಟಿ ರೂ. ಹಾಗೂ ಜಾಹೀರಾತು ವಿಭಾಗದಲ್ಲಿ 35 ಕೋಟಿ ರೂ. ಹರಿದುಬಂದಿದೆ ಎಂದರು.
ಒಂದೇ ವಾರದಲ್ಲಿ 40 ಕೋಟಿ ತೆರಿಗೆ ಸಂಗ್ರಹ
ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಅಡಿ ಪಾಲಿಕೆ ವ್ಯಾಪ್ತಿಯ ಪ್ರತಿಯೊಬ್ಬ ತೆರಿಗೆ ಪಾವತಿದಾರರ ಮಾಹಿತಿ ಲಭ್ಯವಾಗುತ್ತಿದೆ. ಪ್ರತಿ ವಾರ ತೆರಿಗೆ ಬಾಕಿದಾರರ ಪರಿಶೀಲನೆ ನಡೆಸಿ, ಯಾರ್ಯಾರಿಗೆ ನೋಟಿಸ್ ನೀಡಲಾಗಿದೆ ಎಂಬುದರ ವಿವರಣೆ ಪಡೆಯಲಾಗುತ್ತದೆ. ಹೀಗೇ ಮಾಡಿರುವುದರಿಂದ ಕಳೆದ ಒಂದೇ ವಾರದಲ್ಲಿ ಪಾಲಿಕೆಗೆ 40 ಕೋಟಿ ರೂ. ಆದಾಯ ಹರಿದುಬಂದಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.