ಪ್ರಾಚೀನ ಜ್ಞಾನ ಬಳಸಿ ಸಾಮರಸ್ಯ ಉಳಿಸಿ


Team Udayavani, Dec 25, 2017, 12:35 PM IST

prachina-jnana.jpg

ಬೆಂಗಳೂರು: ಪ್ರಾಚೀನ ಭಾರತೀಯ ಜ್ಞಾನವನ್ನು ಆಧುನಿಕ ಭಾರತದಲ್ಲಿ ಪುನರುಜ್ಜೀವನಗೊಳಿಸುವ ಮೂಲಕ ಧಾರ್ಮಿಕ ಸಾಮರಸ್ಯ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಟಿಬೇಟಿಯನ್‌ ಧಾರ್ಮಿಕ ಗುರು ದಲೈಲಾಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶೇಷಾದ್ರಿಪುರಂ ಸಮೂಹ ವಿದ್ಯಾಸಂಸ್ಥೆಗಳ ಬೆಳ್ಳಿ ಮಹೋತ್ಸವದ ಪ್ರಯುಕ್ತ ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ರಾಷ್ಟ್ರ ನಿರ್ಮಾಣಕ್ಕಾಗಿ ಶಿಕ್ಷಣ ಮತ್ತು ಜ್ಞಾನ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಆಧುನಿಕ ಜಗತ್ತಿಗೆ ಪ್ರಸ್ತುತವಾಗಿರುವ ಭಾರತದ ಪುರಾತನ ಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಲು ಇದು ಸಕಾಲ ಮತ್ತು ಇದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಮ್ಮಿಲನವಿದೆ. ಮನುಷ್ಯನ ಭಾವನಾತ್ಮಕ ಸಮಸ್ಯೆಗೆ ತಂತ್ರಜ್ಞಾನದಿಂದ ಪರಿಹಾರ ನೀಡಲು ಸಾಧ್ಯವಿಲ್ಲ.

ನಮ್ಮಲ್ಲಿರುವ ಸಾವಿರಾರು ವರ್ಷಗಳ ಹಳೆಯದಾದ ಸಾಂಪ್ರದಾಯಿಕ ಆಚರಣೆಗಳು ಭಾವನಾತ್ಮಕ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿಕೊಡುತ್ತದೆ. ಇದು ಧರ್ಮಾಧಾರಿತವಲ್ಲ  ಎಂಬುದನ್ನು ವಿವರಿಸಿದರು.

ಭಾರತದಲ್ಲಿ 3 ಸಾವಿರ ವರ್ಷದಿಂದ ಇಂದಿನವರೆಗೂ ವಿವಿಧ ಧರ್ಮ ಮತ್ತು ಸಾಂಪ್ರದಾಯಿಕ ಆಚಾರಣೆ ಒಂದಾಗಿ ನಡೆದುಕೊಂಡು ಬರುತ್ತಿದೆ. ಧರ್ಮದ ಹೆಸರಿನಲ್ಲಿ  ಸಂಘರ್ಷ ಮಾಡುವ ಅನೇಕ ರಾಷ್ಟ್ರಗಳು ನಮ್ಮ ಕಣ್ಣೆದುರಿಗಿವೆ. ಸಾಮರಸ್ಯದಲ್ಲಿ ಭಾರತವು ವಿಶ್ವಕ್ಕೆ ಮಾದರಿಯಾಗಿದೆ ಮತ್ತು ಧಾರ್ಮಿಕ ಸಂಘರ್ಷ ಶಮನ ಮಾಡಲು ಸಹಾಯ ಮಾಡುತ್ತಿದೆ. ಧಾರ್ಮಿಕ ಸಾಮರಸ್ಯದ ಪ್ರಚಾರಕ್ಕೆ ನಾನೂ ಕೂಡ ಬದ್ಧನಾಗಿದ್ದೇನೆ ಎಂದು ಹೇಳಿದರು.

ಶಿಕ್ಷಣದಲ್ಲಿ ಆಂತರಿಕ ಮೌಲ್ಯ ಅಗತ್ಯ: ಆಧುನಿಕ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮದಲ್ಲಿ ಆಂತರಿಕ ಮೌಲ್ಯವನ್ನು ಸೇರಿಸುವ ಅಗತ್ಯವಿದೆ. ಮಠಗಳ ಅಧೀನದ ಶಾಲೆಗಳಿಂದ ಶಿಕ್ಷಣ ವ್ಯವಸ್ಥೆಯ ಪೂರ್ಣ ಪ್ರಮಾಣದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವೇ ಎಂಬುದನ್ನು ಚಿಂತಿಸಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳ ಬೌದ್ಧಿಕ ಹಾಗೂ ಭೌತಿಕ ಅಭಿವೃದ್ಧಿಗೆ ಅಗತ್ಯವಿರುವ ಪಠ್ಯಕ್ರಮ ರೂಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಯಂ ಪ್ರತಿಷ್ಠೆ ಬೇಡ: ಸ್ವಯಂ ಪ್ರತಿಷ್ಠೆಗೆ ಒಳಗಾದ ವ್ಯಕ್ತಿ ಒಬ್ಬಂಟಿಯಾಗುತ್ತಾನೆ. ಹುಟ್ಟು ಸಾವಿನಲ್ಲಿ ಯಾವುದೇ  ವ್ಯತ್ಯಾಸವಿಲ್ಲ. ಹೀಗಾಗಿ ಎಲ್ಲರನ್ನು ಸಮಾನವಾಗಿ ಕಾಣಬೇಕು. ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿಯಿಂದ ಬಾಳಬೇಕು. ಆದರೆ, ಕೆಲವು ಭಾಗದಲ್ಲಿ ಅಹಿಂಸೆಯಿಂದ ಜನ ಸಾಯುತ್ತಿದ್ದಾರೆ. ಜಾಗತಿಕ ತಾಪಮಾನ ಮತ್ತು ಆರ್ಥಿಕತೆ ಪ್ರತಿಯೊಬ್ಬರ ಭವಿಷ್ಯದ ಮೇಲೂ ಪ್ರಭಾವ ಬೀರಲಿದೆ.

ವಿಶ್ವದ ಸಮಾನತೆಯನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಏಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಧಾರ್ಮಿಕ ಸೌಹಾರ್ದತೆ ಅತಿ ಅವಶ್ಯಕ ಎಂದು ಹೇಳಿದರು. ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್‌.ಆರ್‌.ಪಂಡಿತಾರಾಧ್ಯ, ಪ್ರಧಾನ ಕಾರ್ಯದರ್ಶಿ ಡಾ.ವೂಡೆ ಪಿ.ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ನನಗೆ ಸಂಬಂಧಿಸಿದ್ದಲ್ಲ; ನಿಮಗೆ ಬಿಟ್ಟಿದ್ದು: ಪ್ರಧಾನಿ ಮೇದಿಯವರ ಭಾರತದ ಬಗ್ಗೆ ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ದಲೈಲಾಮ ಅವರು, ಇದು ನನಗೆ ಸಂಬಂಧಿಸಿದ್ದಲ್ಲ. ನಿಮಗೆ ಬಿಟ್ಟಿದ್ದು ಎಂದರು. ಸ್ವಧರ್ಮದಿಂದ ಸತ್ತರೂ ಪರವಾಗಿಲ್ಲ. ಪರಧರ್ಮ ಎಂದರೆ ಭಯ ಆಗುತ್ತದೆ ಎಂದು ಭಗವದ್ಗೀತೆಯ ಶ್ಲೋಕವನ್ನು ಉಲ್ಲೇಖೀಸಿ ವಿಶ್ವನಾಥ ಶರ್ಮ ಅವರು ಧರ್ಮದ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಏನೂ ಉತ್ತರ ನೀಡುವುದಿಲ್ಲ ಎಂದು ದಲೈಲಾಮ ಅವರು ಸುಮ್ಮನಾದರು.

ವಾಸ ಯೋಗ್ಯ ಅನ್ಯ ಗೃಹದ ಹುಡುಕಾಟ: “ಆಧುನಿಕ ತಂತ್ರಜ್ಞಾನವು ಪ್ರಪಂಚವನ್ನು ಸಂಕೀರ್ಣಗೊಳಿಸಿದೆ. ಸಂಪರ್ಕ ವ್ಯವಸ್ಥೆ ಸಾಕಷ್ಟು ಅಭಿವೃದ್ಧಿಯಾಗಿದೆ. ತಂತ್ರಜ್ಞಾನದ ಸದುಪಯೋಗ, ದುರುಪಯೋಗ ಆಗುತ್ತಿರುವುದರಿಂದ ಅನೇಕ ಸಮಸ್ಯೆಯೂ ಹುಟ್ಟಿಕೊಂಡಿದೆ. ಭೂಮಿ ಮೇಲಿರುವ ಸಂಪತ್ತನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದ್ದೇವೆ.

ಮುಂದಿನ ಪೀಳಿಗೆಗೆ ಏನನ್ನೂ ಉಳಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಭೂಮಿಯ ಮೇಲೆ ಒತ್ತಡದ ಬದುಕು ನಡೆಸುತ್ತಿದ್ದೇವೆ. ವಾಸಕ್ಕೆ ಯೋಗ್ಯವಾಗಿರುವ ಅನ್ಯ ಗೃಹದ ಹುಡುಕಾಟ ಆರಂಭವಾಗಿದೆ. ಇದಕ್ಕೆ ಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆ ಬಹಳ ಅಗತ್ಯ,’ ಎಂದು ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದರು.

ನಳಂದ ತತ್ವಜ್ಞಾನವನ್ನು ಟಿಬೆಟಿಯನ್‌ ಭಾಷೆಯಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಇಂತಹ ಪ್ರಾಚೀನ ತತ್ವಶಾಸ್ತ್ರವನ್ನು ಅಧ್ಯಯನದ ಮೂಲಕ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಶಾಂತಿಯುತ ವ್ಯಕ್ತಿಯಿಂದ ಶಾಂತಿಯುತ ಕುಟುಂಬ, ಸಮಾಜ ಹಾಗೂ ವಿಶ್ವ ನಿರ್ಮಾಣ ಸಾಧ್ಯ.
-ದಲೈಲಾಮ, ಟಿಬೇಟಿಯನ್‌ ಧರ್ಮ ಗುರು

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.