ಹಡಪದ- ಸವಿತಾ ಜಯಂತಿ ಗೊಂದಲ
Team Udayavani, Jul 23, 2018, 6:00 AM IST
ಬೆಂಗಳೂರು: ಲಿಂಗಾಯತ- ವೀರಶೈವ ಸಂಘರ್ಷ ತಣ್ಣಗಾಗುತ್ತಿದ್ದಂತೆ, ಇದೀಗ ರಾಜ್ಯದಲ್ಲಿ ಹೊಸದೊಂದು ಜಾತಿ ಸಂಘರ್ಷ ತಲೆದೋರುವ ಅಪಾಯವಿದೆ. ಮಹಾಪುರುಷರ ಜನ್ಮ ದಿನಾಚರಣೆ ಸಂಬಂಧ ಕ್ಷೌರಿಕ ಸಮಾಜದೊಳಗಿನ ಪಂಗಡಗಳು ವಾಕ್ಸಮರ ಆರಂಭಿಸಿವೆ.
ರಾಜ್ಯ ಸರ್ಕಾರ ಈ ವರ್ಷ ಜುಲೈ 27 ರಂದು ಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಮಾಡಲು ತೀರ್ಮಾನಿಸಿದೆ. ಆದರೆ, ಇದರ ಜೊತೆಗೆ ಸವಿತಾ ಮಹರ್ಷಿ ಜಯಂತಿ ಆಚರಿಸಬೇಕೆಂದು ಕ್ಷೌರಿಕ ಸಮಾಜದ ಜನರು ಬೇಡಿಕೆ ಇಟ್ಟಿದ್ದಾರೆ. ಇಬ್ಬರ ಮಧ್ಯೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು ಎರಡೂ ಸಮಾಜದವರನ್ನು ಕೂಡಿಸಿ ಸಭೆ ನಡೆಸಿದರೂ, ಹಡಪದ ಸಮಾಜದವರು ಸವಿತಾ ಮಹರ್ಷಿ ಹೆಸರು ಸೇರಿಸಲು ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಳಿಯೂ ಮಾತುಕತೆ ನಡೆಸಿದ್ದು, ಗೊಂದಲ ಬಗೆ ಹರಿದಿಲ್ಲ ಎಂದು ತಿಳಿದು ಬಂದಿದೆ.
ಸವಿತಾ ಮಹರ್ಷಿಗೂ ಪ್ರತ್ಯೇಕ ಜಯಂತಿ ಮಾಡುವಂತೆ ಹಡಪದ ಅಪ್ಪಣ್ಣ ಸಮಾಜದವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಹಡಪದ ಅಪ್ಪಣ್ಣ ಜಯಂತಿಗೆ ಮೀಸಲಿಟ್ಟ ಹಣದಲ್ಲಿ ಹಣ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಒಂದೇ ಸಮಾಜದ ಇಬ್ಬರು ದಾರ್ಶನಿಕರ ಜಯಂತಿ ಮಾಡುವುದು ಕಷ್ಟವಾಗುತ್ತದೆ ಎನ್ನುವುದು ಅಧಿಕಾರಿಗಳ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದೆ.
ಸವಿತಾ ಸಮಾಜದವರ ವಾದವೇನು?
ಹಡಪದ ಸಮಾಜ ಹಾಗೂ ಸವಿತಾ ಸಮಾಜ ಇಬ್ಬರೂ ಕ್ಷೌರಿಕ ವೃತ್ತಿ ಮಾಡುತ್ತಿದ್ದರೂ, ದಕ್ಷಿಣ ಕರ್ನಾಟಕದಲ್ಲಿ ಚಿತ್ರದುರ್ಗದವರೆಗೂ ಸವಿತಾ ಸಮಾಜ ಎಂದು ಗುರುತಿಸಿಕೊಂಡಿದೆ.ಪುರಾಣದಲ್ಲಿ ಬರುವ ಸವಿತಾ ಮಹರ್ಷಿ ಎಂಬವವರು ರಥ ಸಪ್ತಮಿಯ ದಿನ ಕಣ್ಣಿನಲ್ಲಿ ಹುಟ್ಟಿದ್ದಾರೆ. ಇವರೇ ಕ್ಷೌರಿಕ ಸಮಾಜದ ಮೂಲ ಪುರುಷರು. ಸವಿತಾ ಸಮಾಜದಲ್ಲಿಯೇ 27 ಉಪ ಜಾತಿಗಳು ಸೇರಿದ್ದು, ಹಡಪದ ಸಮಾಜ ಸವಿತಾ ಸಮಾಜದ ಒಂದು ಪಂಗಡ. ಹಡಪದ ಸಮಾಜದವರು ಬಸವಣ್ಣನ ಕಾಲದಲ್ಲಿ ಲಿಂಗ ಕಟ್ಟಿಕೊಂಡರು. ಲಿಂಗ ಕಟ್ಟಿಕೊಳ್ಳದವರು ಸವಿತಾ ಸಮಾಜದಲ್ಲಿಯೇ ಮುಂದುವರೆದರು. ಹೀಗಾಗಿ ಅವರ ಹೆಸರನ್ನೂ ಹಡಪದ ಅಪ್ಪಣ್ಣ ಜಯಂತಿ ಆಚರಣೆಯಲ್ಲಿ ಸೇರಿಸಿ “ಸವಿತಾ ಮಹರ್ಷಿ ಹಡಪದ ಅಪ್ಪಣ್ಣ ಜಯಂತಿ’ ಎಂದು ಆಚರಿಸುವಂತೆ ಸವಿತಾ ಸಮಾಜದವರು ಸರ್ಕಾರಕ್ಕೆ ಪಟ್ಟು ಹಿಡಿದಿದ್ದಾರೆ.
ಹಡಪದ ಸಮಾಜದವರ ವಾದವೇನು?
ಉತ್ತರ ಕರ್ನಾಟಕ ಭಾಗದಲ್ಲಿರುವ ಹಡಪದ ಸಮಾಜದವರು ಇದಕ್ಕೆ ತದ್ವಿರುದ್ಧ ಅಭಿಪ್ರಾಯ ಹೊಂದಿದ್ದಾರೆ. ಸವಿತಾ ಮಹರ್ಷಿಗೂ ಹಡಪದ ಅಪ್ಪಣ್ಣಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಕಾಲಮಾನಕ್ಕಾಗಲಿ, ವೈಚಾರಿಕತೆ, ಜೀವನ ಶೈಲಿ ಯಾವುದಕ್ಕೂ ಹೊಂದಾಣಿಕೆ ಇಲ್ಲ. ಒತ್ತಾಯ ಪೂರ್ವಕವಾಗಿ ಉತ್ತರ ಕರ್ನಾಟಕದವರ ಮೇಲೆ ಸಾಂಸ್ಕೃತಿಕ ದಾಳಿ ನಡೆಸಲಾಗುತ್ತಿದೆ. ಹಡಪದ ಅಪ್ಪಣ್ಣ ಬಸವಣ್ಣನ ಕಾಲದ ಶರಣನಾಗಿದ್ದು, ಕಡ್ಲಿಗಾರ ಹುಣ್ಣಿಮೆ (ಗುರು ಪೂರ್ಣಿಮೆ) ದಿನ ಹುಟ್ಟಿದ್ದು, ಬಸವಣ್ಣನಿಗೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾನೆ. ಹಡಪದ ಅಪ್ಪಣ್ಣ ಶರಣ ಸಂಸ್ಕೃತಿಯಲ್ಲಿ ಬೆಳೆದು ಬಸವಣ್ಣನ ಲಿಂಗೈಕ್ಯದ ನಂತರ ಲಿಂಗೈಕ್ಯನಾದವನು ಎನ್ನುತ್ತಾರೆ.
ಹಡಪದ ಅಪ್ಪಣ್ಣನಿಗೂ ಸವಿತಾ ಮಹರ್ಷಿಗೂ ಸಂಬಂಧವಿಲ್ಲ. ಹಡಪದ ಅಪ್ಪಣ್ಣ ಐತಿಹಾಸಿಕ ಪುರುಷ. ಬಸವಣ್ಣನ ಕಾಲದಲ್ಲಿ ಜನಿಸಿದ ಶರಣ. ಆದರೆ, ಸವಿತಾ ಮಹರ್ಷಿಗೆ ಪುರಾಣದ ಹಿನ್ನೆಲೆ ಹೇಳುತ್ತಾರೆ. ಹೀಗಾಗಿ ಅಪ್ಪಣ್ಣ ಜಯಂತಿಯಲ್ಲಿ ಸವಿತಾ ಮಹರ್ಷಿ ಹೆಸರು ಸೇರಿಸಲು ನಮ್ಮ ವಿರೋಧವಿದೆ. ಅವರು ಬೇಕಾದರೆ ಪ್ರತ್ಯೇಕ ಜಯಂತಿ ಮಾಡಿಕೊಳ್ಳಲು ನಮ್ಮದೇನು ಅಡ್ಡಿಯಿಲ್ಲ.
– ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿ, ಅಪ್ಪಣ್ಣ ದೇವರ ಮಹಾಸಂಸ್ಥಾನ ತಂಗಡಗಿ
ಸವಿತಾ ಮಹರ್ಷಿ ನಮ್ಮ ಸಮಾಜದ ಮೂಲ ಪುರುಷ ಅವರ ಜಯಂತಿ ಮಾಡುವ ಬದಲು ಸರ್ಕಾರ ಹಡಪದ ಅಪ್ಪಣ್ಣ ಜಯಂತಿ ಮಾಡಲು ಹೊರಟಿದೆ. ಇದರಿಂದ ಸವಿತಾ ಸಮಾಜದ 27 ಉಪ ಪಂಗಡಗಳಿಗೆ ಅನ್ಯಾಯವಾಗಲಿದೆ. ಎರಡೂ ಒಂದೇ ಜಯಂತಿ ಮಾಡಬೇಕೆನ್ನುವುದು ನಮ್ಮ ವಾದ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ, ಹೋರಾಟ ನಡೆಸುತ್ತೇವೆ.
– ಯು. ಕೃಷ್ಣಮೂರ್ತಿ, ಸವಿತಾ ಸಮಾಜದ ರಾಜ್ಯಾಧ್ಯಕ್ಷ
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
CIDಗೆ ಹೆಬ್ಬಾಳ್ಕರ್ ಮಾಹಿತಿ: ಶೀಘ್ರ ಸಿ.ಟಿ. ರವಿ ವಿಚಾರಣೆ?
Congress; ಪರಿಷತ್ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress;ಸಂಪುಟ,ಕೆಪಿಸಿಸಿ ಯಥಾಸ್ಥಿತಿ? ಬಜೆಟ್ ಅಧಿವೇಶನ, ಪಂ.ಚುನಾವಣೆ ಬಳಿಕ ಚುರುಕು?
KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !
Mangaluru; ಸಾಮಾನ್ಯ ಸ್ಥಳದಲ್ಲಿ ಬಿಲ್ಡರ್ ಹಕ್ಕು ಸಾಧಿಸುವಂತಿಲ್ಲ
Gram Panchayat ಆದಾಯಕ್ಕೆ ಟೆಲಿಕಾಂ ಕಂಪೆನಿಗಳಿಂದ ಕುತ್ತು
ಇಂದು 2ನೇ ಹಂತದ “ವಕ್ಫ್’ಸಮರ; ಬಳ್ಳಾರಿ ಜಿಲ್ಲೆ ಕಂಪ್ಲಿಯಲ್ಲಿ ಚಾಲನೆ; ಪಾದಯಾತ್ರೆ, ಜನಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.