ಎಸ್‌ಬಿಐ-ಸೇಂಟ್ ಜಾನ್ಸ್‌ಮಕ್ಕಳ ಡಯಾಲಿಸೀಸ್ ಕೇಂದ್ರ
Team Udayavani, Nov 16, 2017, 12:30 PM IST
ಬೆಂಗಳೂರು: ನಗರದ ಸೇಂಟ್ ಜಾನ್ಸ್ ಮೆಡಿಕಲ್ ಆಸ್ಪತ್ರೆಯಲ್ಲಿ ಬುಧವಾರ “ಎಸ್‌ಬಿಐ-ಸೇಂಟ್ ಜಾನ್ಸ್ ಮಕ್ಕಳ ಡಯಾಲಿಸೀಸ್ ಕೇಂದ್ರ’ವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ (ಆರ್ ಆ್ಯಂಡ್ ಡಿಬಿ) ಪಿ.ಕೆ.ಗುಪ್ತಾ ಅವರು ಉದ್ಘಾಟಿಸಿದರು.
ಇದರ ಅಂಗವಾಗಿ ಎಸ್‌ಬಿಐ ಸ್ಥಳೀಯ ಕೇಂದ್ರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಿ.ಕೆ.ಗುಪ್ತಾ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಸೇಂಟ್ ಜಾನ್ಸ್ ಆಸ್ಪತ್ರೆಗೆ 45 ಲಕ್ಷ ರೂ.ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಡಯಾಲಿಸೀಸ್ ಯಂತ್ರೋಪಕರಣ ಒದಗಿಸಿದ್ದೇವೆ. ಬಡ ಮಕ್ಕಳ ಚಿಕಿತ್ಸೆಗಾಗಿಯೇ ಪ್ರತ್ಯೇಕ ಎಸ್‌ಬಿಐ-ಸೇಂಟ್ ಜಾನ್ಸ್ ಮಕ್ಕಳ ಡಯಾಲಿಸೀಸ್ ಕೇಂದ್ರ ವನ್ನು ತೆರೆಯಲಾಗಿದೆ.
ಅತಿ ಕಡಿಮೆ ವೆಚ್ಚದಲ್ಲಿ ಯಕೃತ್ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಡಯಾಲಿಸೀಸ್ ಚಿಕಿತ್ಸೆ ಸಿಗಬೇಕೆಂಬುದು ನಮ್ಮ ಇಚ್ಛೆ. ಆದ್ದರಿಂದ ಈ ಮಕ್ಕಳ ದಿನಾಚರಣೆಯಂದು ಕೇಂದ್ರಕ್ಕೆ ಚಾಲನೆ ನೀಡಿದ್ದೇವೆ. ಎಸ್‌ಬಿಐ ಪ್ರತಿನಿಧಿಯಾಗಿ ಹೇಳುವುದೇನೆಂದರೆ, ಸಮಾಜದ ಏಳಿಗೆಗೆ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಸಲುವಾಗಿ ಸ್ಥಾಪಿಸಿರುವ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಇದು ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರು, ಸೇಂಟ್ ಜಾನ್ ಆಸ್ಪತ್ರೆಯ ಸಹ ನಿರ್ದೇಶಕರಾದ ಫಾ. ಪ್ರದೀಪ್ ಕುಮಾರ್ ಸಮದ್, ಫಾ. ಜೆಸುದಾಸ್ ರಾಜಮಾಣಿಕಂ, ಪಿಡಿಯಾಟ್ರಿಕ್ ನೆಫ್ರಾಲಜಿ ವಿಭಾಗದ ಪ್ರೊ. ಡಾ. ಅಪರ್ಣಾ ಐಯ್ಯಂಗಾರ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.