ಅಲ್ಲಲ್ಲಿ ಆಲಿಕಲ್ಲು, ಮರಗಳು ಧರೆಗೆ, ರಸ್ತೆ ಜಲಾವೃತ, ಅಸ್ತವ್ಯಸ್ತ…
Team Udayavani, Apr 18, 2017, 11:45 AM IST
ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಸುರಿದ ಆಲಿಕಲ್ಲು ಮತ್ತು ಗಾಳಿಸಹಿತ ಮಳೆಗೆ ಹತ್ತಾರು ಮರಗಳು ನೆಲಕಚ್ಚಿ, ರಸ್ತೆಗಳು ಜಲಾವೃತಗೊಂಡವು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಕೊಂಚ ತಂಪೆರೆದಂತೆ ಮಾಡಿ, ನಿಮಿಷಾರ್ಧದಲ್ಲಿ ಮರೆಯಾಗುತ್ತಿದ್ದ ಮಳೆ, ಸೋಮವಾರ ಸಂಜೆ ಅಬ್ಬರಿಸಿತು.
ಗಾಳಿಸಹಿತ ಮಳೆಗೆ 30ಕ್ಕೂ ಹೆಚ್ಚು ಕಡೆಗಳಲ್ಲಿ ಮರ ಮತ್ತು ಮರದ ಕೊಂಬೆಗಳು ಧರೆಗುರುಳಿವೆ. ಈ ವೇಳೆ ಅಂಡರ್‌ಪಾಸ್‌ಗಳಲ್ಲಿ ನೀರು ಆವರಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ, ವಾಹನ ಸವಾರರು ಪರದಾಡಿದರು. ಸಂಜೆ “ಪೀಕ್ ಅವರ್’ನಲ್ಲಿ ವರುಣನ ಆಗಮನವಾಗಿದ್ದರಿಂದ ಇದರ ಬಿಸಿ ಹಲವೆಡೆ ತಟ್ಟಿತು.
ವೈಟ್‌ಫೀಲ್ಡ್, ಐಟಿಪಿಎಲ್, ಮಡಿವಾಳ, ವಿಧಾನಸೌಧ, ರಿಚ್‌ಮಂಡ್ ವೃತ್ತ, ಮತ್ತಿಕೆರೆ ಸೇರಿದಂತೆ ವಿವಿಧೆಡೆ ವಾಹನದಟ್ಟಣೆ ಉಂಟಾಗಿತ್ತು. ಮರ ಮತ್ತು ಮರದ ಕೊಂಬೆಗಳು ರಸ್ತೆ ಆವರಿಸಿದ್ದರಿಂದ ಮತ್ತು ಮೇಲ್ಸೇತುವೆಗಳಲ್ಲಿ ನೀರು ನಿಂತಿದ್ದರಿಂದ ಕೆಲವರು ಪರ್ಯಾಯ ರಸ್ತೆಗಳನ್ನು ಬಳಸಿದರು. ಇದು ಕೂಡ ವಾಹನದಟ್ಟಣೆಗೆ ಕಾರಣವಾಯಿತು.
ಮರ ಬಿದ್ದಿದ್ದು ಎಲ್ಲೆಲ್ಲಿ?
ನಗರದ ಸಿಎಂಎಚ್ ರಸ್ತೆ, ಇಎಸ್‌ಐ, ಲಿಂಗಯ್ಯನಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಜೀವನ್‌ಬಿಮಾ ನಗರ, ಡಿಫೆನ್ಸ್ ಕಾಲೊನಿ, ಇಂದಿರಾನಗರ, ಶಿವಾನಂದ ವೃತ್ತ, ಕೋರಮಂಗಲದಲ್ಲಿ 7ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್, 4ನೇ ಬ್ಲಾಕ್, 50 ಅಡಿ ರಸ್ತೆ ಹಾಗೂ 8ನೇ ಬ್ಲಾಕ್, ಬಸವನಗುಡಿ, ಶ್ರೀರಾಮಪುರ, ಐಟಿಪಿಎಲ್, ಕಾಡುಗೋಡಿ, ಸಿಂಗಸಂದ್ರ, ಕೋಡಿಚಿಕ್ಕನಹಳ್ಳಿ, ಕೂಡ್ಲು ಮುಖ್ಯರಸ್ತೆ, ಎಚ್‌ಎಸ್‌ಆರ್ 6ನೇ ಸೆಕ್ಟರ್, ಬೆಮೆಲ್ ಲೇಔಟ್‌ಗಳಲ್ಲಿ ಮರ ಮತ್ತು ಮರದ ಕೊಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ.
ಅದೇ ರೀತಿ, ನಾಗರಬಾವಿ ಬಳಿ ಮತ್ತು ದೊಮ್ಮಲೂರಿನ ಹೊರವರ್ತುಲ ರಸ್ತೆಗಳ ಮೇಲೆ ನೀರು ನಿಂತು ಅಸ್ತವ್ಯಸ್ತಗೊಂಡ ಬಗ್ಗೆ ದೂರುಗಳು ಬಂದಿವೆ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ತಿಳಿಸಿದೆ. ತಾಸಿನಲ್ಲಿ ಮಳೆ ಮರೆಯಾಗಿದ್ದರಿಂದ ಮರದ ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಲು ಅನುಕೂಲವಾಯಿತು.
ನಗರದಲ್ಲಿ ಗರಿಷ್ಠ 25ರಿಂದ 26 ಮಿ.ಮೀ. ಮಳೆಯಾಗಿದ್ದು, ಮೈಸೂರು ಬ್ಯಾಂಕ್ ವೃತ್ತ ಸೇರಿದಂತೆ ಕೆಲವೆಡೆ ಆಲಿಕಲ್ಲು ಮಳೆ ಕೂಡ ಆಗಿದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ 21 ಮಿ.ಮೀ., ಕೋಣೇನ ಅಗ್ರಹಾರದಲ್ಲಿ 16, ಗೊಲ್ಲಹಳ್ಳಿಯಲ್ಲಿ 8.5, ವಿಜ್ಞಾನ ನಗರದಲ್ಲಿ 9, ಕೂಡಿಗೆಹಳ್ಳಿಯಲ್ಲಿ 7 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ
Bengaluru: ಆಶಾ ಸಾಫ್ಟ್ ನಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಕರ್ತೆಯರ ಕೈಸೇರದ ಪ್ರೋತ್ಸಾಹಧನ
Bengaluru: ಲಂಚ ಸ್ವೀಕಾರ; ಲೋಕಾಯುಕ್ತ ಬಲೆಗೆ ಬಿದ್ದ ಎಸ್‌ಐ ಗಂಗಾಧರ್
Bengaluru: ರೈಲಲ್ಲಿ ಬಿಟ್ಟು ಹೋಗಿದ್ದ 5 ಲಕ್ಷ ಚಿನ್ನ ಪ್ರಯಾಣಿಕನಿಗೆ ಹಸ್ತಾಂತರ
Bengaluru: ಬಸ್ ಕಂಡಕ್ಟರ್, ಡ್ರೈವರ್‌ಗೆ ತೀವ್ರ ಹಲ್ಲೆ: ಇಬ್ಬರು ಆರೋಪಿಗಳ ಬಂಧನ
MUST WATCH
ಹೊಸ ಸೇರ್ಪಡೆ
New Delhi: 3 ವರ್ಷ ಕನಿಷ್ಠಕ್ಕೆ ದಿಲ್ಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಭಾರೀ ಕುಸಿತ
Special Interview: ಪ್ರತ್ಯೇಕ ನಾಡಧ್ವಜಕ್ಕಾಗಿ ಕೇಂದ್ರಕ್ಕೆ ಮತ್ತೂಮ್ಮೆ ಪತ್ರ: ತಂಗಡಗಿ
Itanagar: ಚೀನ ಜತೆ ದೀರ್ಘ ಕಾಲ ಶಾಂತಿ ಸ್ಥಾಪನೆಗೆ ಪ್ರಯತ್ನ; ರಕ್ಷಣ ಸಚಿವ ರಾಜನಾಥ್‌ಸಿಂಗ್
New Delhi: ದೀಪಾವಳಿ ಹಬ್ಬದ ವೇಳೆ ಅಮೆರಿಕ ರಾಯಭಾರಿ ಡ್ಯಾನ್ಸ್!
Kannada Rajyotsava: ನಿಂತ ನೆಲವೇ ಕರ್ನಾಟಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.