ಶಾಲಾ ಸವಾಲು, ಪರಿಹಾರ ಅಧ್ಯಯನಕ್ಕೆ ವೇದಿಕೆ
Team Udayavani, Oct 8, 2018, 6:15 AM IST
ಬೆಂಗಳೂರು: ಕಳಪೆ ಸಾಧನೆಯ ಸರ್ಕಾರಿ ಶಾಲೆಗಳ ಪಟ್ಟಿ ಸಿದ್ಧಪಡಿಸಿ ಅಂತಹ ಶಾಲೆಗಳ ಸುಧಾರಣೆಗೆ ಕ್ರಿಯಾ ಯೋಜನೆ ಸಿœಪಡಿಸುವ ಕಾರ್ಯಕ್ರಮ ಕೇಂದ್ರ ಸರ್ಕಾರ ರೂಪಿಸಿದ್ದು, ರಾಜ್ಯದಲ್ಲೂ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ.
ತಾಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಶಾಲೆಗಳ ಜತೆಗೆ ಕಳಪೆ ಸಾಧನೆಯ ಶಾಲೆಗಳ ಪಟ್ಟಿ ಸಿದ್ಧಪಡಿಸಲಿದ್ದು ಆ ಶಾಲೆಗಳ ಸುಧಾರಣೆಗೆ ಅಧ್ಯಯನ ನಡೆಸಿ ರೂಪು-ರೇಷೆ ರಚಿಸುವುದು ಇದರ ಉದ್ದೇಶವಾಗಿದೆ.
ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಕಂಡುಕೊಂಡ ಪರಿಹಾರದ ಯಶಸ್ಸು ಆಧರಿಸಿ ಶಾಲಾ ನಾಯಕತ್ವ ಗುರುತಿಸಲು ಕೇಂದ್ರ ಸರ್ಕಾರ ಹೊಸ ಕಾರ್ಯಕ್ರಮ ಸಿದ್ಧಪಡಿಸಿದೆ.ಶಾಲಾ ಹಂತ, ಮೇಲಿcಚಾರಕರ ಹಂತ, ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಶಾಲೆಯೊಂದರ ಸಾಧನೆ ಅದು ಇನ್ನೊಂದು ಶಾಲೆಗೆ ಪ್ರೇರಣೆ, ಶಾಲೆಯ ಸಮಗ್ರ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ ಎಲ್ಲದರ ಮೌಲ್ಯಮಾಪನವೂ ಈ ಕಾರ್ಯಕ್ರಮದಡಿ ಆಗಲಿದೆ.
ಶಾಲಾ ನಾಯಕತ್ವದ ಬಲವರ್ಧನೆಗೆ ರೂಪಿಸಿರುವ ಈ ಕಾರ್ಯಯೋಜನೆಯಲ್ಲಿ ಶಾಲಾ ಮುಖ್ಯಶಿಕ್ಷಕರು, ಆಸಕ್ತ ಸಂಶೋಧಕರು, ಶಿಕ್ಷಣ ತಜ್ಞರು, ಆಡಳಿತಗಾರರು ಅಥವಾ ಸರ್ಕಾರೇತರ ಸಂಘಟನೆಗಳು ಭಾಗವಹಿಸಬಹುದಾಗಿದೆ.
ಕಳಪೆ ಸಾಧನೆಯ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯಮಿತ ಭೇಟಿ ನೀಡಿ ಸುಧಾರಣೆಗೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಅದೇ ವ್ಯಾಪ್ತಿಯಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಯ ಶಾಲೆಗಳ ಮುಖ್ಯಸ್ಥರ ಕಾರ್ಯಕ್ಷಮತೆ, ಕಾರ್ಯನಿರ್ವಹಣೆ ಸೇರಿದಂತೆ ಉತ್ತಮ ಅಂಶಗಳನ್ನು ಕ್ರೋಢಿಕರಿಸಬೇಕು. ಅಂತಹ ಎಲ್ಲ ಅಧ್ಯಯನ ವರದಿಗಳ ಬಗ್ಗೆ ವಾರಕ್ಕೊಮ್ಮೆ ಸಿಆರ್‌ಪಿ, ಬಿಆರ್‌ಪಿ, ಇಸಿಒ, ಬಿಆರ್‌ಸಿ ಮೊದಲಾದ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಶಾಲಾ ನಾಯಕತ್ವದ ಪರಿಕಲ್ಪನೆ, ಮಹತ್ವ ಮತ್ತು ನಡವಳಿಕೆಗಳನ್ನು ಗಮನಿಸಿ ತಾಲೂಕಿಗೆ ಕನಿಷ್ಠu ಎರಡು ಅಧ್ಯಯನ ಸಿದ್ಧಪಡಿಸಿ ಜಿಲ್ಲಾ ಉಪನಿರ್ದೇಶಕರಿಗೆ ನೀಡಬೇಕು ಶಾಲೆ ಎದುರಿಸುತ್ತಿರುವ ಸವಾಲು ಹಾಗೂ ಅವುಗಳ ಪರಿಹಾರಕ್ಕೆ ಕಂಡುಕೊಂಡ ಮಾರ್ಗಗಳ ಸಮೇತ ಶಾಲಾ ಇತಿಹಾಸವನ್ನು ಸಂಕ್ಷಪ್ತವಾಗಿ ಬರೆದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಬೇಕು. ಅಂತಹ ಶಾಲೆಗೆ ಭೇಟಿ ನೀಡಿದ ವಿದ್ವಾಂಸರು ಅಥವಾ ಪರಿಣಿತರು ಶಾಲಾ ನಾಯಕತ್ವದ ಪ್ರಾಮುಖ್ಯತೆಗೆ ಸಂಬಂಧಿಸಿದ ದಾಖಲೆ ಸಂಗ್ರಹಿಸಬೇಕು. ತರಗತಿ ಕೊಠಡಿಯಲ್ಲಿ ಶಿಕ್ಷಕರ ಬೋಧನೆ, ಮಕ್ಕಳ ಕಲಿಕೆ ಪ್ರಕ್ರಿಯೆ, ಸಮುದಾಯದ ಪಾಲ್ಗೊಳ್ಳುವಿಕೆ, ಶಾಲೆಯ ನಿರ್ವಹಣೆ, ಶಾಲೆಯ ಒಳಗೆ ಮತ್ತು ಹೊರಗೆ ಅಂತರ್ ವ್ಯಕ್ತಿಗಳ ಸಂಬಂಧ, ಸಂಶೋಧನೆ, ತಂಡದ ಕೆಲಸ, ಶಾಲೆಯ ಅಭಿವೃದ್ಧಿ ತಂತ್ರಾಂಶ ಬಳಕೆ ಇತ್ಯಾದಿ ಅಂಶಗಳು ಮೇಲ್ವಿಚಾರಕರ ಅಧ್ಯಯನದಲ್ಲಿ ಒಳಗೊಂಡಿರುತ್ತದೆ.
ಜಿಲ್ಲಾ ಹಂತದಲ್ಲಿ ಉಪ ನಿರ್ದೇಶಕರು, ಪ್ರಾಂಶುಪಾಲರು ಶಾಲೆಗಳಿಗೆ ಆದ್ಯತೆ ಮೇರೆಗೆ ಭೇಟಿ ನೀಡಿ, ಗುಣಮಟ್ಟ ಸುಧಾರಣೆಗೆ ಮಾರ್ಗದರ್ಶನ ನೀಡಬೇಕು. ಜಿಲ್ಲಾ ಮಟ್ಟದ ಅತ್ಯುತ್ತವಾಗಿ ಕಾರ್ಯನಿರ್ವಹಿಸುವ ಶಿಕ್ಷಕರು, ಶಾಲೆಗಳನ್ನು ಗುರುತಿಸಿ ಶಾಲಾ ನಾಯಕತ್ವ ಪರಿಚಯಿಸುವ ಹೊಸ ಆಯಾಮಗಳನ್ನು ಅವರಿಂದ ಪಡೆಯುವುದು. ಜಿಲ್ಲೆಗೆ ಕನಿಷ್ಠ ಒಂದು ಅತ್ಯುತ್ತಮ ಸರ್ಕಾರಿ ಶಾಲೆಯ ಅಧ್ಯಯನ ವರದಿ ರಾಜ್ಯದ ಕೇಂದ್ರ ಕಚೇರಿಗೆ ಸಲ್ಲಿಸಬೇಕು.
ವಿಭಿನ್ನ ಪ್ರಯೋಗ :
ಸರ್ಕಾರಿ ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸುವ ಜತೆಗೆ ಮಕ್ಕಳು ಉಲ್ಲಾಸದಾಯಕವಾಗಿ ಕಲಿಯಲು ಪ್ರೇರಣೆ ನೀಡುವ ಗುಣಮಟ್ಟದ ಶಿಕ್ಷಣ ಒದಗಿಸುವ ಹಿನ್ನೆಲೆಯಲ್ಲಿ ಈ ರೀತಿಯ ವಿಭಿನ್ನ ಪ್ರಯೋಗ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪ್ರತಿ ಶೈಕ್ಷಣಿಕ ವಲಯದ ಅತ್ಯುತ್ತಮ, ಎರಡು ಶಾಲೆಗಳ ಯಶಸ್ವಿ ಕಥನಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧ್ಯಯನ ರೂಪದಲ್ಲಿ ಸಿದ್ಧಪಡಿಸಿ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಜಿಲ್ಲಾ ಉಪನಿರ್ದೇಶಕರು ಅದನ್ನು ರಾಜ್ಯಕ್ಕೆ ಸಲ್ಲಿಸುತ್ತಾರೆ. ನಂತರ ಅದನ್ನು ಇ-ಪೋರ್ಟಲ್‌ಗೆ ಅಪ್‌ಲೋಡ್‌ಮಾಡಲಾಗುತ್ತದೆ. ರಾಷ್ಟ್ರಮಟ್ಟದ ಶಾಲಾ ನಾಯಕತ್ವ ಸಮಾವೇಶದಲ್ಲಿ ಯಶೋಗಾಥೆಯನ್ನು ಹಂಚಿಕೊಳ್ಳಾಗುತ್ತದೆ ಎಂದು ಸರ್ವ ಶಿಕ್ಷಾ ಅಭಿಯಾನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅತ್ಯುತ್ತಮ ಶಾಲೆಯ ಯಶಸ್ವಿನ ಕಥನ(ಕೇಸ್‌ಸ್ಟಡೀ) ಸಿದ್ಧಪಡಿಸುವವರೇ ಅದಕ್ಕೆ ಶಿರ್ಷೀಕೆ ನೀಡಬೇಕು. ಬರಹಗಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್ ಕೂಡ ನಮೂದಿಸಬೇಕು. ಶಾಲೆಯ ಸಂಕ್ಷಿಪ್ತ ಚಿತ್ರಣ, ಶಾಲೆಯ ಪ್ರಸ್ತುತ ಸನ್ನಿವೇಶ, ಸೌಲಭ್ಯ ಮತ್ತು ಕೊರತೆ, ಸವಾಲು, ಸಂದಿಗ್ಧತೆ, ಕ್ರಿಯಾಯೋಜನೆ, ಕಾರ್ಯತಂತ್ರ, ಫಲಗಳು, ಕಲಿಕೆಯಲ್ಲಿ ಬದಲಾವಣೆ ತರಲು ತೆಗೆದುಕೊಂಡ ಕ್ರಮ, ಶಾಲಾ ನಾಯಕತ್ವದ ಪಾತ್ರ, ಬದಲಾವಣೆಯ ಸಿದ್ಧಾಂತ, ಬದಲಾವಣೆಗೆ ಅನುಸರಿಸಿದ ತಂತ್ರ ಮತ್ತು ಮಂತ್ರ ಕೇಸ್ ಸ್ಟಡೀ ಒಳಗೊಂಡಿರಬೇಕು.
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.