ಎಸ್‌ಇಝಡ್ ನಿರ್ಮಾಣಕ್ಕೆ ಎರಡನೇ ಯತ್ನ
Team Udayavani, Nov 24, 2017, 12:27 PM IST
ಬೆಂಗಳೂರು: ದೇಶದ ನಾಲ್ಕನೇ ಅತಿ ಹೆಚ್ಚು ಸರಕು ಸಾಗಣೆ ಸಾಮರ್ಥ್ಯ ಹೊಂದಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಮುಕ್ತ ವ್ಯಾಪಾರ ವಲಯ ಅಥವಾ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್) ಸ್ಥಾಪನೆಗೆ ಉದ್ದೇಶಿಸಿದ್ದು, ಈ ಸಂಬಂಧ ಸಾಧಕ-ಬಾಧಕಗಳ ಅಧ್ಯಯನ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ಸಾಮರ್ಥ್ಯ ಏರುಗತಿಯಲ್ಲಿದೆ. ಇದರಿಂದ ರಾಜ್ಯದ ಒಟ್ಟಾರೆ ವೃದ್ಧಿ ದರ (ಜಿಡಿಪಿ)ದಲ್ಲಿ ಶೇ.11ರಷ್ಟು ಕಾರ್ಗೊ ವಹಿವಾಟಿನ ಪಾಲುದಾರಿಕೆ ಇದೆ.
ಈ ಹಿನ್ನೆಲೆಯಲ್ಲಿ “ಕಾರ್ಗೊ ಹಬ್’ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಸುಮಾರು ನೂರು ಎಕರೆ ಜಾಗದಲ್ಲಿ ಎಸ್‌ಇಝಡ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ (ವ್ಯಾಪಾರ ಅಭಿವೃದ್ಧಿ, ಮಾರುಕಟ್ಟೆ) ಉಪಾಧ್ಯಕ್ಷ ರಾಜ್ ಅಂದ್ರಾಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಎಸ್‌ಇಝಡ್ ನಿರ್ಮಾಣಕ್ಕೆ ಬಿಐಎಎಲ್‌ನ ಎರಡನೇ ಪ್ರಯತ್ನ ಇದಾಗಿದೆ. 2008ರಲ್ಲಿ ಎಸ್‌ಇಝಡ್‌ಗೆ ಕೇಂದ್ರ ಸರ್ಕಾರದ ಅನುಮೋದನೆ ದೊರಕಿತ್ತು. ಆದರೆ, ಈ ಯೋಜನೆ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ನಂತರ ಆ ಅನುಮೋದನೆಯನ್ನು ರದ್ದುಪಡಿಸಲಾಗಿತ್ತು.
5.7 ಲಕ್ಷ ಮೆ.ಟ. ನಿರೀಕ್ಷೆ: ಪ್ರಸ್ತುತ ನಿಲ್ದಾಣದಲ್ಲಿ ಏರ್ ಕಾರ್ಗೊ ಸಾಮರ್ಥ್ಯ ವಾರ್ಷಿಕ 3.5 ಲಕ್ಷ ಮೆಟ್ರಿಕ್ ಟನ್ ಇದ್ದು, ಕಳೆದ ವರ್ಷ 3.2 ಲಕ್ಷ ಮೆಟ್ರಿಕ್ ಟನ್ ಇತ್ತು. ಕಾರ್ಗೊ ವಾರ್ಷಿಕ ಪ್ರಗತಿ ದರ ಶೇ. 8ರಷ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಸರಕು-ಸಾಗಣೆ ಸಾಮರ್ಥ್ಯ 5.7 ಲಕ್ಷ ಮೆಟ್ರಿಕ್ ಟನ್ ತಲುಪಲಿದೆ. ಈ ವ್ಯಾಪಾರ ವೃದ್ಧಿಗೆ ಹಲವು ಅವಕಾಶಗಳಿಗಾಗಿ ಹುಡುಕಾಟ ನಡೆದಿದೆ.
ಈ ನಿಟ್ಟಿನಲ್ಲಿ ಮುಕ್ತ ವ್ಯಾಪಾರ ವಲಯ ಅಥವಾ ವಿಶೇಷ ಆರ್ಥಿಕ ವಲಯ ಕೂಡ ಒಂದಾಗಿದೆ. ಇದು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಯ ಭಾಗವಾಗಿದೆ ಎಂದೂ ಅವರು ಸ್ಪಷ್ಟಪಡಿಸಿದರು. ಅದರಲ್ಲೂ ಮುಖ್ಯವಾಗಿ ಈ “ಮುಕ್ತ ವ್ಯಾಪಾರ ವಲಯ’ದಲ್ಲಿ ಮೆಡಿಕಲ್ ಕಿಟ್ ತಯಾರು ಮಾಡಿ, ರಫ್ತು ಮಾಡುವ ಉದ್ದೇಶ ಹೊಂದಲಾಗಿದೆ. ಸದ್ಯ ಈ ಮೆಡಿಕಲ್ ಕಿಟ್ ಸಂಯುಕ್ತ ರಾಷ್ಟ್ರಗಳಲ್ಲಿ ಸಿದ್ಧಗೊಂಡು, ಬೇರೆ ಬೇರೆ ದೇಶಗಳಿಗೆ ಪೂರೈಕೆ ಆಗುತ್ತಿದೆ.
ಈ ಕಿಟ್‌ಗೆ ಸಂಬಂಧಿಸಿದ ಶೇ. 40ರಷ್ಟು ವಸ್ತುಗಳು ಭಾರತದಿಂದಲೇ ಸರಬರಾಜು ಆಗುತ್ತದೆ. ಹೀಗಿರುವಾಗ, ಇದನ್ನು ಇಲ್ಲಿಯೇ ತಯಾರು ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಬಿಐಎಎಲ್ ಅಧಿಕಾರಿಗಳು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ಸ್ಯಾಟ್ಸ್ ಏರ್‌ಪೋರ್ಟ್ ಸರ್ವಿಸಸ್ ಪ್ರೈ.ಲಿ., ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರತೀಕ್ ಮೆಹ¤ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಕೊರಿಯರ್ ಕೌಂಟರ್: “ಇ-ವಾಣಿಜ್ಯ’ ವಹಿವಾಟು ವೃದ್ಧಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಈ ಸಂಬಂಧ ಪ್ರತ್ಯೇಕ ಅಂತಾರಾಷ್ಟ್ರೀಯ ಕೊರಿಯರ್ ಕೌಂಟರ್ ತೆರೆಯಲು ಉದ್ದೇಶಿಸಲಾಗಿದೆ.
ಸುಮಾರು 9 ಎಕರೆ ಜಾಗವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಪ್ರಸ್ತುತ ತಿಂಗಳಿಗೆ ಸಾವಿರ ಟನ್‌ನಷ್ಟು ನಿರ್ವಹಣೆ ಮಾಡಲಾಗುತ್ತಿದೆ. ಈ ಪ್ರತ್ಯೇಕ ಕೋರಿಯರ್ ಕೌಂಟರ್‌ನಿಂದ ವಾರ್ಷಿಕ 60ರಿಂದ 70 ಸಾವಿರ ಕೋರಿಯರ್ ನಿರ್ವಹಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ತಾಜಾತನ ಕಾಪಾಡಲು ಕೂಲ್ ಟ್ರಾಲಿ: ಬೇಗ ಹಾಳಾಗುವ ಹೂವು, ಹಣ್ಣು, ತರಕಾರಿ ಮತ್ತಿತರ ಸರಕುಗಳ ಸಾಗಣೆಗೆ ಏರ್ ಇಂಡಿಯಾ ಸ್ಯಾಟ್ಸ್ ಏರ್‌ಪೋರ್ಟ್ ಸರ್ವಿಸಸ್ ಪ್ರೈ.ಲಿ., “ಕೂಲ್ ಟ್ರಾಲಿ’ ಪರಿಚಯಿಸಿದೆ.
ಈ ನೂತನ ಟ್ರಾಲಿಯಲ್ಲಿ ಸಾಮಾನ್ಯ ಟ್ರಾಲಿಗಿಂತ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ. ಅಂದರೆ, ಶೈತ್ಯಾಗಾರದಲ್ಲಿ ಇದ್ದ ಉಷ್ಣಾಂಶ ಕೂಲ್ ಟ್ರಾಲಿಯಲ್ಲಿರುತ್ತದೆ. ಇದರಿಂದ ಬೇಗ ಹಾಳಾಗುವಂತಹ ಉತ್ಪನ್ನಗಳನ್ನು ಸುರಕ್ಷಿತವಾಗಿ ವಿಮಾನಗಳಿಗೆ ಸಾಗಿಸಲು ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.