![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 19, 2018, 6:00 AM IST
ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಗಳ ಅಂತಿಮ ವೇಳಾಪಟ್ಟಿ ಪ್ರಕಟಿಸಿದ್ದು, ಮಾರ್ಚ್ 1ರಿಂದ 18ರ ವರೆಗೆ ಪರೀಕ್ಷೆ ಗಳು ನಡೆಯಲಿವೆ. ಬೆಳಗ್ಗೆ 10.15ರಿಂದ 1.30ರ ವರೆಗೆ ಪರೀಕ್ಷಾ ಅವಧಿ ನಿಗದಿ ಪಡಿಸಲಾಗಿದೆ.
ಮಾ.1 ಅರ್ಥಶಾಸ್ತ್ರ, ಭೌತಶಾಸ್ತ್ರ, ಮಾ.2 ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್‌ನೆಸ್, ಮಾ.5 ತಮಿಳು, ತೆಲುಗು, ಮಲ ಯಾಳ, ಮರಾಠಿ, ಅರೇಬಿಕ್, ಫ್ರೆಂಚ್, ಮಾ.6 ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮಾ.7 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ, ಮಾ.8 ಉರ್ದು, ಸಂಸ್ಕೃತ, ಮಾ.9 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾ.11 ವ್ಯವಹಾರ ಅಧ್ಯಯನ, ಸಮಾಜ ಶಾಸ್ತ್ರ, ರಸಾಯನಶಾಸ್ತ್ರ, ಮಾ.12 ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಮಾ.13 ಮನಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕವಿಜ್ಞಾನ, ಮಾ.14 ಇತಿಹಾಸ, ಜೀವಶಾಸ್ತ್ರ, ಬೇಸಿಕ್ ಮ್ಯಾಥ್ಸ್, ಮಾ.15 ಹಿಂದಿ, ಮಾ.16 ಕನ್ನಡ, ಮಾ.18 ಇಂಗ್ಲಿಷ್ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.
You seem to have an Ad Blocker on.
To continue reading, please turn it off or whitelist Udayavani.