Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್ ಬಂಧನ
Team Udayavani, Oct 28, 2024, 12:40 PM IST
ಬೆಂಗಳೂರು: ಪೇಯಿಂಗ್ ಗೆಸ್ಟ್ (ಪಿಜಿ)ನಲ್ಲಿ ವಾಸ ವಿದ್ದ ಕಾಲೇಜು ವಿದ್ಯಾರ್ಥಿನಿಗೆ ಮುತ್ತು ನೀಡಿದ ಭದ್ರತಾ ಸಿಬ್ಬಂದಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ಪೀಣ್ಯ ನಿವಾಸಿ ರುದ್ರಯ್ಯ ಬಂಧಿತ ಆರೋಪಿ. ಈತ ಅ.24ರಂದು ರಾತ್ರಿ 11.30ರ ಸುಮಾರಿಗೆ ಪಶ್ಚಿಮ ಬಂಗಾಳದ 19 ವರ್ಷದ ಯುವತಿಗೆ ಮುತ್ತು ನೀಡಿದ್ದ ಎಂದು ಪೊಲೀಸರು ಹೇಳಿದರು.
ಪಶ್ಚಿಮ ಬಂಗಾಳದ 19 ವರ್ಷದ ಯುವತಿ ಸಮೀ ಪದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅ.24ರ ರಾತ್ರಿ 11.30 ರ ಸುಮಾರಿನಲ್ಲಿ ಪಿಜಿಯ ಸ್ಟೇರ್ಕೇಸ್ ಮೇಲಿಟ್ಟಿದ್ದ ಲೈಟರ್ ತೆಗೆದುಕೊಳ್ಳಲು ಯುವತಿ ಹೋದಾಗ, ಆರೋಪಿ ಆಕೆಯನ್ನು ತಬ್ಬಿಕೊಂಡು ಮತ್ತು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಿ.ಜಿ. ಮಾಲಿಕರು ಮತ್ತು ಮಹಿಳಾ ವಾರ್ಡನ್ಗೆ ಯುವತಿ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಮಾಲಿಕರು ಹಾಗೂ ವಾರ್ಡನ್ ಸ್ಥಳಕ್ಕೆ ಬಂದು, ಆಕೆಯನ್ನು ಸಂತೈಸಿ, ಭದ್ರತಾ ಸಿಬ್ಬಂದಿ ಎಸಗಿದ್ದ ಕೃತ್ಯ ರೆಕಾರ್ಡ್ ಆಗಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿ ಅಳಿಸಿ ಹಾಕಿಸಿದ್ದರು.
ಆದರೆ, ಸಂತ್ರಸ್ತೆ ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಪಿ.ಜಿ ಮಾಲೀಕರು ಮತ್ತು ವಾರ್ಡನ್ ಸಿಸಿ ಕ್ಯಾಮೆರಾ ದೃಶ್ಯಾವಳಿ ಅಳಿಸಿ ಹಾಕಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಅವರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Potholes: ಮೆಜೆಸ್ಟಿಕ್ ಬಸ್ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು
Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!
Bengaluru: ದುಷ್ಕರ್ಮಿಗಳಿಂದ ಬಸ್ ಡ್ರೈವರ್, ಕಂಡಕ್ಟರ್ಗೆ ಥಳಿತ!
Bengaluru: ಹಲ್ಲೆ ನಡೆದರೆ ಪೌರ ಕಾರ್ಮಿಕರು ತಕ್ಷಣವೇ ದೂರು ನೀಡಿ: ಕಮಿಷನರ್
Arrested: ಪತಿಯ ಕೊಂದಿದ್ದ ಪತ್ನಿ, ಆಕೆಯ ಪ್ರಿಯಕರ ಸೇರಿ ಐವರ ಬಂಧನ
MUST WATCH
ಹೊಸ ಸೇರ್ಪಡೆ
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.