ಇಂಗ್ಲಿಷ್‌ ಸಿನಿಮಾ ನೋಡಿ ಎಟಿಎಂ ದೋಚುತ್ತಿದ್ದರು!


Team Udayavani, Nov 28, 2017, 12:17 PM IST

atm-arrest.jpg

ಬೆಂಗಳೂರು: ಇತ್ತೀಚೆಗಷ್ಟೇ ಕೋಣನಕುಂಟೆ ವ್ಯಾಪ್ತಿಯ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಬ್ಯಾಂಕ್‌ ಎಟಿಎಂ ಯಂತ್ರ ಕದೊಯ್ದು ಲಕ್ಷಾಂತರ ರೂ. ದೋಚಿದ್ದ ಸಹೋದರರು ಸೇರಿ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಮೂಲದ ಶಿವಕುಮಾರ್‌ (23) ಈತನ ತಮ್ಮ ಶ್ರೀಧರ (21), ಕೀರ್ತಿಕುಮಾರ್‌ (22), ರಾಕೇಶ್‌ (22) ಬಂಧಿತರು.

ಆರೋಪಿಗಳಿಂದ 6.25 ಲಕ್ಷ ರೂ. ನಗದು, ಎಟಿಎಂ ಯಂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ಗ್ಯಾಸ್‌ ಕಟ್ಟರ್‌, ಒಂದು ಕಾರು, ಎರಡು ದ್ವಿಚಕ್ರವಾಹನ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬ್ಯಾಂಕ್‌ ರಾಬರಿಗೆ ಸಂಬಂಧಿಸಿದ ಇಂಗ್ಲಿಷ್‌ ಸಿನಿಮಾಗಳನ್ನು ವೀಕ್ಷಿಸುತ್ತಿದ್ದ ಆರೋಪಿಗಳು, ಅದನ್ನೇ ಪ್ರೇರಣೆಯಾಗಿಸಿಕೊಂಡು ಕೃತ್ಯ ಎಸಗಿದ್ದರು ಎಂದು ದಕ್ಷಿಣ ವಿಭಾಗ ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.

ನ.1ರಂದು ವಿನಾಯಕ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ, ರಾತ್ರಿ 2 ಗಂಟೆ ಸುಮಾರಿಗೆ ವಾಪಸ್‌ ಬರುತ್ತಿದ್ದ ನಾಲ್ವರು ಆರೋಪಿಗಳು, ಭದ್ರತಾ ಸಿಬ್ಬಂದಿ ಇಲ್ಲದ ಗೊಟ್ಟೆಗೆರೆಯ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ನುಗ್ಗಿ, ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿ ಎಟಿಎಂ ಯಂತ್ರವನ್ನೇ ಕದ್ದೊಯ್ದು, ಅದರಲ್ಲಿದ್ದ 7.85 ಲಕ್ಷರೂ ದೋಚಿದ್ದರು.

ಈ ಘಟನೆಗೂ 15 ದಿನ ಮೊದಲು ಆರೋಪಿಗಳು ಬನಶಂಕರಿಯಲ್ಲಿ ಐಸಿಐಸಿಐ ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿಯ ಬೆದರಿಸಿ ದರೋಡೆಗೆ ವಿಫ‌ಲ ಯತ್ನ ನಡೆಸಿದ್ದರು. ಈ ಸಂಬಂಧ ಕೋಣನಕುಂಟೆ ಠಾಣೆ ಇನ್ಸ್‌ಪೆಕ್ಟರ್‌ ಧರ್ಮೆಂದ್ರ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸಾಲ ತೀರಿಸಲು ದರೋಡೆ: ಆರೋಪಿಗಳು ಒಂದೇ ಊರಿನವರಾಗಿದ್ದು, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಈ ಪೈಕಿ ರಾಕೇಶ್‌ ಅಡುಗೆ ಭಟ್ಟನಾಗಿದ್ದು, ಉಳಿದವರು ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದರು. ಈ ನಡುವೆ ಲಕ್ಷಾಂತರ ರೂ. ಸಾಲ ಮಾಡಿದ್ದ ಆರೋಪಿಗಳು, ಈ ಹಣವನ್ನ ಮನೆ ನಿರ್ಮಾಣ, ಕಾರು, ಬೈಕ್‌ಗಳ ಖರೀದಿಗೆ ಹಾಕಿದ್ದರು. ಕಡೆಗೆ ಸಾಲ ತೀರಿಸಲು ಕಳ್ಳ ದಾರಿ ಹಿಡಿದಿದ್ದರು.

ಆರಂಭದಲ್ಲಿ ಮನೆ ಕಳವಿಗೆ ಸಂಚು ರೂಪಿಸಿದ್ದ ಆರೋಪಿಗಳು, ಹಾಗೆ ಮಾಡಿದರೆ ಆ ಮನೆಯವರು ಕಷ್ಟಪಡಬೇಕಾಗುತ್ತದೆ ಎಂದು ಮರುಗಿದ್ದರು. ನಂತರ ಎಟಿಎಂಗಳಲ್ಲಿ ಸರ್ಕಾರದ ದುಡ್ಡಿರುತ್ತದೆ. ಒಂದೊಂದು ಎಟಿಎಂ ಕದ್ದಗ ಸಿಗುವ ಲಕ್ಷಾಂತರ ರೂಪಾಯಿಯಲ್ಲಿ ಎಲ್ಲ ಸಾಲ ತೀರಿಸಬಹುದು ಎಂದು ಎಟಿಎಂ ದರೋಡೆಗೆ ಇಳಿದಿದ್ದರು. ಈ ವಿಚಾರವನ್ನು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

ದರೋಡೆಗೆಂದೇ ಇಂಗಿಷ್‌ ಸಿನಿಮಾ ನೋಡುತ್ತಿದ್ದರು!: ಸಾಮಾನ್ಯವಾಗಿ ಇಂಗ್ಲಿಷ್‌ ಸಿನಿಮಾಗಳಲ್ಲಿ ಬ್ಯಾಂಕ್‌ ದರೋಡೆ, ಕಳವು ಮಾಡುವುದನ್ನು ವಿಭಿನ್ನವಾಗಿ ತೋರಿಸುತ್ತಾರೆ. ಇಂಥ ದೃಶ್ಯಗನ್ನೇ ನೋಡಿ ಪ್ರೇರಣೆಗೊಂಡಿದ್ದ ಆರೋಪಿಗಳು, ಸಿನಿಮಾ ಮಾದರಿಯಲ್ಲೇ ಎಟಿಎಂ ದೋಚಲು ಸಂಚು ರೂಪಿಸುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ದರೋಡೆ ನಡೆಸಲೆಂದೇ ಕೆಲ ತಿಂಗಳುಗಳಿಂದ ಅನೇಕ ಇಂಗ್ಲಿಷ್‌ ಸಿನಿಮಾಗಳನ್ನು ಆರೋಪಿಗಳು ವೀಕ್ಷಿಸುತ್ತಿದ್ದರು. ಆರೋಪಿ ಶಿವಕುಮಾರ್‌ ಇಂತಹ ವಿಭಿನ್ನ ಕಥಾವಸ್ತು ಇರುವ ಇಂಗ್ಲಿಷ್‌ ಸಿನಿಮಾಗಳ ಸಿಡಿಗಳನ್ನು ಖರೀದಿಸುತ್ತಿದ್ದ. ಜತೆಗೆ ಯುಟ್ಯೂಬ್‌ನಲ್ಲೂ ಇಂಥ ಸಿನಿಮಾಗಳನ್ನು ನೋಡಿ ಆರೋಪಿಗಳು ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸುಳಿವು ನೀಡಿದ ದಿಢೀರ್‌ ಐಶಾರಾಮಿ ಜೀವನ: ಆರೋಪಿಗಳ ಪೈಕಿ ರಾಕೇಶ್‌ ಕೋಣನಕುಂಟೆ ವ್ಯಾಪ್ತಿಯಲ್ಲಿ ವಾಸವಾಗಿದ್ದು, ಹೋಟೆಲ್‌ವೊಂದರಲ್ಲಿ ಅಡುಗೆ ಭಟ್ಟನಾಗಿದ್ದ. ದರೋಡೆ ಮಾಡಿದ ಬಳಿಕ ಈತನ ಜೀವನ ಶೈಲಿಯೇ ಬದಲಾಗಿತ್ತು.

ದುಬಾರಿ ಬಟ್ಟೆಗಳು, ಬೈಕ್‌ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ. ಇತ್ತ ಕೆಲಸಕ್ಕೂ ಹೋಗದೆ ಮೋಜು-ಮಸ್ತಿ ಮಾಡಿಕೊಂಡಿದ್ದ. ಏಕಾಏಕಿ ಈತನ ಬದಲಾವಣೆ ಕಂಡ ಪೊಲೀಸ್‌ ಬಾತ್ಮೀದಾರರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ರಾಕೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ನಂತರ ಆತ ನೀಡಿದ ಮಾಹಿತಿ ಮೇರೆಗೆ ಇತರ ಆರೋಪಿಗಳನ್ನು ಬಂಧಿಸಲಾಗಿದೆ.

ಉಪಕರಣ ಖರೀದಿಗೆ 10 ಸಾವಿರ ಹೂಡಿಕೆ: ಆರೋಪಿಗಳು ಎಟಿಎಂ ಕೇಂದ್ರಗಳನ್ನು ದರೋಡೆ ಮಾಡಲೆಂದೆ ಆಧುನಿಕ ಉಪಕರಣಗಳನ್ನು ಖರೀದಿಸಲು 10 ಸಾವಿರ ಹೂಡಿಕೆ ಮಾಡಿದ್ದರು. ಗ್ಯಾಸ್‌ ಕಟರ್‌, ಎಟಿಎಂ ಯಂತ್ರ ಒಡೆಯಲು ಹಾರೆ ಮತ್ತಿತರ ಉಪಕರಣ ಖರೀದಿಸಿದ್ದರು. ಇವುಗಳನ್ನು ಬಳಸಿಯೇ ಎಟಿಎಂ ಕೇಂದ್ರಗಳಿಗೆ ನುಗ್ಗಿ ಅನಾಯಸವಾಗಿ ಯಂತ್ರಗಳನ್ನು ಕೊದ್ದೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

High Court : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Vettaiyan: ಈ ದಿನ ಓಟಿಟಿಗೆ ಬರಲಿದೆ ರಜಿನಿ ʼವೆಟ್ಟೈಯನ್‌ʼ?; ಇದುವರೆಗಿನ ಗಳಿಕೆ ಎಷ್ಟು?

Vettaiyan: ಈ ದಿನ ಓಟಿಟಿಗೆ ಬರಲಿದೆ ರಜಿನಿ ʼವೆಟ್ಟೈಯನ್‌ʼ?; ಇದುವರೆಗಿನ ಗಳಿಕೆ ಎಷ್ಟು?

ಸಿದ್ದರಾಮಯ್ಯ

ByPolls; ಕಾಂಗ್ರೆಸ್‌ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ

Hubli: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿತ; ಓರ್ವನ ಬಂಧನ, ಉಳಿದವರಿಗೆ ಶೋಧ

Hubli: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿತ; ಓರ್ವನ ಬಂಧನ, ಉಳಿದವರಿಗೆ ಶೋಧ

ನನ್ನ ದೇಹದಲ್ಲಿ ಸಿಂಹದ ರಕ್ತ ಹರಿಯುತ್ತಿದೆ… ಬೆದರಿಕೆಗೆ ಹೆದರಲ್ಲ: ಬಾಬಾ ಸಿದ್ದಿಕಿ ಪುತ್ರ

ನನ್ನ ದೇಹದಲ್ಲಿ ಸಿಂಹದ ರಕ್ತ ಹರಿಯುತ್ತಿದೆ… ಬೆದರಿಕೆಗೆ ಹೆದರಲ್ಲ: ಬಾಬಾ ಸಿದ್ದಿಕಿ ಪುತ್ರ

‘ಭಾರತ ಜಾತ್ಯತೀತವಾಗಿರುವುದು ನಿಮಗೆ ಇಷ್ಟವಿಲ್ಲವೇ?”: ಸಂವಿಧಾನ ಪೀಠಿಕೆ ಕುರಿತು ಸುಪ್ರೀಂ

SC: ‘ಭಾರತ ಜಾತ್ಯತೀತವಾಗಿರುವುದು ನಿಮಗೆ ಇಷ್ಟವಿಲ್ಲವೇ?”: ಸಂವಿಧಾನ ಪೀಠಿಕೆ ಕುರಿತು ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

Consumer Court: ದೋಷಪೂರಿತ ಇವಿ ದ್ವಿಚಕ್ರ ವಾಹನ ಕೊಟ್ಟ ಕಂಪನಿಗೆ ಕೋರ್ಟ್‌ನಿಂದ 2ಲಕ್ಷ ದಂಡ

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

Fraud: ವಿದೇಶದಲ್ಲಿ ಉದ್ಯೋಗ‌ ಕೊಡಿಸುವುದಾಗಿ 9 ಲಕ್ಷ ವಂಚನೆ: ಮೂವರ ವಿರುದ್ಧ ಕೇಸ್‌ 

0527

Bengaluru: ತಂದೆ ಸಾಲದ ಹಣ ವಾಪಸ್‌ ಕೊಡದಕ್ಕೆ ಬಾಲಕಿ ಮೇಲೆ ರೇಪ್‌

031

Bengaluru: ನೌಕರಿ ಕೊಡಿಸುವುದಾಗಿ 47 ಲಕ್ಷ ರೂ. ದೋಚಿದ ಪೊಲೀಸ್‌

5

Bengaluru: ಕುಡಿದು ಗಲಾಟೆ ಮಾಡುತ್ತಿದ್ದ ಮಗನ ಕೊಂದ ಅಪ್ಪ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

8(1)

Pandeshwar ರೈಲು ಹಳಿ ದುರಸ್ತಿ; ವಾಹನ ಸವಾರರಿಗೆ ಸಂಕಷ್ಟ

High Court : ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

7

Thekkatte: ಭತ್ತದ ಕಟಾವು ಆರಂಭ; ಎಲ್ಲೆಡೆ ಯಂತ್ರಗಳದೇ ಸದ್ದು!

6

Karkala: ಬಂಡಿಮಠ ಜಂಕ್ಷನ್‌ನಲ್ಲಿ ಅಪಘಾತಗಳ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.