ಯುವತಿಯರಿಗೆ ಸ್ವಯಂ ರಕ್ಷಣಾ ತರಬೇತಿ
Team Udayavani, Oct 31, 2018, 12:15 PM IST
ಬೆಂಗಳೂರು: ಅಖೀಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಯುವತಿಯರಿಗೆ ಸ್ವಯಂ ರಕ್ಷಣೆ ಕುರಿತು ತರಬೇತಿ ನೀಡಲು “ಮಿಷನ್ ಸಾಹಸಿ’ ಎಂಬ ಕಾರ್ಯಕ್ರಮವನ್ನು ನಗರದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿಲಾಗಿತ್ತು.
ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಭಾಗವಹಿಸಿ, ಸ್ವಯಂ ರಕ್ಷಣೆಗಾಗಿ ತಾವು ಕಲಿತಿರುವ ಮಾರ್ಷಲ್ ಆರ್ಟ್ಸ್ ಮತ್ತು ಕರಾಟೆ ಕೌಶಲ್ಯಗಳನ್ನು ಪ್ರದರ್ಶಿಸಿದರು. ಜತೆಗೆ ಕಿರುಕುಳ ನೀಡಲು ಬಂದ ಪುರುಷರಿಂದ ಪಾರಾಗುವ ಪರಿ ಹಾಗೂ ಮಾನಸಿಕವಾಗಿ ಸಿದ್ಧರಾಗುವ ಕುರಿತು ಕಾಲೇಜು ವಿದ್ಯಾರ್ಥಿನಿಯರಿಗೆ “ದಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್’ನ 250ಕ್ಕೂ ಹೆಚ್ಚು ಬ್ಲಾಕ್‌ಬೆಲ್ಟ್ ಪಟುಗಳು ಕರಾಟೆ ಪಟ್ಟುಗಳನ್ನು ಕಲಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ನಟಿ ಶ್ರುತಿ ಮಾತನಾಡಿ, ಮಹಿಳೆಯರು ಸ್ವಯಂ ರಕ್ಷಣೆ ಮಾಡಿಕೊಳ್ಳುವ ಮಟ್ಟಕ್ಕೆ ಸಮಾಜ ಅಪಾಯಕಾರಿಯಾಗಿ ಬದಲಾಗಿರುವುದು ಬೇಸರದ ವಿಚಾರ. ಮಹಿಳೆ ದೈಹಿಕ ಶಕ್ತಿಯ ಜತೆಗೆ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಲ್ಲಿ ತನಗೆ ತೊಂದರೆ ನೀಡಲು ಬಂದವರನ್ನು ಸಮರ್ಥವಾಗಿ ಎದುರಿಸಬಲ್ಲಳು. ಮುಖ್ಯವಾಗಿ ಸಮಾಜವನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಯುವತಿಯರಲ್ಲಿ ಪೋಷಕರು ತುಂಬಬೇಕು ಎಂದರು.
ಅಭಿಯಾನದಲ್ಲಿ ಮಹಾರಾಣಿ ಕಾಲೇಜು, ಅಮ್ಮಣ್ಣಿ ಕಾಲೇಜು, ವಿಜಯನಗರ ಕಲೇಜು, ಎನ್‌ಎಂಕೆಆರ್‌ವಿ ಕಾಲೇಜು, ಎಸ್‌ಜೆಪಿ ಕಾಲೇಜು, ಆರ್‌ಸಿ ಕಾಲೇಜು ಸೇರಿದಂತೆ ಇನ್ನಿತ ಕಾಲೇಜುಗಳಿಂದ ಒಂದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ವೇಳೆ ಬೆಂಗಳೂರು ವಿವಿ ಉಪಕುಲಪತಿ ಡಾ. ವೇಣುಗೋಪಾಲ್, ಗರುಡ ಫೌಂಡೇಷನ್ ಪ್ರಧಾನ ಟ್ರಸ್ಟಿ ಮೇದಿನಿ ಉದಯ್, ದಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಗ್ರ್ಯಾಂಡ್ ಮಾಸ್ಟರ್ ಡಾ. ಪ್ರವೀಣ್ ರಂಕಾ, ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷನಾರಾಯಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.