ಸೆಲ್ಫಿ ಗೀಳು: ಯುವಕನ ಸಾವು
Team Udayavani, Nov 19, 2021, 10:23 AM IST
ಬೆಂಗಳೂರು: ಚಲಿಸುವ ರೈಲಿನ ಬಾಗಿಲ ಬಳಿ ಬ್ಯಾಲೆನ್ಸ್ ಮಾಡುತ್ತ ಸೆಲ್ಫಿ ತೆಗೆಯುವಾಗ ನಗರದ ಯುವಕನೊಬ್ಬ ನದಿಗೆ ಬಿದ್ದು ಮೃತಪಟ್ಟಿದ್ದು, ಶ್ರೀರಂಗಪಟ್ಟಣದ ಬಳಿ ಮೃತದೇಹ ಪತ್ತೆಯಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಅಣ್ಣೆಚಕ್ಕನಹಳ್ಳಿ ನಿವಾಸಿ ಅಭಿಷೇಕ್ (19) ಮೃತ ಯುವಕ.
3 ವರ್ಷಗಳಿಂದ ಬೆಂಗಳೂರಿನಲ್ಲಿರುವ ಯುವಕ, ಗಾಂಧಿನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಸಹಾಯಕನಾಗಿದ್ದ. ನ.6ರಂದು ಊರಿನಲ್ಲಿ ಅಂಕಲಿಂಗೇಶ್ವರ ದೇವಾಲಯ ಸ್ಥಾಪನೆ ಕಾರ್ಯಕ್ರಮ ಇದ್ದು, ಊರಿಗೆ ಹೋಗಲು ನಾಲ್ವರು ಸ್ನೇಹಿತರಿಗೆ ಕರೆ ಮಾಡಿ ದ್ದಾನೆ. ನಂತರ ರಾತ್ರಿ 10ಗಂಟೆ ಸುಮಾರಿಗೆ ಎಲ್ಲರೂ ಮೆಜೆಸ್ಟಿಕ್ ಬಂದಿದ್ದು, ಮಂಡ್ಯ ರೈಲು ಹತ್ತಿದ್ದಾರೆ. ತಡರಾತ್ರಿ 2 ಗಂಟೆ ಸುಮಾರಿಗೆ ಎಲ್ಲರೂ ರೈಲಿನ ಬಾಗಿಲ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಜತೆಗೆ ಗ್ರೂಪ್ ಫೋಟೋ ಪಡೆದುಕೊಂಡಿದ್ದಾರೆ. ನಂತರ ತಮ್ಮ ಸೀಟುಗಳ ಬಳಿ ಹೋಗಿದ್ದಾರೆ.
ಇದನ್ನೂ ಓದಿ:- ಭರದಿಂದ ಸಾಗಿದೆ ಹಿಂಗಾರು ಬಿತ್ತನೆ
ಆದರೆ, ಅಭಿಷೇಕ್, ಶ್ರೀರಂಗಪಟ್ಟಣದ ಲೋಕಪಾವನಿ ನದಿ ಮೇಲು ಸೇತುವೆ ಮೇಲೆ ರೈಲು ಹೋಗುವಾ ಬಾಗಿಲ ಕಂಬಿಯನ್ನು ಒಂದು ಕೈಯಲ್ಲಿ ಹಿಡಿದು ಬ್ಯಾಲೆನ್ಸ್ ಮಾಡುತ್ತ ಸೆಲ್ಫಿ ಪಡೆಯಲು ಮುಂದಾಗಿದ್ದಾನೆ. ಈ ವೇಳೆ ಕಬ್ಬಿಣ ಸೇತುವೆ ಆತನಿಗೆ ತಗುಲಿ ನದಿಗೆ ಬಿದ್ದು ಮೃತಪಟ್ಟಿ ದ್ದಾನೆ. ಆದರೆ, ರೈಲಿನಲ್ಲಿದ್ದ ಆತನ ಸ್ನೇಹಿತರಿಗೆ ಇದ್ಯಾವುದು ಗೊತ್ತಾಗಿಲ್ಲ. ಮುಂಜಾನೆ ಪಾಂಡವಪುರ ರೈಲು ನಿಲ್ದಾ ಣದಲ್ಲಿ ಎಲ್ಲರೂ ಇಳಿದಾಗಿ ಅಭಿಷೇಕ್ಗಾಗಿ ಹುಡುಕಾಟ ನಡೆಸಿದ್ದಾರೆ.
ಎಲ್ಲಿಯೂ ಪತ್ತೆಯಾಗಿಲ್ಲ. ಆಗ ಇಬ್ಬರು ಊರಿಗೆ ತೆರಳಿದ್ದು, ಇಬ್ಬರು ಅಭಿಷೇಕ್ ಹುಡುಕಿಕೊಂಡು ವಾಪಸ್ ಬೆಂಗಳೂರಿಗೆ ಬಂದಿದ್ದಾರೆ. ಈ ಕುರಿತು ಅಭಿಷೇಕ್ ಸಂಬಂಧಿಕರಿಗೆ ಸ್ನೇಹಿತರು ಮಾಹಿತಿ ನೀಡಿದ್ದು, ಸಂಬಂಧಿ ಮಂಜೇಗೌಡ ಅವರು ನ.8ರಂದು ಅಭಿಷೇಕ್ ಕಾಣೆಯಾಗಿ¨ªಾನೆಂದು ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನಿಖೆ ಆರಂಭಿಸಿದ ಪೊಲೀಸರು, ಮೊದಲಿಗೆ ಆತನ ಸ್ನೇಹಿತರ ವಿಚಾರಣೆ ನಡೆಸಿದ್ದಾರೆ. ಆಗ ನಡೆದ ಘಟನೆ ಯನ್ನು ವಿವರಿಸಿದ್ದಾರೆ. ಕೂಡಲೇ ಉಪ್ಪಾರಪೇಟೆ ಠಾಣೆ ಪೊಲೀಸರು ಮತ್ತು ರೈಲು ಪೊಲೀಸರು ಹಾಗೂ ಮಂಡ್ಯ ಜಿಲ್ಲೆ ಅಗ್ನಿಶಾಮಕ ಸಿಬ್ಬಂದಿ, ನುರಿತ ಮೀನುಗಾರರ ತಂಡ ನದಿಯಲ್ಲಿ ಹುಡುಕಾಟ ನಡೆಸಿದೆ. ಇದೇ ವೇಳೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ನದಿ ದಂಡೆ ಬಳಿ ಮೃತದೇಹ ಪತ್ತೆಯಾಗಿದೆ. ಅಲ್ಲಿಯೇ ಅಸಹಜ ಸಾವು ದಾಖಲಿಸಿಕೊಂಡಿದ್ದಾರೆ.
“ಯುವಕನ ಶವ ಪತ್ತೆ ಹಚ್ಚಿ, ಮರಣೋತ್ತರ ಪರೀಕ್ಷೆ ನಡೆಸಿ ಆತನ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವ ಯುವಕರು ಸೇರಿ ಪ್ರತಿಯೊಬ್ಬ ಪ್ರಯಾಣಿಕರು ಡೋರ್ ಬಳಿ ನಿಂತು ಸೆಲ್ಫಿ ತೆಗೆಯುವುದು, ಮೊಬೈಲ್ನಲ್ಲಿ ಮಾತನಾಡುವುದು, ಡೋರ್ ಬಳಿ ನಿಂತುಕೊಳ್ಳುವುದನ್ನು ಬಿಡಬೇಕು.” – ಸಂಜೀವ್ ಎಂ.ಪಾಟೀಲ್, ಪಶ್ಚಿಮ ವಿಭಾಗ ಡಿಸಿಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.