Selling drugs: ಡ್ರಗ್ಸ್ ಮಾರಾಟ; ಇಬ್ಬರು ಪೆಡ್ಲರ್‌ಗಳ ಸೆರೆ
Team Udayavani, Nov 4, 2023, 11:20 AM IST
ಬೆಂಗಳೂರು: ಪ್ರತ್ಯೇಕ ಎರಡು ಡ್ರಗ್ಸ್ ಪೆಡ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ, ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಒಡಿಶಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಲಾರಿ ಚಾಲಕ ಹರ್ಷವರ್ಧನ್ (25) ಎಂಬಾತ ನನ್ನು ಬಂಧಿಸಿದ ಆರ್‌ಎಂಸಿ ಯಾರ್ಡ್ ಠಾಣೆ ಪೊಲೀಸರು, 12 ಕೆ.ಜಿ. 50 ಗ್ರಾಂ ತೂಕದ ಗಾಂಜಾ ಜಪ್ತಿ ಮಾಡಿದ್ದಾರೆ.
ಒಡಿಶಾ ಮೂಲದ ಮತ್ತೂಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಹರ್ಷವರ್ಧನ್ ಲಾರಿ ಚಾಲಕನಾಗಿದ್ದು, ಒಡಿಶಾ ಕಡೆ ಹೋಗಿದ್ದಾಗ ತಲೆ ಮರೆಸಿಕೊಂಡಿರುವ ವ್ಯಕ್ತಿಯ ಪರಿಚಯವಾಗಿತ್ತು. ಆತನನ್ನು ಸಂಪರ್ಕಿಸಿ ರೈಲಿನ ಮೂಲಕ ವಿಜಯವಾಡದಿಂದ ಬೆಂಗಳೂರಿಗೆ ಗಾಂಜಾ ತರಿಸಿಕೊಂಡು ತನ್ನ ಗೂಡ್ಸ್ ವಾಹನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಸಂಗತಿ ಆರೋಪಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಯಲಹಂಕ ಪೊಲೀಸ್ ಠಾಣೆ: ಮತ್ತೂಂದು ಪ್ರಕರಣದಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜೊಂದರ ಬಳಿ ಕಾಲೇಜು ವಿದ್ಯಾರ್ಥಿಗಳಿಗೆ ಎಂಡಿಎಂಎ ಎಂಬ ಮಾದಕವಸ್ತು ಮಾರಾಟ ಮಾಡುತ್ತಿದ್ದ ಪೈಜ್ ಖಾನ್ ಯಲಹಂಕ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಆತನಿಂದ 50 ಸಾವಿರ ರೂ. ಬೆಲೆ ಬಾಳುವ ಎಂಡಿಎಂಎ ಜಪ್ತಿ ಮಾಡಿಕೊಳ್ಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.