“ಸೆಲ್ಫಿ’ಗೆ ಪೋಸು ಕೊಡುವಂತೆ ಮಹಿಳೆ ಜತೆ ದುರ್ವರ್ತನೆ


Team Udayavani, Jan 11, 2017, 12:00 PM IST

selfie-.jpg

ಬೆಂಗಳೂರು: ಇತ್ತೀಚಿಗೆ ಕಬ್ಬನ್‌ ಪಾರ್ಕ್‌ನಲ್ಲಿರುವ ಟೆನ್ನಿಸ್‌ ಕ್ಲಬ್‌ ಆವರಣದಲ್ಲಿ ವರ್ಷಾಚರಣೆ ವೇಳೆ ಮೊಬೈಲ್‌ನಲ್ಲಿ “ಸೆಲ್ಫಿ’ಗೆ ಫೋಸ್‌ ನೀಡುವಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಪತ್ನಿ ಮತ್ತು ಅವರ ಸ್ನೇಹಿತೆಯರ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ಕಾರು ಚಾಲಕನೊಬ್ಬನನ್ನು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಕ್ಯಾಬ್‌ ಚಾಲಕ ಶಿವರಾಜ್‌ ಬಂಧಿತನಾಗಿದ್ದು, ಕ್ಲಬ್‌ ಆವರಣದಲ್ಲಿ ಡಿ.31 ರಂದು ಶನಿವಾರ ರಾತ್ರಿ ವರ್ಷಾಚರಣೆ ನಿಮಿತ್ತ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರ ಪತ್ನಿ ಹಾಗೂ ಮಹಿಳೆಯರ ಜತೆ ಕುಡಿದ ಅಮಲಿನಲ್ಲಿ ಶಿವರಾಜ್‌ ಹಾಗೂ ಆತನ 14 ಮಂದಿ ಸ್ನೇಹಿತರು ದುಂಡಾವರ್ತನೆ ತೋರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕುಡಿದ ಅಮಲಿನಲ್ಲಿ ಗಲಾಟೆ: ಟೆನ್ನಿಸ್‌ ಕ್ಲಬ್‌ ವತಿಯಿಂದ ಆಯೋಜನೆಗೊಂಡಿದ್ದ ಹೊಸ ವರ್ಷದ ಪಾರ್ಟಿಗೆ ತಮ್ಮ ಪತ್ನಿ, ಮಕ್ಕಳು ಹಾಗೂ ಸೋದರ ಸೇರಿದಂತೆ ಕುಟುಂಬದ ಜತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಭಾಗವಹಿಸಿದ್ದರು. ಆಗ ಅಧಿಕಾರಿ ಕುಟುಂಬದ ಟೇಬಲ್‌ ಬಳಿ ಕುಟುಂಬವೊಂದು ಕುಳಿತಿತು. ಕೆಲ ಹೊತ್ತಿನ ಬಳಿಕ ಊಟ ತೆಗೆದುಕೊಂಡು ಬರಲು ಪತಿ ತೆರೆಳಿದ್ದರಿಂದ ಆ ಟೇಬಲ್‌ನಲ್ಲಿ ಒಬ್ಬಂಟಿಯಾಗಿ ಮಹಿಳೆ ಕುಳಿತಿದ್ದರು. ಅದೇ ವೇಳೆಗೆ ಅಲ್ಲಿಗೆ ಬಂದ ಆರೋಪಿಗಳು, ತಮ್ಮ ಮೊಬೈಲ್‌ ತೆಗೆದು ಆ ಮಹಿಳೆ ಜತೆ “ಸೆಲ್ಫಿ’ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಈ ವರ್ತನೆಗೆ ಆಕ್ಷೇಪಿಸಿದ ಅವರು, ಆರೋಪಿಗಳಿಗೆ ದೂರ ಹೋಗುವಂತೆ ತಾಕೀತು ಮಾಡಿದ್ದಾರೆ. ಆದರೆ ಕಂಠಪೂರ್ತಿ ಮದ್ಯ ಸೇವಿಸಿದ್ದ ಕಿಡಿಗೇಡಿಗಳು, ಮಹಿಳೆ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಈ ಗಲಾಟೆ ಸದ್ದಿಗೆ ಗಮನಿಸಿದ ಮತ್ತೂಂದು ಟೇಬಲ್‌ನಲ್ಲಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಪತ್ನಿ, ಕೂಡಲೇ ಆ ಮಹಿಳೆ ನೆರವಿಗೆ ಬಂದಿದ್ದಾರೆ. ಆಗ ಅವರೊಂದಿಗೂ ಪುಂಡಾಟಿಕೆ ನಡೆಸಿದ ಆರೋಪಿಗಳು, ಅಧಿಕಾರಿ ಪತ್ನಿ ಜತೆಗೂ “ಸೆಲ್ಫಿ’ ತೆಗೆದುಕೊಳ್ಳಲು ಯತ್ನಿಸಿದ್ದಾರೆ.

ಅಷ್ಟರಲ್ಲಿ ಅಧಿಕಾರಿ ಹಾಗೂ ಅವರ ಸೋದರ, ಟೇಬಲ್‌ ಬಳಿಗೆ ಬಂದು ಪುಂಡಾಟಿಗೆ ನಡೆಸಿದವರ ಮೇಲೆ ಜೋರು ಮಾಡಿದ್ದಾರೆ. ಇದರಿಂದ ಬೆದರಿದ ಕಿಡಿಗೇಡಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕ್ಲಬ್‌ನ ಸಿಸಿಟೀವಿ ಕ್ಯಾಮೆರಾದ ಸೆರೆಯಾಗಿದ್ದ ದೃಶ್ಯಾವಳಿಗಳನ್ನಾಧರಿಸಿ ಆರೋಪಿಗಳ ಪೈಕಿ ಶಿವರಾಜ್‌ನನ್ನು ಬಂಧಿಸಿದ್ದಾರೆ. ಈತ ಕ್ಯಾಬ್‌ ಚಾಲಕನಾಗಿದ್ದು, ಕುಡಿದ ಮತ್ತಿನಲ್ಲಿದ್ದ ಈ ರೀತಿ ವರ್ತಿಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.