“ಅರೆ ಹೆಲ್ಮೆಟ್’ ಮಾರುಕಟ್ಟೆ ಪ್ರವೇಶಕ್ಕೆ “ಬ್ರೇಕ್’ ಹಾಕಲು ಸೂಚನೆ
Team Udayavani, Jan 9, 2018, 5:20 AM IST
ಬೆಂಗಳೂರು: ಐಎಸ್ಐ ಮಾರ್ಕ್ ಹಾಗೂ ಗುಣ ಮಟ್ಟವಲ್ಲದ ಅರೆ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುವುದನ್ನೇ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.
ಐಎಸ್ಐ ಮಾರ್ಕ್ ಇಲ್ಲದ ತಲೆಯ ಪೂರ್ಣ ಭಾಗ ಮುಚ್ಚಿ ಕೊಳ್ಳದ ಅಸುರಕ್ಷಿತ ಹೆಲ್ಮೆಟ್ಗಳು ಮಾರುಕಟ್ಟೆಗೆ ಬರುವುದನ್ನೇ ತಡೆದರೆ ಸವಾರರು ಖರೀದಿಸುವ ಪ್ರಶ್ನೆ ಅಥವಾ ಸಂಚಾರಿ ಪೊಲೀಸರು ತಪಾಸಣೆ ಮಾಡುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೆ. 1ರಿಂದ ಐಎಸ್ಐ ಮಾರ್ಕ್ ಇಲ್ಲದ ಹಾಗೂ ಅರೆ ಹೆಲ್ಮೆಟ್ ನಗರದಲ್ಲಿ ನಿಷೇಧಕ್ಕೆ ಮುಂದಾಗಿರುವುದರಿಂದ ಈಗಿಂದಲೇ ಮಾರುಕಟ್ಟೆಗೆ ಅರೆ ಹೆಲ್ಮೆಟ್ ಪ್ರವೇಶಿಸದಂತೆ ನೋಡಿಕೊಳ್ಳಿ. ರಸ್ತೆ ಬದಿ ಹಾಗೂ ಅಧಿಕೃತ ಹೆಲ್ಮೆಟ್ ಮಾರಾಟ ಮಳಿಗೆಗಳಲ್ಲೂ ಕೆಲವೊಂದು ಕಡೆ ಐಎಸ್ಐ ಮಾರ್ಕ್ ಇಲ್ಲದ, ಅಸುರಕ್ಷಿತ ಹೆಲ್ಮೆಟ್ಗಳ ದಾಸ್ತಾನಿದೆ. ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಗೃಹ ಸಚಿವ ಸೂಚನೆ ಮೇರೆಗೆ ತತ್ಕ್ಷಣವೇ ಸಂಚಾರಿ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಅರೆ ಹೆಲ್ಮೆಟ್ ತಪಾಸಣೆ ಕಾರ್ಯ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
Bengaluru: ಬಟ್ಟೆ ಗುಣಮಟ್ಟ ದೃಢೀಕರಣಕ್ಕೂ ಬಂತು ಸೆನ್ಸರ್!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.