ಕೆಎಸ್‌ಆರ್‌ಟಿಸಿಯಿಂದ ಹಿರಿಯ ನಾಗರಿಕರ ವಿಶೇಷ ಗುರುತಿನ ಚೀಟಿ ಸ್ಥಗಿತ
Team Udayavani, Jan 23, 2018, 6:10 AM IST
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದಿಂದ ಈ ಮೊದಲು ವಿತರಿಸಲಾಗುತ್ತಿದ್ದ ಹಿರಿಯ ನಾಗರಿಕರ ವಿಶೇಷ ಗುರುತಿನ ಚೀಟಿಯನ್ನು ಈಗ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಬದಲಾಗಿ ಸರ್ಕಾರ ದಿಂದ ನೀಡಲಾಗಿರುವ ಯಾವುದಾದರೂ ಗುರುತಿನ ಚೀಟಿ ತೋರಿಸಿ ಫಲಾನುಭವಿಗಳು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಅದರಂತೆ 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಕೆಳಕಂಡ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ ತೋರಿಸಿ, ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯ್ತಿ ಪಡೆಯಬಹುದು. ಪಾಸ್‌ಪೋರ್ಟ್,ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್,ಚಾಲನಾ ಪರವಾನಗಿ (ಡ್ರೆ„ವಿಂಗ್ ಲೈಸೆನ್ಸ್), ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಗುರುತಿನ ಚೀಟಿ, ಸರ್ಕಾರದ ಯಾವುದೇ ಇಲಾಖೆಯಿಂದ ಅಥವಾ ಸಾರ್ವಜನಿಕ ವಲಯದ ಘಟಕ/ ಸಂಸ್ಥೆ
(ಪಿಎಸ್‌ಯು)ಯಿಂದ ವಿತರಿಸಿರುವ ಹುಟ್ಟಿದ ದಿನಾಂಕ, ವರ್ಷ ನಮೂದಿಸಿರುವ ಗುರುತಿನ ಚೀಟಿ,ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಭಾವಚಿತ್ರವಿ ರುವ ಗುರುತಿನ ಚೀಟಿ(60 ವರ್ಷ ಮೇಲ್ಪಟ್ಟ), ನಿಗಮದವತಿಯಿಂದ ವಿತರಿಸಿರುವ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ತೋರಿಸಿ ಈ ಸೌಲಭ್ಯ ಪಡೆಯಬಹುದು ಎಂದು ಕೆಎಸ್ ಆರ್‌ಟಿಸಿ ಪ್ರಕಟಣೆ ತಿಳಿಸಿದೆ.
ಹಿರಿಯ ನಾಗರಿಕರಿಗಾಗಿ ನಿಗಮವು ನಗರ, ಹೊರ ವಲಯ, ಸಾಮಾನ್ಯ, ವೇಗದೂತ,ಅರೆ ಸುವಿಹಾರಿ ಮತ್ತು ರಾಜಹಂಸ ಬಸ್ಸುಗಳಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನ ಕರ್ನಾಟಕ ರಾಜ್ಯದ ಹಿರಿಯ ನಾಗರಿಕರಿಗೆ ಟಿಕೆಟ್ ಪ್ರಯಾಣ ದರದಲ್ಲಿ ಶೇ.25ರಷ್ಟು ರಿಯಾಯಿತಿ ಸೌಲಭ್ಯ ಒದಗಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.