ಹಿರಿಯ ಕೆಂಪೇಗೌಡರ ರಾಜಧಾನಿ ಬೆಂಗುಳೂರು
Team Udayavani, Jun 27, 2017, 3:47 PM IST
ಆವತಿಯಿಂದ ಯಲಹಂಕಕ್ಕೆ ಈ ವಂಶದ ಜಯಗೌಡ 1418ರಲ್ಲಿ ಕಾರ್ಯಕೇಂದ್ರವನ್ನು ಬದಲಿಸುತ್ತಾನೆ. ನಂತರ ಜಯಗೌಡನ ಮೊಮ್ಮಗ ಹಿರಿಯ ಕೆಂಪೇಗೌಡ ಅಥವ ಒಂದನೆ ಕೆಂಪೇಗೌಡ ರಾಜಧಾನಿಯನ್ನು ಬೆಂಗುಳೂರು ವರ್ಗಾಯಿಸುತ್ತಾನೆ. ಅದು ಇಂದಿನ ಬೆಂಗಳೂರು. ಈ ವಂಶದಲ್ಲಿ ಬಹುಜನರ ಹೆಸರು ಕೆಂಪೇಗೌಡ ಎಂದಿರುವುದರಿಂದ ಬೆಂಗಳೂರು ನಗರದ ನಿರ್ಮಾಪಕ ಕೆಂಪೇಗೌಡರನ್ನು ಒಂದನೆ ಕೆಂಪೇಗೌಡ ಎಂದು ಕರೆಯಲಾಗುತ್ತದೆ.
ಕೆಂಪೇಗೌಡರು ರಾಜ್ಯಭಾರವನ್ನು ವಹಿಸಿಕೊಂಡ ನಂತರ ಯಲಹಂಕ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ತಮ್ಮ ಕನಸಿನ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದು ಪ್ರಜಾಪ್ರೀತಿಯನ್ನು ಗಳಿಸುತ್ತಾರೆ. ಇವರ ಕೀರ್ತಿಯನ್ನು ಸಹಿಸದ ಸುತ್ತಮುತ್ತಲಿನ ಪಾಳೆಯಗಾರರು ಕೆಂಪೇಗೌಡರನ್ನು ಬಗ್ಗುಬಡೆದು ಯಲಹಂಕ ನಾಡನ್ನು ಕಬಳಿಸಲು ಯತ್ನಿಸುತ್ತಾರೆ. ಆದರೆ ಪರಾಕ್ರಮಿ ಕೆಂಪೇಗೌಡರು ತಮ್ಮ ಸುತ್ತಲಿನ ಶಿರಾ, ಸೋಲೂರು, ಚೆನ್ನಪಟ್ಟಣ, ಹೊಳುವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರದ ಪಾಳೇಗಾರರು ತಮ್ಮ ವಿರುದ್ಧ ಸೊಲ್ಲೆತ್ತದಂತೆ ಮಾಡುತ್ತಾರೆ.
ಕ್ರಿ.ಶ. 1550ರಲ್ಲಿ ಬೆಂಗಳೂರಿನಿಂದ ಸುಮಾರು 30 ಮೈಲಿಗಳಷ್ಟು ದೂರದಲ್ಲಿರುವ ಶಿವಗಂಗೆಯನ್ನೂ ಸಹ ಸ್ವಾಧೀನ ಪಡಿಸಿಕೊಳ್ಳುತ್ತಾರೆ. ಅಲ್ಲಿ ಅವರು ಬಹುಸಂಖ್ಯೆಯ ದೇವಾಲಯ, ಗೋಪುರ ಮತ್ತು ಸತ್ರಗಳನ್ನು ಕಟ್ಟಿಸುತ್ತಾರೆ. ಯಾತ್ರಾರ್ಥಿಗಳು ಬೆಟ್ಟದ ತುದಿಗೆ ಹತ್ತಲು ಸುಲಭವಾಗುವಂತೆ ಕಡಿದಾದ ಕಲ್ಲಿನ ಬಂಡೆಗಳ ಮೇಲೆ ಮೆಟ್ಟಿಲುಗಳನ್ನು ಕಡೆಸುತ್ತಾರೆ. ಸಭಾಮಂಟಪವೊಂದನ್ನು ಕಟ್ಟಿಸಿ ಅಲ್ಲಿ ತಮ್ಮ ಪ್ರತಿಮೆಯನ್ನು ಸ್ಥಾಪಿಸುತ್ತಾರೆ.
ನಾಡಿನ ಆಯಕಟ್ಟಿನ ಸ್ಥಳಗಳನ್ನು ಭದ್ರಪಡಿಸುತ್ತಾರೆ. ರಾಮಗಿರಿ, ಉತ್ತರಿ ದುರ್ಗ ಮತ್ತು ಶಿವಗಂಗೆಗಳ ಮೇಲೆ ಕೋಟೆಗಳನ್ನು ಕಟ್ಟಿಸಿ ನಾಡಿನ ಭದ್ರತೆಗೆ ಸಕಲ ವ್ಯವಸ್ಥೆಗಳನ್ನು ಮಾಡಿ ಸೈನ್ಯವನ್ನು ಬಲಪಡಿಸುತ್ತಾರೆ. ಈಗಲೂ ಉತ್ತರಿ ದುರ್ಗದಲ್ಲಿ ಮದ್ದು ಗುಂಡುಗಳನ್ನು ಶೇಖರಿಸಿ ಇಡುತ್ತಿದ್ದ ಕೋಣೆ ಮತ್ತು ಸೈನಿಕರು ಬಳಸುತ್ತಿದ್ದ ಬೀಸುವ ಕಲ್ಲುಗಳನ್ನು ಕಾಣಬಹುದು. ಇವರ ಸೈನ್ಯದಲ್ಲಿದ್ದವರಿಗೆ ವ್ಯವಸಾಯವು ಬಹಳ ಚೆನ್ನಾಗಿ ಗೊತ್ತಿತ್ತು. ಹೋರಾಟಗಳಿಲ್ಲದ ಕಾಲದಲ್ಲಿ ಇವರು ವ್ಯವಸಾಯದತ್ತ ಕಡೆ ಗಮನವೀಯುತ್ತಿದ್ದದ್ದು ವಿಶೇಷ.
ಕಸುಬಿನ ಆಧಾರದಲ್ಲಿ ಪೇಟೆಗಳು: ಕೆಂಪೇಗೌಡರು ನೆರೆಹೊರೆಯ ರಾಜ್ಯ ಗಳಿಂದ, ನಗರಗಳಿಂದ ಮತ್ತು ಗ್ರಾಮಗಳಿಂದ ವಿವಿಧ ವೃತ್ತಿಗಳ ಕುಶಲಕರ್ಮಿಗಳನ್ನು ತಮ್ಮ ನವನಗರಕ್ಕೆ ಆಹ್ವಾನಿಸುತ್ತಾರೆ. ಅವರ ಕಸುಬಿನ ಹೆಸರಿನಲ್ಲೆ ಹಲವು ಪೇಟೆಗಳನ್ನು ನಿರ್ಮಿಸುತ್ತಾರೆ. ನಗರವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ವರ್ತಕರು, ಕುಶಲಕರ್ಮಿಗಳು ಮತ್ತು ವಿವಿಧ ಜಾತಿಕುಲದವರನ್ನು ಅಲ್ಲಿ ನೆಲೆಸುವಂತೆ ಮಾಡುತ್ತಾರೆ.
ವರ್ತಕರಿಗೆ ಅವರು ಮಾರಾಟ ಮಾಡುವ ಸರಕಿನ ಆಧಾರದ ಮೇಲೆ ಅಕ್ಕಿಪೇಟೆ, ರಾಗಿಪೇಟೆ, ಬಳೆಪೇಟೆ, ಅರಳೇಪೇಟೆ, ನಗರ್ತಪೇಟೆ, ಕುಂಬಾರ ಪೇಟೆ, ಉಪ್ಪಾರಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಸುಣಕಲ್ ಪೇಟೆ ಹೀಗೆ ಹಲವು ಪೇಟೆಗಳನ್ನು ನಿರ್ಮಿಸಿ ಅನುಕೂಲ ಮಾಡಿಕೊಡುತ್ತಾರೆ. ಈ ಹೆಸರಿನ ಪೇಟೆಗಳು ಹಳೆ ಬೆಂಗಳೂರು ಭಾಗದಲ್ಲಿ ಈಗಲೂ ಹಾಗೆ ಉಳಿದಿವೆ. ವೃತ್ತಿಯ ಹೆಸರಿನ ಹಲವು ಪೇಟೆಗಳು ಮತ್ತು ಜಾತಿಯ ಹೆಸರಿನ ಹಲವು ಪೇಟೆಗಳು ಇಲ್ಲಿದ್ದವು. ಆ ಕಾಲದಲ್ಲಿಯೇ ಎಲ್ಲರಿಗೂ ನಗರದಲ್ಲಿ ಸಮಾನ ಸ್ಥಾನವನ್ನು ಕಲ್ಪಿಸಿ ಜಾತ್ಯಾತೀತ ಸಮಾಜಕ್ಕೆ ನಾಂದಿ ಹಾಡಿದರು ಕೆಂಪೇಗೌಡರು.
ಸಮೃದ್ಧ ವ್ಯಾಪಾರಿ ಕೇಂದ್ರ: ಬೆಂಗಳೂರನ್ನು ಒಂದು ಸಮƒದ್ಧ ವ್ಯಾಪಾರಿ ಕೇಂದ್ರವನ್ನಾಗಿ ಮಾಡುತ್ತಾರೆ. ಬೆಂಗಳೂರು ಅತಿ ಶೀಘ್ರದಲ್ಲಿಯೇ ದಕ್ಷಿಣ ಭಾರತದ ಅತಿ ದೊಡ್ಡ ವ್ಯಾಪಾರ ಕೇಂದ್ರವಾಗಿ ಬೆಳೆಯ ತೊಡಗುತ್ತದೆ. ಬೆಂಗಳೂರು ಒಂದನೆಯ ಕೆಂಪೇಗೌಡರ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿ ಹೆಸರು ಗಳಿಸಿದ್ದ ಉಲ್ಲೇಖಗಳು ಇವೆ.
ಬೆಂಗಳೂರು ನಗರದ ಅಭಿವೃದ್ಧಿಯ ಜೊತೆಗೆ ಕೆಂಪೇಗೌಡರು ಯಲಹಂಕ, ಬೆಂಗಳೂರು, ಮಾಗಡಿ ಮುಂತಾದ ಪ್ರದೇಶಗಳಲ್ಲಿ ಕೃಷಿ ಭೂಮಿಯನ್ನು ಸಹ ಹೆಚ್ಚಿಸುತ್ತಾರೆ. ಇವರ ಕಾಲದಲ್ಲಿ ಬೆಂಗಳೂರಿನ ಸುತ್ತಮುತ್ತ ಹೊಲ ಗದ್ದೆ, ಹಣ್ಣಿನ ತೋಟ, ಹೂದೋಟ ಹಾಗೂ ತರಕಾರಿಗಳ ವ್ಯವಸಾಯ ಹೆಚ್ಚಿತು. ತೋಟಗಾರರಿಗೆ ಇವರ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ವ್ಯವಸಾಯಗಾರರಲ್ಲಿ ತಿಗಳರು ಎಂಬ ಒಂದು ಪಂಗಡದವರು ಕೈತೋಟ ಮಾಡುವುದರಲ್ಲಿ ಬಹು ನಿಪುಣರಾಗಿದ್ದರು.
ಪ್ರಭುಗಳು ಇವರಿಗೆ ಪ್ರತ್ಯೇಕ ಜಾಗ ವನ್ನು ಬಿಟ್ಟುಕೊಟ್ಟಿದ್ದರು. ಅದು ಇಂದು ತಿಗಳರಪೇಟೆ ಯೆಂದೇ ಹೆಸರಾಯಿತು. ಇವರು ಪಾಂಡವರ ಆರಾಧ ಕರು. ಇವರಿಗೆಂದೆ ಬೆಂಗಳೂರಿನಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನ ನಿರ್ಮಾಣಗೊಂಡು ಕರಗದ ಆಚರಣೆ ಪ್ರಾರಂಭವಾಯಿತು. ಅಂದು ಪ್ರಾರಂಭವಾದ ಕರಗ ಉತ್ಸವ ಇಂದೂ ಸಹ ತಪ್ಪದೇ ನಡೆಯುತ್ತಿದೆ. ಬೆಂಗಳೂರು ನಗರ ವ್ಯವಸ್ಥಿತವಾಗಿ ನಿರ್ಮಾಣಗೊಂಡು ವ್ಯಾಪಾರ ವಹಿವಾಟು ಹೆಚ್ಚಾದ ಮೇಲೆ ಕೆಂಪೇಗೌಡರು ಜನಪ್ರಸಿದ್ಧಿಯನ್ನು ಪಡೆದುಕೊಂಡಂತೆಲ್ಲ ಅವರ ಸುತ್ತಲೂ ಶತ್ರುಗಳು ಹೆಚ್ಚಿಕೊಳ್ಳುತ್ತಾರೆ.
ಹೇಗಾದರೂ ಮಾಡಿ ಕೆಂಪೇಗೌಡರನ್ನು ಮಣಿಸಬೇಕೆಂದು ಸಂಚು ಹೂಡುತ್ತಲೇ ಇರುತ್ತಾರೆ. ಆದರೆ ಕೆಂಪೇಗೌಡರು ಬಲಿಷ್ಟನಾಗಿ ಬೆಳೆಯ ತೊಡಗುತ್ತಾರೆ. ಮೊದಲು ಶಿವಗಂಗೆಯನ್ನು ಸ್ವಾಧೀನ ಪಡಿಸಿಕೊಳ್ಳು ತ್ತಾರೆ. ನಂತರ ಚೋಳರಾಳ್ವಿಕೆಯ ಪ್ರಧಾನ ನೆಲೆಯಾ ಗಿದ್ದ ದೊಮ್ಮಲೂರು, ಹಲಸೂರು, ಹೆಸರ ಘಟ್ಟಗಳನ್ನು ವಶಮಾಡಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.