ಸೇವೆ ಆರಂಭಿಸದ ಮೊಬೈಲ್ ಕ್ಯಾಂಟೀನ್
Team Udayavani, Feb 6, 2018, 11:40 AM IST
ಬೆಂಗಳೂರು: ಸಂಚಾರಿ ಇಂದಿರಾ ಕ್ಯಾಂಟೀನ್ ವಾಹನಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿ ಹತ್ತು ದಿನಗಳು ಕಳೆದಿದೆ.
ಆದರೆ, ಈವರೆಗೆ ಮೊಬೈಲ್ ಕ್ಯಾಂಟೀನ್‌ಗಳು ಸೇವೆ ಆರಂಭಿಸಿಲ್ಲ.
ಇಂದಿರಾ ಕ್ಯಾಂಟೀನ್‌ಗಳಿಗೆ ಸ್ಥಳಾವಕಾಶ ದೊರೆಯದ ವಾರ್ಡ್‌ಗಳಲ್ಲಿನ ಜನರಿಗೆ ಮೊಬೈಲ್ ಕ್ಯಾಂಟೀನ್‌ಗಳ ಮೂಲಕ ಆಹಾರ ಪೂರೈಕೆ ಮಾಡಲು ಬಿಬಿಎಂಪಿ ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳನ್ನು ಪರಿಚಯಿಸಿದೆ.
ಅದರಂತೆ ಜ.26ರಂದು ಮುಖ್ಯಮಂತ್ರಿಗಳು 18 ಸಂಚಾರಿ ಇಂದಿರಾ ಕ್ಯಾಂಟೀನ್‌ಗಳಿಗೆ ಚಾಲನೆ ನೀಡಿದ್ದರು. ಫೆಬ್ರವರಿ 1ರಿಂದ 24 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳ ಮೂಲಕ ಬಡವರಿಗೆ ಆಹಾರ ಪೂರೈಸುವುದಾಗಿ ಅಧಿಕಾರಿ ಗಳು ತಿಳಿಸಿದರೂ ಈವರೆಗೆ ಸೇವೆ ಆರಂಭಿಸಿಲ್ಲ. ಬಿಬಿಎಂಪಿಯಿಂದ 174 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದ್ದು, ಕೇಂದ್ರ ಭಾಗದ 24 ವಾರ್ಡ್‌ಗಳಲ್ಲಿ ಕ್ಯಾಂಟೀನ್ ಗೆ ಅಗತ್ಯ ವಿಸ್ತೀರ್ಣದ ಸರ್ಕಾರಿ ಜಾಗ ಸಿಕ್ಕಿಲ್ಲ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು “ಮೊಬೈಲ್ ಇಂದಿರಾ ಕ್ಯಾಂಟೀನ್’ಗಳ ಮೂಲಕ ಊಟ ವಿತರಿಸಲು ಪಾಲಿಕೆಯ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಪಾಲಿಕೆಯ 24 ವಾರ್ಡ್‌ಗಳಲ್ಲಿ 24 ಸಂಚಾರಿ ಇಂದಿರಾ ಕ್ಯಾಂಟೀನ್‌ಗಳು ಆಹಾರ ಪೂರೈಸಲು ಸಿದ್ಧವಾಗಿವೆ. ಆದರೆ, ಪಾಲಿಕೆಯ ಅಧಿಕಾರಿಗಳು 24 ವಾರ್ಡ್‌ಗಳಲ್ಲಿ ಆಹಾರ ವಿತರಿಸುವ ಜಾಗವನ್ನು ಅಂತಿಮಗೊಳಿಲ್ಲ. ಜತೆಗೆ ವಾಹನಗಳು ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂಬುದನ್ನು ನಿಗದಿಪಡಿಸದ ಹಿನ್ನೆಲೆಯಲ್ಲಿ ಮೊಬೈಲ್ ಇಂದಿರಾ ಕ್ಯಾಂಟೀನ್ ಸೇವೆ ಆರಂಭಿಸಿಲ್ಲ ಎಂದು ಪಾಲಿಕೆಯ
ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ಮೊಬೈಲ್ ಇಂದಿರಾ ಕ್ಯಾಂಟೀನ್ ಆಹಾರ ವಿತರಿಸುವ ಜಾಗದಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಬೇಕಾಗುತ್ತದೆ. ಆದರೆ, ಪಾಲಿಕೆಯ ಸಹಾಯಕ ಎಂಜಿನಿಯರ್‌ಗಳು ಆಯಾ ವಾರ್ಡ್‌ಗಳಲ್ಲಿ ಸೂಕ್ತ ಜಾಗ ಗುರುತಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸಿಲ್ಲ. ಶೀಘ್ರದಲ್ಲಿಯೇ ಬೆಳಕಿನ ವ್ಯವಸ್ಥೆ ಪೂರ್ಣಗೊಳ್ಳಲಿದ್ದು, ಸಂಚಾರಿ ಕ್ಯಾಂಟೀನ್ ಗಳು ಸೇವೆ ಆರಂಭಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಸೇವೆ ಸ್ಥಳಗಳು
ಪಶ್ಚಿಮ ವಲಯ: ಕಾಡು ಮಲ್ಲೇಶ್ವರ, ಮೆಜೆಸ್ಟಿಕ್, ಓಕಳಿಪುರ, ದಯಾನಂದನಗರ, ಬಸವೇಶ್ವರನಗರ, ಚಾಮರಾ
ಜಪೇಟೆ, ಶ್ರೀರಾಮಮಂದಿರ ದಕ್ಷಿಣ ವಲಯ: ಶ್ರೀನಗರ, ಗಿರಿನಗರ, ಮಡಿವಾಳ, ಜಯನಗರ, ಜೆ.ಪಿ.ನಗರ, ಕೆಂಪಾಪುರ ಅಗ್ರಹಾರ,
ಬಾಪೂಜಿನಗರ, ಯಡಿಯೂರು ಪೂರ್ವ ವಲಯ: ಕಾಚರಕನಹಳ್ಳಿ, ಮೋರಾಯ ನಪಾಳ್ಯ, ಹಲಸೂರು ಬೊಮ್ಮನಹಳ್ಳಿ: ಯಲಚೇನಹಳ್ಳಿ ಮಹದೇವಪುರ: ಎಚ್‌ಎಎಲ್ ಏರ್‌ಪೋರ್ಟ್ ರಾಜರಾಜೇಶ್ವರಿನಗರ: ಲಕ್ಷ್ಮೀದೇವಿ ನಗರ, ಜ್ಞಾನಭಾರತಿ ನಗರ, ಲಗ್ಗೆರೆ
ಆಹಾರ ಶೇಖರಣೆ ಹಾಗೂ ಇತರ ಅಂಶಗಳಿಗೆ ಸಂಬಂಧಿಸಿದಂತೆ ಮೊಬೈಲ್ ಇಂದಿರಾ ಕ್ಯಾಂಟೀನ್ ವಾಹನಗಳಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾ ವಣೆಗಳನ್ನು ಮಾಡುತ್ತಿದ್ದೇವೆ. ಈಘ್ರವೇ ಈ ಕಾರ್ಯ ಮುಗಿಯಲಿದ್ದು, ಫೆ.10ರಿಂದ ಎಲ್ಲ 24 ವಾಹನಗಳು ಆಹಾರವಿತರಿಸುವ ಕಾರ್ಯ ಆರಂಭಿಸಲಿವೆ.
ಎನ್.ಮಂಜುನಾಥ ಪ್ರಸಾದ್, ಪಾಲಿಕೆ ಆಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.