ಯೋಧರ ಮತದಾನಕ್ಕಿದೆ ಸರ್ವಿಸ್ ಓಟರ್ ಸೌಲಭ್ಯ
Team Udayavani, Apr 13, 2018, 6:55 AM IST
ಬೆಂಗಳೂರು: ಗಡಿಯಲ್ಲಿದ್ದು ದೇಶ ಕಾಯುವ ಮತ್ತು ಗಡಿಯಾಚೆ ದೇಶ ಸೇವೆ ಮಾಡುವವರು ತಾವು ಇರುವ ಕಡೆಗಳಿಂದಲೇ ತಮ್ಮ ಅಭ್ಯರ್ಥಿಗೆ ಮತ ಚಲಾಯಿಸಬಹುದಾಗಿದೆ. ಇದಕ್ಕೆ ಚುನಾವಣಾ ಆಯೋಗ “ಸರ್ವಿಸ್ ಓಟರ್’ ಎಂಬ ಹೆಸರು ಕೊಟ್ಟಿದೆ.
ಕೇಂದ್ರ ಶಸಸ್ತ್ರ ಮೀಸಲು ಪಡೆ, ಸೇನಾ ಕಾಯ್ದೆ 1950ರ ಪ್ರಕಾರ ವಿವಿಧ ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ, ಬೇರೆ ರಾಜ್ಯಗಳ ಶಸಸ್ತ್ರ ಪೊಲೀಸ್ ಪಡೆಗಳಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ಕೇಂದ್ರ ಸರ್ಕಾರದ ಸೇವೆಯ ಮೇಲೆ ಹೊರದೇಶಗಳಲ್ಲಿ ನಿಯೋಜಿಸಲ್ಪಟ್ಟವರಿಗೆ ಈ “ಸರ್ವಿಸ್ ಓಟರ್’ ವ್ಯವಸ್ಥೆ ತರಲಾಗಿದೆ.
ಭಾರತೀಯ ಸೇನೆ,ನೌಕಾ ಸೇನೆ, ವಾಯು ಸೇನೆಯ ಸಿಬ್ಬಂದಿ ಮತ್ತು ಅಧಿಕಾರಿಗಳು. ಜನರಲ್ ಇಂಜಿನಿಯರ್ ರಿಸರ್ವ್
ಫೋರ್ಸ್, ಬಿಎಸ್‌ಎಫ್,ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್, ಅಸ್ಸಾಂ ರೈಫಲ್ಸ್, ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್, ಸಿಆರ್ ಪಿಎಫ್, ಸಿಐಎಸ್‌ಎಫ್ ಮತ್ತು ಸಶಸ್ತ್ರ ಸೀಮಾ ಬಲದಲ್ಲಿ ಸೇವೆ ಸಲ್ಲಿಸುತ್ತಿರುವವರು ಸರ್ವಿಸ್ ಓಟರ್ ಆಗಲು ಅರ್ಹತೆ ಪಡೆದುಕೊಂಡಿರುತ್ತಾರೆ. ಸೇನೆಯಲ್ಲಿ ಸೇವೆ ಸಲ್ಲಿಸುವವರು ಅರ್ಜಿ ನಮೂನೆ 2 ಮತ್ತು 2ಎ ಭರ್ತಿ ಮಾಡಬೇಕು ಹಾಗೂ ಬೇರೆ ದೇಶಗಳಲ್ಲಿ ಸೇವೆ ಸಲ್ಲಿಸುವವರು ಅರ್ಜಿ ನಮೂನೆ 3ರ ಭರ್ತಿ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಸಿಕೊಂಡಿರುತ್ತಾರೆ.
ನಾಮಪತ್ರ ಪರಿಶೀಲನೆ ಮುಗಿದು ಕಣದಲ್ಲಿರುವ ಅಭ್ಯರ್ಥಿಗಳು ಅಂತಿಮಗೊಂಡ ಬಳಿಕ ಆ ಅಭ್ಯರ್ಥಿಗಳ ಹೆಸರು, ಪಕ್ಷ, ಚಿನ್ಹೆ, ಭಾವಚಿತ್ರ ಹೊಂದಿರುವ ವಿಶೇಷ”ಎಲೆಕ್ಟ್ರಾನಿಕ್ ಬ್ಯಾಲೆಟ್’ಗಳನ್ನು ಆನ್‌ಲೈನ್ ಮೂಲಕ ಕಳಿಸಲಾಗುತ್ತದೆ. ಈ ಎಲೆಕ್ಟ್ರಾನಿಕ್ ಬ್ಯಾಲೆಟ್‌ಗಳು ಸಂಬಂಧಪಟ್ಟ ಸರ್ವಿಸ್ ಓಟರ್ ಮಾತ್ರ ಸ್ವೀಕರಿಸುವ, ಅದನ್ನು ಆನ್ ಲೈನ್‌ನಲ್ಲಿ ಓಪನ್ ಮಾಡುವ ವಿಶೇಷ ಸೆಕ್ಯೂರಿಟಿ ಕೋಡ್‌ಗಳನ್ನು ಹೊಂದಿರುತ್ತದೆ. ಎಲೆಕ್ಟ್ರಾನಿಕ್ ಬ್ಯಾಲೆಟ್‌ಗಳಲ್ಲಿ ತಮ್ಮ ಆಯ್ಕೆಗೆ ಗುರುತು ಹಾಕಿ ಅದನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ರೆಜಿಸ್ಟರ್ ಪೋಸ್ಟ್ ಮೂಲಕ ಕಳಿಸಬಹುದು. ಅಲ್ಲದೇ ತಾನು ಆಯ್ಕೆ ಮಾಡಿದ ಅಥವಾ ನೇಮಿಸಿದ ಪ್ರತಿನಿಧಿಯ (ಪ್ರಾಕ್ಸಿ) ಮೂಲಕವೂ ಮತ ಚಲಾಯಿಸುವ ಅವಕಾಶವೂ ಇರುತ್ತದೆ. 2018ರ ವಿಧಾನಸಭಾ ಚುನಾವಣೆಗೆ ನಮ್ಮ ರಾಜ್ಯದಲ್ಲಿ 27,461 ಪುರುಷರು ಮತ್ತು 447 ಮಹಿಳೆಯರು ಸೇರಿ ಒಟ್ಟು 27,908 ಸರ್ಮಿಸ್ ಓಟರ್ ನೋಂದಣಿ ಮಾಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.