ಗಾಂಜಾ, ಚರಸ್ ಮಾರುತ್ತಿದ್ದ ನೆರೆರಾಜ್ಯಗಳ ಏಳು ಮಂದಿ ಬಂಧನ
Team Udayavani, Nov 15, 2017, 11:36 AM IST
ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕ ವಸ್ತು ಚರಸ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ನೆರೆರಾಜ್ಯಗಳ ಏಳು ಮಂದಿಯನ್ನು ಆಗ್ನೇಯ ವಿಭಾಗದ ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ರಾಹುಲ್ ಕುಮಾರ್(24), ರಾಮ್‌ದೀನ್ ಜಾಧವ್(26), ಶ್ಯಾಮ್ ಕುಮಾರ್ ಯಾದವ್(21), ಉತ್ತರ ಪ್ರದೇಶದ ದಾನೇಶ್(23), ಶಬ್ಬು(23) ಹಾಗೂ ಕೇರಳ ಮೂಲದ ಮೊಹಮ್ಮದ್ ಅಶ್ರಫ್ (25), ರಾಜೇಶ್(24) ಬಂಧಿತರು. ಆರೋಪಿಗಳಿಂದ 22 ಕೆ.ಜಿ.ಗಾಂಜಾ ಹಾಗೂ 100 ಗ್ರಾಂ ಚರಸ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಹಾರ ಮತ್ತು ಉತ್ತರಪ್ರದೇಶ ಮೂಲದ ಆರೋಪಿಗಳು ಎಚ್‌ಎಸ್‌ಆರ್ ಲೇಔಟ್ ಮತ್ತು ಮಾರತ್‌ಹಳ್ಳಿ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಪೇಟಿಂಗ್, ಕಾರು ಚಾಲನೆ ಹಾಗೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇದರ ಜತೆಗೆ ರಾಹುಲ್ ಕುಮಾರ್ ಸಿಂಗಸಂದ್ರದ ದಿಲೀಪ್ ಎಂಬಾತನ ಮೂಲಕ ಬಿಹಾರದಿಂದ ರೈಲಿನಲ್ಲಿ ಗಾಂಜಾವನ್ನು ತರಿಸುತ್ತಿದ್ದ.
ನಂತರ ಇದನ್ನು 10, 50 ಮತ್ತು 100 ಗ್ರಾಂ ತೂಕದಲ್ಲಿ ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನು ಮಾಡಿ ಪರಿಚಯಸ್ಥರು, ತಮ್ಮ ರಾಜ್ಯದ ಬೀಡಾ ಸ್ಟಾಲ್‌ಗಳಲ್ಲಿ ಮಾರಾಟ ಮಾಡಿಸುತ್ತಿದ್ದರು. ಸ್ಟಾಲ್‌ಗಳಿಗೆ ಕಮಿಷನ್ ನೀಡುತ್ತಿದ್ದರು. ಜೊತೆಗೆ ವಿದ್ಯಾರ್ಥಿಗಳಿಗೂ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಮತ್ತೂಂದು ಪ್ರಕರಣದಲ್ಲಿ ಬಂಧಿತರಾಗಿರುವ ಕೇರಳದ ಕಣ್ಣೂರು ಮೂಲದ ಆರೋಪಿಗಳಾದ ಮೊಹಮ್ಮದ್ ಅಶ್ರಫ್ ಮತ್ತು ರಾಜೇಶ್ ಬಾಬುಸಾಬ್ ಪಾಳ್ಯದಲ್ಲಿ ನಲೆಸಿದ್ದು, ಕಾರು ಚಾಲನೆ ಹಾಗೂ ಇತರೆ ಕೆಲಸ ಮಾಡಿಕೊಂಡಿದ್ದಾರೆ. ಈ ಪೈಕಿ ರಾಜೇಶ್ ತನಗೆ ಪರಿಚಯವಿರುವ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ವ್ಯಕ್ತಿಯಿಂದ ಗಾಂಜಾ ಮತ್ತು ಚರಸ್ ಅನ್ನು ನಗರಕ್ಕೆ ತರಿಸುತ್ತಿದ್ದ.
ಬಳಿಕ ಅಶ್ರಪ್ ಮನೆಯಲ್ಲಿ ಸಣ್ಣ-ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ಕೇರಳ ಮೂಲದ ವಿದ್ಯಾರ್ಥಿಗಳು ಹಾಗೂ ಸಾಫ್ಟ್ವೇರ್ ಎಂಜಿನಿಯರ್‌ಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದರು. ಅಲ್ಲದೇ ಸಾರ್ವಜನಿಕವಾಗಿ ಪಾರ್ಕ್, ಬಸ್ ನಿಲ್ದಾಣ ಇತರೆಡೆ ಮಾದಕ ವಸ್ತು ವ್ಯಸನಿಗಳನ್ನು ಪತ್ತೆಹಚ್ಚಿ ಅವರಿಗೆ ಮಾರುತ್ತಿದ್ದರು.ಇತ್ತೀಚೆಗೆ ಆರೋಪಿಗಳು ಮೈಕೋ ಲೇಔಟ್‌ನ ಮಡಿವಾಳ ಕೆರೆಯ ಬಳಿ ಗಾಂಜಾ ಮಾರುತ್ತಿದ್ದಾಗ ಎಲ್ಲ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ ಎಂದು ಸುನೀಲ್ ಕುಮಾರ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಆಗ್ನೇಯ ವಿಭಾಗದ ಡಿಸಿಪಿ ಡಾ ಬೋರಲಿಂಗಯ್ಯ, ಮೈಕೋ ಲೇಔಟ್ ಉಪವಿಭಾಗದ ಎಸಿಪಿ ಕರಿಬಸವನಗೌಡ ಮತ್ತು ಮೈಕೋಲೇಔಟ್ ಠಾಣೆ ಪಿಐ ಅಜಯ್ ಇತರೆ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Cricket; ವೇಗಿ ಸಿದ್ದಾರ್ಥ್ ಕೌಲ್ ನಿವೃತ್ತಿ
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.