ಕೊಳಚೆ ನೀರಿನ ಸಂಸ್ಕರಣೆ ವ್ಯವಸ್ಥೆ 2020ಕ್ಕೆ ಸಿದ್ಧ
Team Udayavani, Mar 17, 2017, 11:56 AM IST
ವಿಧಾನಪರಿಷತ್: ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಕೊಳಚೆ ನೀರನ್ನು ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸುವ ವ್ಯವಸ್ಥೆ 2020ಕ್ಕೆ ರೂಪುಗೊಳ್ಳಲಿದೆ ಎಂದು ನಗರಾಭಿವೃದ್ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಾಮಚಂದ್ರಗೌಡರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಗರದಲ್ಲಿ 1,350 ದಶಲಕ್ಷ ಲೀ. ಕಾವೇರಿ ನೀರು ಹಾಗೂ ಕೊಳವೆ ಬಾವಿಗಳ 400 ದಶಲಕ್ಷ ಲೀಟರ್ ನೀರು ಸೇರಿ ನಿತ್ಯ 1,750 ದಶಲಕ್ಷ ಲೀಟರ್ ಬಳಕೆಯಾಗುತ್ತಿದೆ. ಇದರಲ್ಲಿ ಶೇ.20ರಷ್ಟು ನೀರು ಮಾತ್ರ ಬಳಕೆಯಾಗಿ ಉಳಿದಿದ್ದು ಕೊಳಚೆ ನೀರಾಗಿ ಚರಂಡಿ ಸೇರುತ್ತಿದೆ. ಇಷ್ಟೂ ನೀರಿನ ಸಂಸ್ಕರಣೆಗೆ ಪೂರಕ ವ್ಯವಸ್ಥೆ 2020ಕ್ಕೆ ಸಿದ್ಧವಾಗಲಿದೆ ಎಂದು ಹೇಳಿದರು.
ಪ್ರಸ್ತುತ 720 ದಶಲಕ್ಷ ಲೀಟರ್ ಕೊಳಚೆ ನೀರು ಸಂಸ್ಕರಣೆ ವ್ಯವಸ್ಥೆ ಇದೆ. ಜುಲೈಗೆ 150 ದಶಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥಯ ವ್ಯವಸ್ಥೆ ಆರಂಭವಾಗಲಿದ್ದು, 880 ದಶಲಕ್ಷ ಲೀಟರ್‌ಗೆ ಏರಿಕೆಯಾಗಲಿದೆ. ಹಾಗೆಯೇ 10 ಕಡೆ ಒಟ್ಟು 336 ದಶಲಕ್ಷ ಲೀಟರ್ ನೀರು ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ವರ್ಷಾಂತ್ಯಕ್ಕೆ 270 ದಶಲಕ್ಷ ಲೀಟರ್ ನೀರು ಸಂಸ್ಕರಣಾ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
2018ರ ವೇಳೆಗೆ ಶೇ.80ರಷ್ಟು ಕೊಳಚೆ ನೀರು ಸಂಸ್ಕರಣಾ ವ್ಯವಸ್ಥೆ ಸಿದ್ಧವಾಗಲಿದೆ. ಈಗಾಗಲೇ 440 ದಶಲಕ್ಷ ಲೀಟರ್ ಕೊಳಚೆ ನೀರು ಸಂಸ್ಕರಣಾ ವ್ಯವಸ್ಥೆಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಹಂತ ಹಂತವಾಗಿ ಸಂಸ್ಕರಣಾ ಘಟಕಗಳು ನಿರ್ಮಾಣವಾಗಲಿವೆ. ನಗರದಲ್ಲಿ ಕೊಳಚೆ ನೀರು ಸಂಸ್ಕರಿಸಿ ಹೊಸಕೋಟೆ, ಕೋಲಾರ, ಆನೇಕಲ್ ಇತರೆಡೆ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೂ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ರಾಮಚಂದ್ರಗೌಡ, “ನಗರದಲ್ಲಿ ಕೆರೆಗಳ ಅಭಿವೃದ್ಗೆ ಮೂರು ವರ್ಷಗಳಲ್ಲಿ ನೂರಾರು ಕೋಟಿ ರೂ. ವೆಚ್ಚ ಮಾಡಿದರೂ ಕೆರೆಗಳು ಸುಸ್ಥಿತಿಯಲ್ಲಿಲ್ಲ. ಹಣ ದುರುಪಯೋಗವಾಗಿರುವ ಶಂಕೆ ಮೂಡಿದೆ. ಬೆಳ್ಳಂದೂರು ಕೆರೆ, ವರ್ತೂರು ಕೆರೆಗಳಲ್ಲಿ ಬೆಂಕಿ, ನೊರೆ ಕಾಣಿಸಿಕೊಳ್ಳುತ್ತಿದ್ದು, ಇದರ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮವೇನು ಎಂದು ಪ್ರಶ್ನಿಸಿದರು.
ಬೆಳ್ಳಂದೂರು ಕೆರೆ ಸಮಸ್ಯೆ : ಇದಕ್ಕೆ ಉತ್ತರಿಸಿದ ಸಚಿವ ಜಾರ್ಜ್, ಬೆಳ್ಳಂದೂರು ಕೆರೆ ಅಭಿವೃದ್ಗೆ ತಜ್ಞರು ಎರಡು ಹಂತದ ಯೋಜನೆ ರೂಪಿಸಿದ್ದು, ಅದರಂತೆ ಮೊದಲ ಹಂತ ಯೋಜನೆಗೆ 15 ದಿನದಲ್ಲಿ ಟೆಂಡರ್ ಅಂತಿಮವಾಗಲಿದೆ ಎಂದು ತಿಳಿಸಿದರು. ಬೆಳ್ಳಂದೂರು ಕೆರೆಗೆ ಡಿಟರ್ಜೆಂಟ್ ಸೇರಿ ಇತರೆ ನೊರೆಕಾರಕ ಅಂಶಗಳು ಹರಿದು ಬರುವುದರಿಂದ ನೊರೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಈಗಾಗಲೇ ತಜ್ಞರು ಎರಡು ಹಂತದಲ್ಲಿ ಕೆರೆ ಅಭಿವೃದ್ಗೆ ಯೋಜನೆ ರೂಪಿಸಿದ್ದಾರೆ. ಮೊದಲಿಗೆ ಕಳೆ ಸಸಿ ತೆರವು ಹಾಗೂ ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು. ಮೊದಲ ಹಂತದ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 15 ದಿನದಲ್ಲಿ ಅಂತಿಮವಾಗಲಿದೆ. ಕೊಳಚೆ ನೀರನ್ನು ಜೌಗು ಪ್ರದೇಶದ ಮೂಲಕವೇ ಹರಿಸಿ ನೈಸರ್ಗಿಕವಾಗಿ ಸಂಸ್ಕರಿಸಲಾಗುವುದು ಎಂದು ತಿಳಿಸಿದರು.
ಕೆರೆಗೆ ಎರಡು ಕೋಡಿ ಸ್ಥಳವಿದ್ದು, ನೀರು ಎತ್ತರದ ಸ್ಥಳದಿಂದ ಧುಮುಕುವುದರಿಂದ ನೊರೆ ಹೆಚ್ಚಾಗುತ್ತಿದೆ. ಈಗಾಗಲೇ ಒಂದು ಕೋಡಿ ಬಳಿ ನೀರು ಇಳಿಜಾರಿನಲ್ಲಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೊಂದೆಡೆಯೂ ಸದ್ಯದಲ್ಲೇ ಇಳಿಜಾರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಪಿಂಕ್ ಪೊಲೀಸ್ ಪೆಟ್ರೋಲಿಂಗ್’ ವ್ಯವಸ್ಥೆ
ವಿಧಾನಪರಿಷತ್ತು: ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಕೇರಳ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ “ಪಿಂಕ್ ಪೊಲೀಸ್ ಪೆಟ್ರೋಲಿಂಗ್’ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ತಾರಾ ಅನುರಾಧ ಹಾಗೂ ಕಾಂಗ್ರೆಸ್‌ನ ಡಾ. ಜಯಮಾಲಾ ರಾಮಚಂದ್ರ ಅವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿರುವ ಅವರು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಪಿಂಕ್ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಈಗಾಗಲೇ ನಗರದಲ್ಲಿ ಸ್ಥಳಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ 51 ಪಿಂಕ್ ಹೊಯ್ಸಳ ಸೇವೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಪಿಂಕ್ ಹೊಯ್ಸಳ ವಾಹನದಲ್ಲಿ ಒಬ್ಬ ಮಹಿಳಾ ಪೊಲೀಸ್ ಅಕಾರಿ ಅಥವಾ ಸಿಬ್ಬಂದಿ ಸೇರಿ 3 ಜನ ಪೊಲೀಸ್ ಸಿಬ್ಬಂದಿಗಳಿರುತ್ತಾರೆ. ಮಹಿಳೆಯರು ಈ ಅನುಕೂಲ ಪಡೆದುಕೊಳ್ಳಲು ಸಹಾಯವಾಗುವಂತೆ ಪ್ರಚಾರ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.