ಹಗ್ಗಜಗ್ಗಾಟದ ಮಧ್ಯೆ ಇಂದಿನಿಂದ ಕ್ಯಾಬ್ ಶೇರಿಂಗ್ ನಿಷೇಧ
Team Udayavani, Feb 3, 2017, 11:38 AM IST
ಬೆಂಗಳೂರು: “ಶೇರಿಂಗ್’ ಮತ್ತು “ಪೂಲಿಂಗ್’ ಕಾರ್ಯಾಚರಣೆ ವಿಚಾರದಲ್ಲಿ ಸಾರಿಗೆ ಇಲಾಖೆ ಹಾಗೂ ಆ್ಯಪ್ ಆಧಾರಿತ ಓಲಾ-ಊಬರ್ ಸಂಸ್ಥೆಗಳ ನಡುವೆ ತಿಕ್ಕಾಟ ಮುಂದುವರಿದಿದೆ. ಒಂದು ಕಡೆ, ಶುಕ್ರವಾರದಿಂದ (ಫೆ.3) “ಶೇರ್ ಕ್ಯಾಬ್’ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ಸ್ಪಷ್ಟ ಸೂಚನೆ ನೀಡಿದ್ದರೆ, ಮತ್ತೂಂದು ಕಡೆ ನಮ್ಮದು ಕಾನೂನು ಪ್ರಕಾರ ಸೇವೆ ಎಂದು ಓಲಾ-ಊಬರ್ ಸಂಸ್ಥೆ ವಾದಿಸುತ್ತಿದೆ.
ಕೊಟ್ಟ ಮಾತಿನಂತೆ ಫೆ.3ರಿಂದ ಶೇರಿಂಗ್ ಮತ್ತು ಪೂಲಿಂಗ್ ಕಾರ್ಯಾಚರಣೆ ನಿಲ್ಲಿಸುವಂತೆ ಓಲಾ-ಊಬರ್‌ಗೆ ಗುರುವಾರ ಸಾರಿಗೆ ಆಯುಕ್ತರು ಸೂಚನೆ ಕೊಟ್ಟಿದ್ದಾರೆ. ಇದೇ ವೇಳೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಊಬರ್‌ನ ಪ್ರಧಾನ ವ್ಯವಸ್ಥಾಪಕ ಕ್ರಿಶ್ಚಿಯನ್ ಪ್ರೀಸ್, “ಶೇರ್ ಕ್ಯಾಬ್ ವ್ಯವಸ್ಥೆ ಕಾನೂನು ಬದ್ಧ. ಅದರ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಬೇಕು,” ಎಂದಿದ್ದಾರೆ.
ಈ ಸಂಬಂಧ ಸಾರಿಗೆ ಇಲಾಖೆ ಮೇಲೆ ಒತ್ತಡ ತರಲು ಜನಾಭಿಪ್ರಾಯ ಸಂಗ್ರಹಿಸಲು ಊಬರ್ ಸಂಸ್ಥೆ ಆನ್‌ಲೈನ್ ಪಿಟಿಷನ್ (ಅಭಿಯಾನ) ಸಹ ಆರಂಭಿಸಿದೆ
ಮಾತಿನಂತೆ ನಡೆಯದಿದ್ದರೆ ಕ್ರಮ ಖಚಿತ ಶೇರಿಂಗ್ ಮತ್ತು ಪೂಲಿಂಗ್ ವ್ಯವಸ್ಥೆಗೆ ಸಾರಿಗೆ ನಿಯಮಗಳಲ್ಲಿ ಅವಕಾಶವಿಲ್ಲ. ಆದ್ದರಿಂದ ಈ ಸೇವೆಯನ್ನು ನಿಲ್ಲಿಸುವಂತೆ ಓಲಾ-ಊಬರ್‌ಗೆ ಸೂಚಿಸಲಾಗಿತ್ತು. 3 ದಿನಗಳಲ್ಲಿ ಸೇವೆ ನಿಲ್ಲಿಸುವುದಾಗಿ ಕಂಪೆನಿಗಳು ಒಪ್ಪಿಕೊಂಡಿತ್ತು.
ಅದರಂತೆ ಶುಕ್ರವಾರದಿಂದ ಸೇವೆ ನಿಲ್ಲಿಸಬೇಕು. ಇಲ್ಲಿದಿದ್ದರೆ ನಗರಾದ್ಯಂತ ಓಲಾ-ಊಬರ್ ವಾಹನಗಳ ತಪಾಸಣೆ ಆರಂಭಿಸಲಾಗುವುದು. ಅಗತ್ಯ ಬಿದ್ದಲ್ಲಿ ಅದಕ್ಕಾಗಿ ವಿಶೇಷ ತಂಡ ರಚಿಸಲಾಗುವುದು. ನಿಯಮಗಳನ್ನು ಉಲ್ಲಂ ಸಿ ಕಾರ್ಯಾಚರಿಸುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಜ್ಞಾನೇಂದ್ರಕುಮಾರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ನಮ್ಮ ಸೇವೆ ಕಾನೂನು ಬದ್ಧ: ಶೇರಿಂಗ್ ಹಾಗೂ ಪೂಲಿಂಗ್ ವ್ಯವಸ್ಥೆ ಕಾನೂನು ಬದ್ಧವಾಗಿದೆ ಎಂದು ಊಬರ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕ್ರಿಸಿcಯನ್ ಪ್ರೀಸ್ ಸಮರ್ಥಿಸಿಕೊಂಡಿದ್ದಾರೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ಚಾಲಕ ಒಂದೇ ಕಾಂಟ್ರ್ಯಾಕ್ಟ್‌ನಡಿ ಹಲವು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಲು ಅವಕಾಶವಿದೆ. ಪೂಲಿಂಗ್ ವ್ಯವಸ್ಥೆಯೂ ಇದೇ ಮಾದರಿಯಲ್ಲಿ ನಡೆಯುತ್ತಿದೆ.
ಹೀಗಾಗಿ ಇದು ರಹದಾರಿಯ ಉಲ್ಲಂಘನೆಯಾಗುವುದಿಲ್ಲ. ಅಲ್ಲದೇ ಶೇರಿಂಗ್ ಮತ್ತು ಪೂಲಿಂಗ್ ವ್ಯವಸ್ಥೆಯಿಂದ ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ 93.64 ಲಕ್ಷ ಕಿ.ಮೀ ಅನಗತ್ಯ ಚಾಲನೆಯನ್ನು ತಡೆಯಲಾಗಿದೆ. 4.40 ಲಕ್ಷ ಇಂಧನ ಉಳಿತಾಯ ಮಾಡಲಾಗಿದೆ. 10.37 ಲಕ್ಷ ಕೆ.ಜಿ. ಕಾರ್ಬನ್ ಡೈಆಕ್ಸೆ„ಡ್‌ನ ಉತ್ಪಾದನೆ ಕಡಿಮೆ ಆಗಿದೆ. ಜನರಲ್ಲಿ ಶೇರಿಂಗ್ ಮತ್ತು ಪೂಲಿಂಗ್ ವ್ಯವಸ್ಥೆಯ ಬೇಡಿಕೆ ಇದೆ. ಹಾಗಾಗಿ ಸಾರಿಗೆ ಆಯುಕ್ತರಿಗೆ ಈ ಬಗ್ಗೆ ಮತ್ತೂಮ್ಮೆ ಮನವರಿಕೆ ಮಾಡಿಕೊಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.