ಶಾಸ್ತ್ರಕ್ಕೆ ಪ್ರಜ್ಞೆ, ಕಾವ್ಯಕ್ಕೆ ಪ್ರತಿಭೆ ಅಗತ್ಯ
Team Udayavani, Aug 21, 2019, 3:02 AM IST
ಬೆಂಗಳೂರು: ಶಾಸ್ತ್ರಕ್ಕೆ ಪ್ರಜ್ಞೆ ಮುಖ್ಯವಾದರೆ ಕಾವ್ಯಕ್ಕೆ ಪ್ರತಿಭೆ ಅಗತ್ಯ. ಗದ್ಯ ಮತ್ತು ಕಾವ್ಯ ಪ್ರಕಾರಗಳೆರಡೂ ಕಾವ್ಯವೇ. ವೇದ ಶಬ್ಧ ಪ್ರಧಾನವಾದರೆ ಕಾವ್ಯ ಅರ್ಥ ಪ್ರಧಾನ ಎಂದು ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ತಿಳಿಸಿದರು.
ನಗರದ ಬಿಎಂಶ್ರೀ ಕಲಾ ಭವನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಕನ್ನಡ ಸಂಘಗಳ ಸಮನ್ವಯ ಸಮಿತಿಯ ‘ಸಾಹಿತ್ಯ ದಾಸೋಹ’ ವೇದಿಕೆ ಎರಡು ದಶಕ ಪೂರೈಸಿದ ವೇಳೆ ಸಾಹಿತ್ಯ ದಾಸೋಹ ಮತ್ತು ಸಮನ್ವಯ ಸಮಿತಿ ಕನ್ನಡವೇ ಸತ್ಯ ವೇದಿಕೆಯ ಬರಹಗಾರರ ಸಂಕಲನ “ಸಾಹಿತ್ಯ ಸಿರಿ’ಯನ್ನು ಕೊಡ್ಲೆಕೆರೆ ಬಿಡುಗಡೆ ಮಾಡಿದರು. ವೇದಿಕೆಯು ನಡೆಸುತ್ತಿರುವ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮನ್ವಯ ಸಮಿತಿಯ ಸಂಚಾಲಕ ಬೆಂ.ಶ್ರೀ. ರವೀಂದ್ರ ಮಾತನಾಡಿ 20 ವರ್ಷಗಳ ಹಿಂದೆ ಕೆಲವು ಸಾಹಿತ್ಯಾಸಕ್ತ ಗೆಳೆಯರು ಪ್ರತಿ ತಿಂಗಳೂ ಒಂದೆಡೆ ಸೇರಿ ಸ್ವರಚಿತ ಬರಹಗಳ ಮಂಡನೆಯೊಂದಿಗೆ ಆರಂಭಿಸಿದ “ಸಾಹಿತ್ಯ ದಾಸೋಹ’ ಇಂದು ದೊಡ್ಡ ಬರಹಗಾರರ ಪಡೆಯನ್ನೇ ಸೃಷ್ಟಿಸಿದೆ ಎಂದರು.
ದಾಸೋಹಿಗಳೂ, ಲೇಖಕರುಗಳೂ ಆದ ಸಮ್ಮೊದ ವಾಡಪ್ಪಿ, ರತ್ನಾ ಮೂರ್ತಿ, ಡಾ. ಗೋವಿಂದ ಹೆಗ್ಡೆ, ಬಿ.ಎಸ್. ಚಂದ್ರಶೇಖರ್, ಕೆ.ಎನ್. ಮಹಾಬಲ ಮತ್ತು “ಸಾಹಿತ್ಯ ಸಿರಿ’ಯ ಸಂಪಾದಕ ಹು.ವಾ. ಶ್ರೀಪ್ರಕಾಶ್ ಮಾತನಾಡಿ ಶಿಸ್ತು ನಿಷ್ಠ ದಾಸೋಹ ವೇದಿಕೆಯೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೆ.ಎಸ್.ಆರ್.ಮೂರ್ತಿ, ರವಿ ಕುಸುಬಿ, ಡಾ. ಶುಭಶ್ರೀ ಪ್ರಸಾದ್ ಇತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.