ಕಮ್ಮನಹಳ್ಳಿ ಸಂತ್ರಸ್ತೆ ಈಶಾನ್ಯದವಳು
Team Udayavani, Jan 5, 2017, 11:44 AM IST
ಬೆಂಗಳೂರು: ಕಮ್ಮನಹಳ್ಳಿಯಲ್ಲಿ ಪುಂಡರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ಮೂಲತಃ ಈಶಾನ್ಯ ಭಾರತೀಯಳಾಗಿದ್ದು ಪೂರ್ವ ವಿಭಾಗದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಯುವತಿ ತಮ್ಮ ಕಾಲೇಜು ಹತ್ತಿರದ ಕಮ್ಮನಹಳ್ಳಿಯಲ್ಲಿ ಸ್ನೇಹಿತೆಯರ ಜತೆಗೂಡಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಳೆ. ಘಟನೆ ಬಳಿಕ ಆಕೆ ಆತಂಕಕ್ಕೆ ಒಳಗಾಗಿದ್ದಾಳೆ.
ತನ್ನ ಮೇಲೆ ದೌರ್ಜನ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಪೊಲೀಸರ ತನಿಖೆಗೆ ಸಹಕರಿಸಿದರೆ ಜೀವಭಯವಿರಬಹುದು ಎಂಬ ಕಾರಣಕ್ಕೆ ಆಕೆ ತನಿಖೆಗೂ ಅಸಹಕಾರ ವ್ಯಕ್ತಪಡಿಸುತ್ತಿದ್ದಾಳೆ. ಇನ್ನೂ ಎರಡು ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಿದೆ. ಹೀಗಿರುವಾಗ ಸ್ಥಳೀಯರ ವಿರೋಧ ಕಟ್ಟಿಕೊಂಡು ಜೀವಕ್ಕೆ ತೊಂದರೆಯಾದರೆ ಎಂಬ ಆತಂಕವನ್ನು ಯುವತಿಯ ಪೋಷಕರೂ ಪೊಲೀಸರ ಮುಂದೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತಂತೆ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಆದರೆ, ತನಿಖೆಗೆ ಬಲ ಬರಬೇಕಾದರೆ ಶೋಷಿತೆ ದೂರು ನೀಡಬೇಕಾಗುತ್ತದೆ. ಆದರೆ, ಘಟನೆ ಕುರಿತು ದೂರು ನೀಡಲು ಸಹ ಆಕೆ ನಿರಾಕರಿಸಿದ್ದಾರೆ. ಈ ಮಧ್ಯೆ ಹೆಣ್ಣೂರು ಠಾಣೆ ಇನ್ಸ್ ಪೆಕ್ಟರ್ ಮೂಲಕ ದೂರು ಪಡೆದು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ.
ಆದರೆ, ಆರೋಪಿಗಳು ಎಸಗಿರುವ ಕೃತ್ಯ ನ್ಯಾಯಾಲಯದಲ್ಲಿ ರುಜುವಾತಾಗಬೇಕಾದರೆ ಶೋಷಿತ ಯುವತಿಯ ಹೇಳಿಕೆ ಬಹುಮುಖ್ಯವಾಗಿದೆ. ಈ ಹಂತದಲ್ಲಿ ಆಕೆ ತನಿಖೆಗೆ ಪೂರಕವಾಗಿ ಸ್ಪಂದಿಸುತ್ತಿಲ್ಲವಾದ ಕಾರಣ ಆಘಾತದಿಂದ ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆಯಲು ನಿರ್ಧಾರಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಒಬ್ಬ ನೆರೆಮನೆಯವನು?: ಈ ಪ್ರಕರಣದಲ್ಲಿ ಸಂತ್ರಸ್ತೆ ಮನೆ ಸಮೀಪದ ನಿವಾಸಿಯೊಬ್ಬ ಪಾಲ್ಗೊಂಡಿದ್ದಾನೆ ಎನ್ನಲಾಗಿದೆ. ಘಟನೆ ನಡೆಯುವ ಮೊದಲಿನ ಅವಧಿಯ ಸಿಸಿಟೀವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ 8.30ರಿಂದಲೇ ಆ ರಸ್ತೆಯಲ್ಲಿ ಪುಂಡರ ಚಲನವಲನ ಪತ್ತೆಯಾಗಿದೆ. ಈ ಪೈಕಿ ಸಂತ್ರಸ್ತ ಯುವತಿಯ ಮನೆ ಹತ್ತಿರದ ಯುವಕನೊಬ್ಬ ಆ ದುಷ್ಕರ್ಮಿಗಳ ಜತೆ ಕಾಣಿಸಿಕೊಂಡಿದ್ದಾನೆ. ಈ ಮಾಹಿತಿ ಗೊತ್ತಾದ ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಉಳಿದವರ ಸುಳಿವು ಸಿಕ್ಕಿತು ಎಂದು ಮೂಲಗಳು ಹೇಳಿವೆ.
ಠಾಣೆಗೆ ತಾರಾ, ಶ್ರುತಿ ಭೇಟಿ: ಯುವತಿ ಮೇಲಿನ ದೌರ್ಜನ್ಯ ವಿಚಾರ ತಿಳಿದ ಕೂಡಲೇ ವಿಧಾನಪರಿಷತ್ ಸದಸ್ಯೆ ಚಿತ್ರ ನಟಿ ತಾರಾ ನೇತೃತ್ವದಲ್ಲಿ ವಿಧಾನಪರಿಷತ್ ಸದಸ್ಯೆ ಜಯಮ್ಮ ಬಲರಾಜ್, ವೀಣಾ ಅಚ್ಚಯ್ಯ ಹಾಗೂ ಶಾಸಕಿ ವಿನೀಶಾ ನಿರೋ ಅವರು ಬಾಣಸವಾಡಿ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಇದಾದ ನಂತರ ಚಲನಚಿತ್ರ ನಟಿ, ಬಿಜೆಪಿ ನಾಯಕಿ ಶ್ರುತಿ ಅವರು ಠಾಣೆಗೆ ತೆರಳಿ ಪೊಲೀಸರಿಂದ ಮಾಹಿತಿ ಸಂಗ್ರಹಿಸಿದರು.
ಆಯುಕ್ತರ ಮೊಕ್ಕಾಂ: ಈ ಪ್ರಕರಣದ ತನಿಖಾ ಸಾರಥ್ಯ ಹೊತ್ತಿರುವ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಬುಧವಾರ ದಿನವೀಡಿ ಬಾಣಸವಾಡಿ ಠಾಣೆಯಲ್ಲಿ ಬೀಡು ಬಿಟ್ಟು ಶಂಕಿತ ಆರೋಪಿಗಳ ಖುದ್ದು ವಿಚಾರಣೆ ನಡೆಸಿದರು. ಅಲ್ಲದೆ, ಡಿಸಿಪಿಗಳಾದ ಡಾ.ಪಿ.ಎಸ್. ಹರ್ಷ ಹಾಗೂ ಅಜಯ್ ಹಿಲೋರಿ ಸಹ ಉಪಸ್ಥಿತರಿದ್ದರು.
ಪೋಷಕರ ಪ್ರತಿಭಟನೆ: ಪೊಲೀಸರು ವಶಕ್ಕೆ ಪಡೆಯಲಾಗಿರುವ ಯುವಕರ ಪೋಷಕರು ಬಾಣಸವಾಡಿ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಘಟನೆಯಲ್ಲಿ ನಮ್ಮ ಮಕ್ಕಳ ಪಾತ್ರ ಇಲ್ಲ. ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಇಂದು ಬಿಜೆಪಿ ಪ್ರತಿಭಟನೆ: ಗುರುವಾರ ಸಂಸದೆ ಶೋಭಾ ಕರೆಂದ್ಲಾಜೆ ನೇತೃತ್ವದಲ್ಲಿ ರಾಜ್ಯ ಮಹಿಳಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಮೌರ್ಯ ಹೋಟೆಲ್ ಜಂಕ್ಷನ್‌ನಲ್ಲಿ ನಡೆಯಲಿರುವ ಭಾರತಿ ಶೆಟ್ಟಿ, ಚಿತ್ರ ನಟಿ ಶ್ರುತಿ ಪಾಲ್ಗೊಳ್ಳಲಿದ್ದಾರೆ.
ಕಮ್ಮನಹಳ್ಳಿಯಲ್ಲಿ ನಡೆದಿರುವ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಸಂಬಂಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳ ಶೀಘ್ರದಲ್ಲೇ ಬಂಧಿಸುತ್ತೇವೆ. ನಗರದಲ್ಲಿ ಮಹಿಳೆಯರ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ಧವಾಗಿದೆ.
-ಪ್ರವೀಣ್ ಸೂದ್, ಪೊಲೀಸ್ ಆಯುಕ್ತ
ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದೇವೆ. ಈ ಕೃತ್ಯದ ಆರೋಪಿಗಳ ಸುಳಿವು ಪತ್ತೆಯಾಗಿದ್ದು, ಗುರುವಾರ ಪ್ರಕರಣದ ಸಂಪೂರ್ಣ ಚಿತ್ರಣ ತಿಳಿಯಲಿದೆ.
-ಹೇಮಂತ್ ನಿಂಬಾಳ್ಕರ್, ಹೆಚ್ಚುವರಿ ಪೊಲೀಸ್ ಆಯುಕ್ತ
ನನ್ನ ಮನೆ ಸನಿಹದಲ್ಲೇ ಯುವತಿ ಮೇಲೆ ನಡೆದಿರುವ ದೃಶ್ಯಾವಳಿ ನೋಡಿ ಆಘಾತವಾಯಿತು. ತಪ್ಪಿತ್ಥರ ವಿರುದ್ಧ ದೂರು ನೀಡಲು ಸಂತ್ರಸ್ತೆ ನಿರಾಕರಿಸಿದರು. ಆದರೆ, ಈ ಬಗ್ಗೆ ನಾನೇ ಕೆಲವರಿಗೆ ಮಾಹಿತಿ ನೀಡಿ ಪ್ರಕರಣ ಬಹಿರಂಗಗೊಳಿಸಿದೆ.
-ಫ್ರಾನ್ಸಿಸ್, ಸಂತ್ರಸ್ತ ಯುವತಿ ಮನೆ ಪಕ್ಕದ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.