ಶಿವರಾಮಕಾರಂತ ಬಡಾವಣೆ 300 ಕಟ್ಟಡ ಸಕ್ರಮ
Team Udayavani, Dec 3, 2021, 11:57 AM IST
ಬೆಂಗಳೂರು: ಡಾ.ಶಿವರಾಮಕಾರಂತ ಬಡಾವಣೆಯ 300ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಸಕ್ರಮಗೊಳಿಸಿ ಬಿಡಿಎಗೆ ಆದೇಶ ನೀಡಿದ್ದು ನಾಲ್ಕು ವಾರದ ಒಳಗೆ ಕಟ್ಟಡದ ಮಾಲೀಕರಿಗೆ ಸಕ್ರಮ ದೃಢೀಕರಣ ಪತ್ರ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಕ್ಕೆ ಸೂಚನೆ ನೀಡಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಎ.ವಿ.ಚಂದ್ರಶೇಖರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್‌ನ ಈ ತೀರ್ಪು ಸೂರಿಲ್ಲದವರಿಗೆ ಸೂರು ಕಲ್ಪಿಸಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು. ಸಕ್ರಮ ದೃಢೀಕರಣ ಪತ್ರವನ್ನು ಕಟ್ಟಡದ ಮಾಲೀಕರಿಗೆ ನೀಡುವ ಪ್ರಕ್ರಿಯೆ ಕೂಡ ಜಸ್ಟೀಸ್ ಚಂದ್ರಶೇಖರಯ್ಯ ಕಮಿಟಿಯ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ ಎಂದರು.
ಸಕ್ರಮ ದೃಢೀಕರಣ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 300 ಕಟ್ಟಡಗಳ ಮಾಲೀಕರಿಗೆ ಶುಕ್ರವಾರ ಬೆಳಗ್ಗೆಯೊ ಳಗೆ ಅವರು ನೀಡಿರುವಂತಹ ಮೊಬೈಲ್ ಸಂಖ್ಯೆಗೆ ಸಂದೇಶ ಕೂಡ ನೀಡ ಲಾಗು ವುದು. ಈ ಪ್ರಕರಣಗಲ್ಲಿ ಸುಪ್ರೀಂ ಕೋರ್ಟ್ ಆರ್ಟಿಕಲ್ 142ರ ಅಧಿಕಾರವನ್ನು ಸದು ಪಯೋಗ ಮಾಡಿಕೊಂಡಿದ್ದು ಇದರಿಂದಾಗಿ ಸೂರು ಇಲ್ಲದ ಬಡ ಮತ್ತು ಮಧ್ಯವ ವರ್ಗ ದವರಿಗೆ ಸೂರ ಕಲ್ಪಿಸಿದಂತಾಗಿದೆ. ಕೋರ್ಟ್ ಈ ತೀರ್ಪು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಇದು ಟ್ರೈಲರ್ ಅಷ್ಟೇ: ಡಾ.ಶಿವರಾಮ ಕಾರಂತ ಲೇಔಟ್ ಭೂಸ್ವಾಧೀನ ಅಧಿಸೂಚನೆ ಸಂಬಂಧ ಬಿಡಿಎಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.ಇಲ್ಲಿವರೆಗೆ 6,200 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ 5700 ಅರ್ಜಿಗಳು ಬಾಕಿ ಇವೆ.ಉಳಿದ ಅರ್ಜಿಗಳನ್ನು ಪರಿಶೀಲನೆ ಮಾಡುವ ಕೆಲಸ ನಡೆಯುತ್ತಿದೆ.ಈಗ ಆಗಿದ್ದು ಟ್ರೈಲರ್ ಅಷ್ಟೇ ಡಿ. 15ರ ಒಳಗೆ ಮತ್ತೂಂದು ವರದಿಯನ್ನು ನೀಡಲಾಗುತ್ತದೆ ಎಂದರು.
ಸಕ್ರಮ ಸಂಬಂಧ ಒಂದಿಷ್ಟು ಹಣನ್ನು ಬಿಡಿಎಗೆ ಮನೆ ಮಾಲೀಕರು ನೀಡಬೇಕಾಗು ತ್ತದೆ.ಅದನ್ನು ಬಿಡಿಎ ನಿರ್ಧರಿಸಲಿದೆ .2018 ಒಳಗೆ ಕಟ್ಟಡ ನಿರ್ಮಾಣ ಮಾಡಿಕೊಂಡವರಿಗೆ ಮಾತ್ರ ಈ ಆದೇಶ ಅನ್ವಯಿಸಲಿದೆ.ಉಳಿದವ ರಿಗೆ ಈ ತೀರ್ಪು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.