ಆಟೋ, ಟ್ಯಾಕ್ಸಿಗಳಲ್ಲಿ ಕಿರು ಕನ್ನಡ ಪುಸ್ತಕಗಳು

ನಿತ್ಯ ಒಂದು ಆಟೋದಲ್ಲಿ 15ರಿಂದ 20 ಟ್ರಿಪ್‌ ಗಳಲ್ಲಿ 30ರಿಂದ 40 ಜನ ಪ್ರಯಾಣಿಸುತ್ತಾರೆ.

Team Udayavani, May 5, 2022, 5:36 PM IST

ಆಟೋ, ಟ್ಯಾಕ್ಸಿಗಳಲ್ಲಿ ಕಿರು ಕನ್ನಡ ಪುಸ್ತಕಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಲವು ಆಟೋಗಳು ಪ್ರಯಾಣಿಕರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಕನ್ನಡ ಪುಸ್ತಕಗಳಿರುವ ಚೀಲಗಳನ್ನು ಹೊತ್ತು ಸಾಗುತ್ತಿವೆ. ಆಟೋಗಳಲ್ಲಿ ಸಂಚರಿಸುವ ಅಲ್ಪ ಸಮಯದಲ್ಲಿ ಓದಬಹುದಾದಂತಹ ಕವನ, ಗಾದೆ, ಒಗಟು, ಸಣ್ಣ ಕಥೆ, ನೀತಿ ಕಥೆಗಳ ಪುಸ್ತಕಗಳು, ಕನ್ನಡ ಕವಿಗಳ ಕಿರು ಪರಿಚಯದ ಪುಸ್ತಕಗಳ ಜತೆಗೆ ನಾಡಿನ ಐತಿಹಾಸಿಕ ಸ್ಥಳಗಳಾದ ಹಂಪಿ, ಬದಾಮಿ, ಐಹೊಳೆ, ನಾಡನ್ನು ಆಳಿದ ರಾಜ ವಂಶಸ್ಥರ ಮಾಹಿತಿ
ನೀಡುವ ಕಿರು ಪುಸ್ತಕಗಳು ಇಲ್ಲಿವೆ.

ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು ಈ ಪ್ರಯೋಗ ಮಾಡುತ್ತಿದ್ದು, ಕಳೆದ ನವೆಂಬರ್‌ನಲ್ಲಿ “ಕನ್ನಡ ಪುಸ್ತಗಳು ಗಾಲಿಗಳ ಮೇಲೆ’ ಎಂಬ ಅಭಿಯಾನ ಪ್ರಾರಂಭಿಸಿದೆ. ಸುಮಾರು ನಗರದ 300 ಆಟೋಗಳಲ್ಲಿ ಹಾಗೂ ಕೆಲವು ಟ್ಯಾಕ್ಸಿಗಳಲ್ಲಿ ಕನ್ನಡ ಪುಸ್ತಕಗಳನ್ನು ಇಡಲಾಗಿದೆ. ಹೊಸ ಲೇಖಕರ ಕವನಗಳನ್ನು ಓದಿದಾಗ, ಓದು ಗರಿಗೆ ಇಷ್ಟವಾದರೆ, ಪುಸ್ತಕವನ್ನು ಕೊಂಡು ಕೊಳ್ಳಬೇಕು ಎಂದೆನಿಸಿದಾಗ ಅದಕ್ಕೂ ಅವಕಾಶ ಕಲ್ಪಿಸಲಾಗಿದೆ. ಅಲ್ಲಿಯೇ ಸಂಸ್ಥೆ
ಯ ಸಂಪರ್ಕ ಸಂಖ್ಯೆಯನ್ನು ಹಾಕಲಾಗಿದ್ದು, ಅದರಿಂದ ಸಂಪರ್ಕಿಸಿದಾಗ ಮನೆಯನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಎಲ್ಲೆಲ್ಲಿ ಪುಸ್ತಕ ಲಭ್ಯ: ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣ, ದಂಡು ರೈಲ್ವೆ ನಿಲ್ದಾಣ, ಹೆಬ್ಟಾಳ ಫ್ಲೈ ಓವರ್‌ ಕೆಳಗಿನ ಆಟೋ ನಿಲ್ದಾಣ, ಮಲ್ಲೇಶ್ವರಂ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸುವ ಕೆಲವು ಆಟೋಗಳಲ್ಲಿ ಕನ್ನಡ ಪುಸ್ತಕಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ನಗರಾದ್ಯಂತ ಆಟೋ, ಟ್ಯಾಕ್ಸಿ, ಬಿಎಂಟಿಸಿ ಬಸ್‌, ರೈಲುಗಳಲ್ಲಿ ಕನ್ನಡ ಪುಸ್ತಕಗಳನ್ನು ಇರಿಸುವ ಯೋಜನೆ ಕೂಡ ಸಂಸ್ಥೆಗೆ ಇದೆ.

ನಿತ್ಯ ಒಂದು ಆಟೋದಲ್ಲಿ 15ರಿಂದ 20 ಟ್ರಿಪ್‌ ಗಳಲ್ಲಿ 30ರಿಂದ 40 ಜನ ಪ್ರಯಾಣಿಸುತ್ತಾರೆ. ಕೆಲವರು ಆಸಕ್ತಿಯಿಂದ ಪುಸ್ತಕ ತೆಗೆದು ಓದುತ್ತಾರೆ. ಅನ್ಯ ಭಾಷಿಕರು ಸಹ ಕನ್ನಡ ಕಲಿಯುವ ಆಸಕ್ತಿ ತೋರಿಸುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
●ಅನಿಲ್‌, ಆಟೋ ಚಾಲಕ

ಅರ್ಧ ಗಂಟೆಗಳ ಕಾಲ ಸಂಚರಿಸುವವರು ನಮ್ಮ ಆಟೋಗಳನ್ನು ಹುಡುಕಿಕೊಂಡು ಬರುತ್ತಾರೆ. ಅದರಲ್ಲೂ ಕೆಲವರು ಪುಸ್ತಕವನ್ನು ಪೂರ್ತಿ ಓದಿ ಮುಗಿಸಿದವರು ಇದ್ದಾರೆ. ಇದರಿಂದಾಗಿ ತಿಂಗಳಿಗೊಮ್ಮೆ ಪುಸ್ತಕ ಬದಲಾಯಿಸಲಾಗುವುದು.
●ರೇವಣ್ಣ, ಮಲ್ಲೇಶ್ವರದ ಚಾಲಕ

ಕನ್ನಡ ಭಾಷೆ ಬಗ್ಗೆ ಜಾಗೃತಿ ಮೂಡಿಸಲು, ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಗರಾದ್ಯಂತ ಮಾಡುವ ಯೋಚನೆ ಹೊಂದಿದ್ದೇವೆ.
●ಮಧುಶ್ರೀ, ಸಂಸ್ಥಾಪಕ ಅಧ್ಯಕ್ಷೆ, ಅಕ್ಷರ ಚಪ್ಪರ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆ

ಭಾರತಿ ಸಜ್ಜನ್‌

ಟಾಪ್ ನ್ಯೂಸ್

yashapal

Udupi: ಮಹಾಲಕ್ಷ್ಮೀ ಕೋ-ಆಪ್‌ ಬ್ಯಾಂಕ್‌ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್‌

sulya-kadaba

Elephant: ಕಡಬದ ಐನೆಕಿದು, ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ

Mahe-Convo

MAHE Convocation: ಕ್ಲಿಕ್‌ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್‌ ಭಟ್ಟಾಚಾರ್ಯ ಸಲಹೆ

1-shah

Rahul Gandhi ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಅಮಿತ್‌ ಶಾ

rahul-gandhi

GST; ಬಡವರನ್ನು ಕೊ*ಲ್ಲಲು ಮೋದಿಯ ಅಸ್ತ್ರ: ರಾಗಾ ಹೇಳಿದ್ದೇನು?

Kharge (2)

Mallikarjuna Kharge; ದೇಶ ಒಗ್ಗೂಡಿಸಲು ಪ್ರಾಣ ತ್ಯಾಗ ಮಾಡಿದ್ದು ಕಾಂಗ್ರೆಸ್‌ ನಾಯಕರು

Priyank-Kharghe

Covid Scam: ಕೋವಿಡ್‌ ಹಗರಣಕ್ಕೆ ತಾರ್ಕಿಕ ಅಂತ್ಯ ಅಗತ್ಯ: ಸಚಿವ ಪ್ರಿಯಾಂಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ನೇಣು ಬಿಗಿದು ಆತ್ಮಹತ್ಯೆ  

Puttur: ನೇಣು ಬಿಗಿದು ಆತ್ಮಹತ್ಯೆ  

16-bng

Bengaluru: ಲಾಲ್‌ಬಾಗ್‌ ಪ್ರವೇಶ ಶುಲ್ಕ 50 ರೂಪಾಯಿಗೆ ಏರಿಕೆ

15-bng

Bengaluru: ವಿದ್ಯಾರ್ಥಿಯ ಹಲ್ಲು ಮುರಿದ ಶಿಕ್ಷಕಿ!

14-bng

Bengaluru: ವ್ಯಾಪಾರಿ ಮನೆಯಲ್ಲಿ ಕೇಜಿಗಟ್ಟಲೆ ಚಿನ್ನ, ಹಣ ಕದ್ದ ಗಾರ್ಡ್‌!

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

yashapal

Udupi: ಮಹಾಲಕ್ಷ್ಮೀ ಕೋ-ಆಪ್‌ ಬ್ಯಾಂಕ್‌ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್‌

sulya-kadaba

Elephant: ಕಡಬದ ಐನೆಕಿದು, ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ

Mahe-Convo

MAHE Convocation: ಕ್ಲಿಕ್‌ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್‌ ಭಟ್ಟಾಚಾರ್ಯ ಸಲಹೆ

1-shah

Rahul Gandhi ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಅಮಿತ್‌ ಶಾ

rahul-gandhi

GST; ಬಡವರನ್ನು ಕೊ*ಲ್ಲಲು ಮೋದಿಯ ಅಸ್ತ್ರ: ರಾಗಾ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.