ವಿಂಧ್ಯಗಿರಿ ಹತ್ತಿಳಿದ ಸಿದ್ದರಾಮಯ್ಯ
Team Udayavani, Feb 18, 2018, 6:00 AM IST
ಹಾಸನ: ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲು ಅಗಮಿಸಿದ ಮುಖ್ಯಮಂತಿ ಸಿದ್ದರಾಮಯ್ಯ ಅಹಿಂಸಾ ತತ್ವ ಮೆರೆದು, ಡೋಲಿ ಬಳಸದೇ ವಿಂಧ್ಯಗಿರಿಯ 618 ಮೆಟ್ಟಿಲುಗಳನ್ನು ಏರಿಳಿದರು.
ನಿಗದಿತ ಕಾರ್ಯಕ್ರಮದ ಪ್ರಕಾರ ಮುಖ್ಯಮಂತ್ರಿ ಅವರು ಮಧ್ಯಾಹ್ನ 2 ಗಂಟೆಗೆ ಡೋಲಿ ಮೂಲಕ ವಿಂಧ್ಯಗಿರಿ ಹತ್ತಿ ಬಾಹುಬಲಿಮೂರ್ತಿಯ ಮಹಾಮಸ್ತಕಾಭಿಷೇಕ ನೆರವೇರಿಸಬೇಕಿತ್ತು. ಅದರೆ ಮೆಟ್ಟಿಲುಗಳ ಬಳಿ ಬಂದ ತಕ್ಷಣ ಡೋಲಿ ಹತ್ತಲು ನಿರಾಕರಿಸಿದರು. ಮೆಟ್ಟಿಲು ಹತ್ತಿಯೇ ಬಾಹುಬಲಿಮೂರ್ತಿಯ ಅಭಿಷೇಕ ಮಾಡುವ ನಿರ್ಧಾರ ಪ್ರಕಟಿಸಿ ಉರಿ ಬಿಸಿಲಿನಲ್ಲಿಯೇ ಬೆಟ್ಟ ಹತ್ತಲು ಅರಂಭಿಸಿದರು.
ಮುಖ್ಯಮಂತ್ರಿಯವರ ಜೊತೆ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಕನ್ನಡ ಮತ್ತು ಸಂಸ್ಕತಿ ಸಚಿವೆ ಉಮಾಶ್ರೀ ಅವರೂ ಮುಖ್ಯಮಂತ್ರಿಯವರ ಜೊತೆ ಮೆಟ್ಟಿಲು ಮೂಲಕವೇ ವಿಂಧ್ಯಗಿರಿ ಹತ್ತಿದರು, ಬಾಹುಬಲಿ ಮೂರ್ತಿಯ ಅಟ್ಟಣಿಗೆ ಬಳಿ ಆಗಮಿಸಿ ಲಿಫ್ಟ್ ಮೂಲಕ ಬಾಹುಬಲಿ ಮೂರ್ತಿಯ ಮಸ್ತಕದತ್ತ ಮೇಲೇರಿದ ಸಿಎಂ ಮಧ್ಯಾಹ್ನ 3.35ಕ್ಕೆ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ನೆರವೇರಿಸಿದರು.
ಮುಖ್ಯಮಂತ್ರಿ ಜೊತೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿಲ್ಲಾ ಮಂತ್ರಿ ಎ.ಮಂಜು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಧರ್ಮಸ್ಥಳದ ಧಾರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಜಲಾಭಿಷೇಕಕ್ಕೆ ಕೈ ಜೋಡಿಸಿದರು. ಅಭಿಷೇಕ ನೆರವೇರಿಸಿದ ನಂತರ ಅಟ್ಟಣೆಗೆ ಮೇಲಿಂದಲೆ ಜನರತ್ತ ಕೈ ಮುಗಿದು ಧನ್ಯತಾಭಾವ ವ್ಯಕ್ತಪಡಿಸಿದರು.
ಅಭಿಷೇಕ ನೇರವೇರಿಸಿದ ನಂತರ ಬಾಹುಬಲಿ ಮೂರ್ತಿಯ ಪ್ರವೇಶ ದ್ವಾರದ ಬಳಿ ಕಾಯುತ್ತ ಕುಳಿತ್ತಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಹುಬಲಿ ಮೂರ್ತಿಯ ನೆಲೆಯಲ್ಲಿ ಅಹಿಂಸಾ ತತ್ವ ಪಾಲನೆ ಮಾಡಬೇಕೆಂದು ಅನಿಸಿತು. ಹಾಗಾಗಿ ಡೋಲಿ ಏರದೇ ಮೆಟ್ಟಿಲ ಮೂಲಕ ಮೇಲಕ್ಕೆ ಬಂದೆ ಎಂದು ಸ್ಪಷ್ಟಪಡಿಸಿದರು.
ಮಹಾಮಸ್ತಕಾಭಿಷೇಕಕ್ಕೆ ನೆರವು ನೀಡುವುದು ಸರ್ಕಾರದ ಜವಬ್ದಾರಿಯಾಗಿದ್ದು, ಹಾಗಾಗಿ ಯಾವುದೇ ಕೊರೆತೆ ಆಗದಂತೆ ಸಹಕರಿಸಿದ್ದೇನೆ. ಇದರಲ್ಲಿ ವಿಶೇಷವೇನು ಇಲ್ಲ ಎಂದು ಸ್ವಾಮೀಜಿಯವರ ಧನ್ಯವಾದಕ್ಕೆ ವಿನಯದಿಂದ ನುಡಿದರು. ಈ ಸಂದರ್ಭದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ, ಮಹಾಮಸ್ತಕಾಭಿಷೇಕ ರಾಜ್ಯ ಸಮತಿ ಸಹ ಅಧ್ಯಕ್ಷ ಕೆ.ಅಭಯಚಂದ್ರ ಜೈನ್, ವಿಶೇಷಾಧಿಕಾರಿ ರಾಕೇಶ್ ಸಿಂಗ್, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮತ್ತಿತರರು ಹಾಜರಿದ್ದರು.
ವಿಂದ್ಯಗಿರಿಯನ್ನು ಮೆಟ್ಟಿಲುಗಳ ಮೂಲಕವೇ ಇಳಿದು ಅತಿಥಿಗೃಹದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದು ಸಂಜೆ 4.45 ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.