ಶ್ರೀಗಳ ಹೇಳಿಕೆ ಬಿಜೆಪಿ ಕುತಂತ್ರ


Team Udayavani, Sep 15, 2017, 6:00 AM IST

14BNP-(11).jpg

ಬೆಂಗಳೂರು: ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದ ಕುರಿತು ಸಿದ್ದಗಂಗಾ ಶ್ರೀಗಳು ಹೊರಡಿಸಿರುವ ಪತ್ರಿಕಾ ಹೇಳಿಕೆಯ ಹಿಂದೆ ಬಿಜೆಪಿ ನಾಯಕರಾದ ಯಡಿಯೂರಪ್ಪ ಮತ್ತು  ವಿ.ಸೋಮಣ್ಣ ಅವರ ಷಡ್ಯಂತ್ರ ಇದೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಖಂಡರು ಆರೋಪಿಸಿದ್ದಾರೆ.

ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರ ಹೇಳಿಕೆ ಸಮರ್ಥಿಸಲು ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ವಿಧಾನ ಪರಿಷತ್‌ ಸದಸ್ಯ ಬಸವರಾಜ್‌ ಹೊರಟ್ಟಿ, ಸಚಿವ ವಿನಯ್‌ ಕುಲಕರ್ಣಿ, ಶಾಸಕ ಬಿ.ಆರ್‌. ಪಾಟೀಲ್‌, ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ, ಡಾ. ಜಯಣ್ಣ  ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ನಾಯಕರು ಸಿದ್ದಗಂಗಾ ಶ್ರೀಗಳ ಪತ್ರಿಕಾ ಹೇಳಿಕೆಯನ್ನು ಸಂಪೂರ್ಣ ವಿರೋಧಿಸಲಿಕ್ಕಾಗದೇ, ಎಂ.ಬಿ. ಪಾಟೀಲರ ಹೇಳಿಕೆಯನ್ನು ಅಲ್ಲಗಳೆಯಲಾಗದೇ ಸಂದಿಗ್ಧ ಪರಿಸ್ಥಿತಿ ಎದುರಿಸುವಂತಾಯಿತು.

ಈ ಸಂದರ್ಭದಲ್ಲಿ ಸಿದ್ದಗಂಗಾ ಶ್ರೀಗಳು ಎಂ.ಬಿ. ಪಾಟೀಲರ ಮುಂದೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಬೆಂಬಲ ಸೂಚಿಸಿರುವುದನ್ನು ಮಠದ ಆಡಳಿತಾಧಿಕಾರಿ ಶಿವಕುಮಾರ್‌ ಎನ್ನುವವರು ಖಾಸಗಿ ಚಾನೆಲ್‌ನ ಸಂದರ್ಶನದಲ್ಲಿ ಖಾತ್ರಿ ಪಡಿಸಿದ್ದಾರೆ ಎಂದು ಅವರ ಆಡಿಯೋ ರಿಕಾರ್ಡ್‌ ಕೇಳಿಸಲಾಯಿತು.

ಹಾಗಾದರೆ, ಸ್ವಾಮೀಜಿಯ ಪತ್ರಿಕಾ ಹೇಳಿಕೆ ಸುಳ್ಳೇ ಎಂಬ ಪ್ರಶ್ನೆಗೆ ಸಚಿವ ವಿನಯ್‌ ಕುಲಕರ್ಣಿ ಉತ್ತರಿಸಿ, ಸ್ವಾಮೀಜಿಗಳ ಹೇಳಿಕೆಯನ್ನು ನಾವು ಸುಳ್ಳು ಎಂದು ಹೇಳುತ್ತಿಲ್ಲ. ಆದರೆ, ಎಂ.ಬಿ. ಪಾಟೀಲರ ಮುಂದೆ ಅವರು ಹೇಳಿರುವ ಹೇಳಿಕೆಯೂ ಸತ್ಯ. ಅದನ್ನು ಮಠದ ಆಡಳಿತಾಧಿಕಾರಿಯೇ ಹೇಳಿದ್ದಾರೆ. 

ಆದರೆ, ಸ್ವಾಮೀಜಿಯ ಹೇಳಿಕೆಯಿಂದ ಆತಂಕಕ್ಕೊಳಗಾದವರು ಒಂದೇ ದಿನ ಮಠದಿಂದ ಎರಡು ಬೇರೆ ಬೇರೆ ಪತ್ರಿಕಾ ಪ್ರಕಟಣೆಗಳು ಬಿಡುಗಡೆಯಾಗುವಂತೆ ನೋಡಿಕೊಂಡಿದ್ದಾರೆ ಎಂದರೆ, ಅದರ ಹಿಂದೆ ಬಿಜೆಪಿಯ ಷಡ್ಯಂತ್ರ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎಂ.ಬಿ. ಪಾಟೀಲರ ಹೇಳಿಕೆ ಬಂದ ಮೇಲೆ ಎರಡು ದಿನ ಕಾಯಿರಿ ಎಂದಿದ್ದು, ವಿ. ಸೋಮಣ್ಣ  ಧರ್ಮದ ವಿಷಯದಲ್ಲಿ ಎಂದೂ ಮಾತನಾಡದವರು ಏಕಾಏಕಿ ಮಾತನಾಡಿ ಮಠವನ್ನು ಗುತ್ತಿಗೆ ಪಡೆದವರಂತೆ  ಆಡುತ್ತಿದ್ದಾರೆ ಎಂದು ದೂರಿದರು.

ಒಂಬೈನೂರು ವರ್ಷಗಳ ಹಿಂದೆಯೇ ಕೊಂಡಿ ಮಂಚಣ್ಣರು ಬಸವಣ್ಣನನ್ನು ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ. ಈಗ ಎಂ.ಬಿ. ಪಾಟೀಲ್‌ ಯಾವ ಮರದ ಎಲೆ. ಆದರೆ, ಷಡ್ಯಂತ್ರ ಮಾಡುವವರ ವಿರುದ್ಧ ಲಕ್ಷಾಂತರ ಎಂ.ಬಿ. ಪಾಟೀಲರಿದ್ದೇವೆ. ಎಂ.ಬಿ. ಪಾಟೀಲರ ಬಗ್ಗೆ ಮಾತನಾಡುವ ಸೋಮಣ್ಣ ಶಾಸಕ ಆಗುವ ಮೊದಲು ಏನಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸಮಾಜದ ದಾರಿ ತಪ್ಪಿಸುವ ಷಡ್ಯಂತ್ರ ರೂಪಿಸಿರುವ ಸೋಮಣ್ಣ ಈ ಸಮಾಜಕ್ಕೆ ದ್ರೋಹ ಮಾಡಿದಂತೆ ಎಂದು ವಾಗ್ಧಾಳಿ ನಡೆಸಿದರು.

ಬಸವರಾಜ್‌ ಹೊರಟ್ಟಿ ಕೂಡ, ಎಂ.ಬಿ. ಪಾಟೀಲರ ಹೇಳಿಕೆಯನ್ನು ಬೆಂಬಲಿಸಿ, ಸಿದ್ದಗಂಗಾ ಮಠದಿಂದ ಒಂದೇ ದಿನ ಎರಡು ಪತ್ರಿಕಾ ಪ್ರಕಟಣೆಗಳು ಬಂದಿದ್ದು, ಎರಡನೇ ಪತ್ರಿಕಾ ಪ್ರಕಟಣೆಯಲ್ಲಿ ಸ್ವಾಮೀಜಿಯ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಆರೋಪಿಸಿದರು. ಹೇಳಿಕೆ ಬರೆದಿರುವುದರ ಹಿಂದೆ ಬೇರೆಯವರ ಕೈವಾಡ ಇದೆ.

ಸ್ವಾಮೀಜಿಯ ಹೇಳಿಕೆ ಮತ್ತು ಪತ್ರಿಕಾ ಪ್ರಕಟಣೆ ಎರಡನ್ನೂ ನಾವು ಅಲ್ಲಗಳೆಯುವುದಿಲ್ಲ. ಅವರ ಹೆಸರನ್ನು ದುರುಪಯೋಗಪಡಿಕೊಂಡು ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಯಾರೂ ಸ್ವಾಮೀಜಿಯನ್ನು ಎಳೆದು ತರುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿಕೊಂಡರು.

ಕ್ಷಮೆ ಕೇಳಿದ ಹೊರಟ್ಟಿ: ಸ್ವಾಮೀಜಿಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಶಿವ ಕುಮಾರ ಅವರು ಆಡಳಿತಾಧಿಕಾರಿ ಎಂದು ಪತ್ರಿಕಾಗೋಷ್ಠಿ ನಡೆಸುವವರು ಸಮರ್ಥಿಸಿಕೊಂಡಿದ್ದರು. ಆದರೆ, ಅವರು ಅಟೆಂಡರ್‌ ಎಂಬ ಮಾತು ಕೇಳಿ ಬಂದಾಗ ಅವರು ಯಾರಾದರೇನು ನಮಗೆ ಅವರ ಹೇಳಿಕೆ ಮುಖ್ಯವೆಂದು ನಾಯಕರು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. ಅಟೆಂಡರ್‌ ಹೇಳಿಕೆಯನ್ನು ಸಮರ್ಥಿಸುವ ನೀವು ಸ್ವಾಮೀಜಿಯ ಹೇಳಿಕೆ ಬಗ್ಗೆ ವಿರೋಧಿಸುತ್ತಿದ್ದೇರೇಕೆ ಎಂಬ ಪ್ರಶ್ನೆಗೆ ಎಲ್ಲರೂ ಗೊಂದಲಕ್ಕೊಳಗಾದರು. ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಶಾಸಕ ಬಿ.ಆರ್‌.ಪಾಟೀಲ್‌ ನಿಮ್ಮ ಎಲ್ಲ ಪ್ರಶ್ನೆಗೂ ಉತ್ತರ ಕೊಡಬೇಕಾಗಿಲ್ಲ ಎಂದು ಹೇಳಿದರು. ಅವರ ಹೇಳಿಕೆಯಿಂದ ಪತ್ರಕರ್ತರು ಅವರ ಮಾತನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದರು. ನಂತರ ಬಸವರಾಜ್‌ ಹೊರಟ್ಟಿ ಕ್ಷಮೆ ಯಾಚಿಸಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಯಾರೂ ಸಿದ್ದಗಂಗಾ ಶ್ರೀಗಳನ್ನು ಎಳೆದು ತರುವುದು ಬೇಡ ಎಂದು ಮನವಿ ಮಾಡಿಕೊಂಡರು.

ಡಾ. ಜಯಣ್ಣ  ಎಂ.ಬಿ ಪಾಟೀಲ್‌ ಆಪ್ತ ಹೇಳಿದ್ದು:
ಸೆಪ್ಟಂಬರ್‌ 10 ರಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಅವರು ತುಮಕೂರಿನಲ್ಲಿ ನಡೆದ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್‌ ಬೆಂಗಳೂರಿಗೆ ಬರುವಾಗ ನಾನೂ ಅವರೊಂದಿಗೆ ಇದ್ದೆ. ಶ್ರೀಮಠದಿಂದ ಕರೆ ಮಾಡಿ, ಸ್ವಾಮೀಜಿ ಭೇಟಿ ಮಾಡಿ ಪ್ರಸಾದ ತೆಗೆದುಕೊಂಡು ಹೋಗಬೇಕೆಂದು ಹೇಳಿದ್ದಾರೆ. ತಕ್ಷಣ ಪಾಟೀಲರು ಮಠಕ್ಕೆ ತೆರಳಿದಾಗ ಸ್ವಾಮೀಜಿ ಪೂಜೆಗೆ ಹೋಗಿದ್ದರು, ಅವರು ಬರುವಷ್ಟರಲ್ಲಿ ಪಾಟೀಲರು ಪ್ರಸಾದ ತೆಗೆದುಕೊಂಡು ಬಂದು ಸ್ವಾಮೀಜಿಯವರು ಜೊತೆಗೆ ಮಾತನಾಡುತ್ತಾರೆ. ಸ್ವಾಮೀಜಿ ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೆಂದು ಹೇಳುತ್ತಾರೆ. ಈ ಬಗ್ಗೆ ಸ್ವಾಮೀಜಿಯ ಸೇವಕ ಆರಾಧ್ಯ ಎನ್ನುವವರು, ಸ್ವಾಮೀಜಿ ಅವರು ಲಿಂಗಾಯತ ಪ್ರತ್ಯೇಕ ಆಗಬೇಕು ಅನ್ನುತ್ತಿದ್ದಾರೆ ಎಂದಾಗಲೂ ಲಿಂಗಾಯತ ಧರ್ಮ ಆಗಬೇಕು, ವೀರಶೈವ ಇತ್ತೀಚಿನದು ಎಂದು ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಸ್ವಾಮೀಜಿ ಹೇಳಿಕೆಯನ್ನು ಕೇಳಿ ಎಂ.ಬಿ. ಪಾಟೀಲ್‌ ಬಾವುಕರಾಗಿ ಸ್ವಾಮೀಜಿ ನಿಮ್ಮ ಆಶೀರ್ವಾದ ಆಯಿತು. ಈಗ  ನನ್ನ ಜೀವನ ಪಾವನ ಆಯಿತು. ಇನ್ನು ಮುಂದೆ ನನ್ನ ಜೀವನವನ್ನು ಈ ಹೋರಾಟಕ್ಕೆ ಮೀಸಲಿಡುತ್ತೇನೆ ಎಂದು ಎಂ.ಬಿ. ಪಾಟೀಲ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.  ಶಿವಕುಮಾರ ಸ್ವಾಮೀಜಿ ಯಾವ ನಾಯಕರನ್ನು ಬೆಳೆಸುವ ಅಥವಾ ತುಳಿಯುವ ಕೆಲಸ ಮಾಡಿಲ್ಲ. ರಾಜಕೀಯ ನಾಯಕರು ಮಠವನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಹೇಳಿದರು.

ವೀರಶೈವ ಲಿಂಗಾಯತ ಎರಡೂ ಒಂದಾಗಬೇಕೆಂಬ ಮಾತುಕತೆ ಆರಂಭವಾಗಿದೆ. ಅವರು ನಮ್ಮ ಮಾತುಗಳಿಗೆ ಬೆಲೆ ಕೊಟ್ಟರೆ, ಹೊಂದಿಕೊಂಡು ಹೋಗುತ್ತೇವೆ ಇಲ್ಲದಿದ್ದರೆ, ನಮ್ಮ ಹೋರಾಟ ಪ್ರತ್ಯೇಕವಾಗಿ ಮುಂದುವರೆಯುತ್ತದೆ.
– ಬಸವರಾಜ ಹೊರಟ್ಟಿ, ಹಿರಿಯ ವಿಧಾನ ಪರಿಷತ್‌ ಸದಸ್ಯ

ಎಂ.ಬಿ. ಪಾಟೀಲ್‌ ಹೇಳಿಕೆ ನೂರಕ್ಕೆ ನೂರು ಸತ್ಯ. ಸ್ವಾಮೀಜಿ ಬೆಂಬಲದಿಂದ ಸಂಘ ಪರಿವಾರದವರು ಆತಂಕಕ್ಕೊಳಗಾಗಿದ್ದಾರೆ. ಅದು ದೆಹಲಿಗೆ ಮುಟ್ಟಿಸಿ ತಕ್ಷಣ ಶ್ರೀಗಳ ಸಂದೇಶ ಬದಲಾಯಿಸುವಂತೆ ಒತ್ತಡ ತಂದಿದ್ದಾರೆ. ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದವರೇ ಈ ಷಡ್ಯಂತ್ರ ನಡೆಸಿದ್ದಾರೆ. ಎಂ.ಬಿ ಪಾಟೀಲ್‌ ಸ್ವಂತಕ್ಕಾಗಿ ಈ ಹೋರಾಟ ನಡೆಸುತ್ತಿಲ್ಲ. ಈ ಬೆಳವಣಿಗೆಯಿಂದ ಅವರ ಕುಟುಂಬ ಸಾಕಷ್ಟು ನೊಂದಿದೆ. ನಾವೆಲ್ಲ ಅವರೊಂದಿಗಿದ್ದೇವೆ.
– ಬಿ.ಆರ್‌. ಪಾಟೀಲ್‌, ಶಾಸಕ

ನಮ್ಮ ಹೋರಾಟವನ್ನು ಹತ್ತಿಕ್ಕಲು ನಮ್ಮ ತಂಡದ ನಾಯಕರನ್ನು ಬೇರ್ಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಎಂ.ಬಿ. ಪಾಟೀಲರನ್ನು ದೂರ ಮಾಡಿದರೆ ನಮ್ಮ ಹೋರಾಟ ನಿಂತು ಬಿಡುತ್ತದೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಈ ಘಟನೆಯಿಂದ ಎಂ.ಬಿ. ಪಾಟೀಲರ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ನಮ್ಮ ಈ ಹೋರಾಟ ನಿಲ್ಲುವುದಿಲ್ಲ.
– ಎಸ್‌.ಎಂ. ಜಾಮದಾರ, ನಿವೃತ್ತ ಐಎಎಸ್‌ ಅಧಿಕಾರಿ.

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.